ಬೆಂಗಳೂರು 24: ಇಲಾಖಾ ಪರೀಕ್ಷೆಗೆ ಮೇಲಾಧಿಕಾರಿಯಿಂದ ಅನುಮತಿ ಪತ್ರ ಬೇಡ: ಕೆಪಿಎಸ್ ಸಿ ಆದೇಶ
ಬೆಂಗಳೂರು 24: ಲೋಕಸೇವಾ ಆಯೋಗ 2020ನೇ ಸಾಲಿನ ಪ್ರಥಮ ಇಲಾಖಾ ಪರೀಕ್ಷೆಗೆ ಮೇಲಾಧಿಕಾರಿಯಿಂದ ಅನುಮತಿ ಪತ್ರ (ಎನ್ ಒಸಿ) ಪಡೆಯುವ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.
2020ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಡಿಸೆಂಬರ್ 2019ರ ಅಧಿಸೂಚನೆಯಲ್ಲಿ ನೌಕರರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ತಮ್ಮ ಕಚೇರಿಯ ಮೇಲಾಧಿಕಾರಿಯಿಂದ ಎನ್ ಒಸಿ ಪಡೆಯುವುದು,ಮೇಲಾಧಿ ಕಾರಿ ಯಿಂದ ಲಿಖಿತ ಅನುಮತಿ ಪಡೆದು, ಆನ್‌ಲೈನ್ ಅರ್ಜಿಯೊಂದಿಗೆ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿತ್ತು.
ಇದೀಗ ಲೋಕಸೇವಾ ಆಯೋಗ ಈ ನಿಯಮವನ್ನು ಸಡಿಲಗೊಳಿಸಿದೆ.ಇಲಾಖಾ ಪರೀಕ್ಷಾ ರ್ಥಿ ನೌಕರರು ಮೇಲಾಧಿಕಾರಿಯಿಂದ ಎನ್ ಒಸಿ ಹಾಗೂ ಲಿಖಿತ ಅನುಮತಿ ಪತ್ರ ಪಡೆ ಯುವುದನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.ಹೀಗಾಗಿ ಪರೀಕ್ಷಾರ್ಥಿಗಳು ಅರ್ಜಿ ಸಲ್ಲಿಸುವಾಗ ತಮ್ಮ ಇಲಾಖೆಯ ಮೇಲಾಧಿಕಾರಿಗಳ ಅನುಮತಿ ಪಡೆಯುವ ಅಗತ್ಯ ಇಲ್ಲ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 