ಗುರು ಮಾರ್ಗದರ್ಶನ, ಸಂಸ್ಕಾರಗಳು ಬದುಕಿಗೆ ಅವಶ್ಯ: ಬನ್ನಿಕೊಪ್ಪದ ಶ್ರೀ
ಹೂವಿನಹಡಗಲಿ ನವೆಂಬರ್ 04: ಮಾನವನ ಬದುಕಿನ ಸದ್ಗತಿಗೆ ಗುರುಗಳ ಮಾರ್ಗದರ್ಶನ ಹಾಗೂ ಸಂಸ್ಕಾರಗಳು ಅವಶ್ಯ ಎಂದು ಬನ್ನಿಕೊಪ್ಪ ಮಠದ ಮುಮ್ಮಡಿ ಡಾ.ಸುಜ್ಞಾನ ಶಿವಾಚಾರ್ಯ ಸ್ವಾಮೀಜಿ ಸ್ವಾಮೀಜಿ ಹೇಳಿದರು.
ತಾಲೂಕಿನ ನವಲಿ ಗ್ರಾಮದಲ್ಲಿ ಏರ್ಪಡಿಸಿದ ಸಿಂಗಟಾಲೂರು ವೀರಭದ್ರಸ್ವಾಮಿಯ 53ನೇ ವರ್ಷದ ಪುರ ಪ್ರವೇಶದ ಧರ್ಮಸಭೆಯ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಧರ್ಮದ ನಂಬಿಕೆ, ಆಚಾರ ವಿಚಾರಗಳಿಂದ ಮಾನವ ಜೀವನ ಕಟ್ಟಿಕೊಳ್ಳಲು ಸಾಧ್ಯ ಎಂದರು. ಪ್ರತಿಯೊಂದು ಜೀವಿಯೂ ಪರಮಾತ್ಮನ ಅಂಶವಾಗಿರುವುದರಿಂದ ನಡೆ-ನುಡಿಗಳ ಮೂಲಕ ಮುಂದಿನ ಪೀಳಿಗೆಗೆ ಪುರದ ಚಂದ್ರಶೇಖರ ಸ್ವಾಮೀಜಿಯವರು ಹಾಕಿಕೊಟ್ಟ ಈ ಪರಂಪರೆ ಉಳಿಸಬೇಕಿದೆ ಎಂದು ಹೇಳಿದರು.
ನಂತರ ಅಂಗೂರಿನ ಕೆ.ಸಿ.ಪರಶುರಾಮ ತಂಡದವರು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕಲಾವಿದರಾದ ಜಿ.ಕೆ.ಮಾರುತಿ, ಬಿ.ಅಣ್ಣಪ್ಪ, ಕೆ.ಅಶೋಕ, ಎಂ.ತಿಮ್ಮಣ್ಣ, ಬಿ.ಎಂ.ಪರಶುರಾಮ್, ಕೆ.ದುರ್ಗೇಶ್, ಪರಶುನಾಯ್ಕರ್ ಸಂಗೀತ ಕಾರ್ಯಕ್ರಮ ನೀಡಿದರು.
ಕಲಾವಿದ ಅರ್ಜುನ ಪರಸಪ್ಪ ಪ್ರಾರ್ಥಿಸಿದರು. ಗುಡದಪ್ಪ ಸ್ವಾಗತಿಸಿದರು. ಉಪನ್ಯಾಸಕ ಗುರುಬಸವರಾಜಯ್ಯ ನಿರ್ವಹಿಸಿದರು.