ಹೂವಿನ ಹಡಗಲಿ

ಬಂಜಾರ ಸಮುದಾಯದ ಸಂಸ್ಕೃತಿಯ ಶ್ರೀಮಂತ

ಬಂಜಾರ ಸಮುದಾಯದ ಸಂಸ್ಕೃತಿಯ ಶ್ರೀಮಂತ
Ban̄jāra samudāyada sanskr̥tiya śrīmanta

ಬಂಜಾರ ಸಮುದಾಯದ ಸಂಸ್ಕೃತಿಯ ಶ್ರೀಮಂತ  

ಹೂವಿನಹಡಗಲಿ 12 : ವಿಶಿಷ್ಟ ಭಾಷೆ,ವೇಷ ಭೂಷಣ,ಆಚಾರ ವಿಚಾರಗಳಲ್ಲಿ ವಿಭಿನ್ನತೆ, ಹಾಡು,ನೃತ್ಯ ಪ್ರಕಾರಗಳಲ್ಲಿ ಅನನ್ಯತೆಯನ್ನು ಹೊಂದಿರುವ ಬಂಜಾರ ಸಮುದಾಯವು ವೈವಿಧ್ಯ ಸಂಸ್ಕೃತಿಯಿಂದ ಶ್ರೀಮಂತವಾಗಿದೆ ಎಂದು ಶಿಕ್ಷಕಿ ಎಲ್‌.ಸಾವಿತ್ರಿ ಅಭಿಪ್ರಾಯಪಟ್ಟರು.   ತಾಲೂಕಿನ ಹಿರೇಹಡಗಲಿ  ವಿವೇಕಾನಂದ (ಡಿವೈನ್) ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ  ಕಸಾಪ ಹಡಗಲಿ, ಹಿರೇಹಡಗಲಿ ಹೋಬಳಿ ಘಟಕ ಆಯೋಜಿಸಿದ್ದ  ಶ್ರೀಮತಿ ಉಮ್ಲಿಬಾಯಿ ಥಾವರ್ಯನಾಯ್ಕ ಸ್ಮಾರಕ ದತ್ತಿ,ಶ್ರೀಮತಿ ಕೌಸಲ್ಯಾಬಾಯಿ ದೇವೇಂದ್ರನಾಯ್ಕ  ಪ್ರದೀಪ ಪಲ್ಲವಿ ದತ್ತಿ ಹಾಗೂ ಶ್ರೀಮತಿ ಲಕ್ಷ್ಮೀಬಾಯಿ ಪುರುಷೋತ್ತಮ ರೆಡ್ಡಿ ಸ್ಮಾರಕ ದತ್ತಿ ಉಪನ್ಯಾಸದಲ್ಲಿ  ’ಲಂಬಾಣಿ ಸಂಸ್ಕೃತಿ’ ಹಾಗೂ ’ಬಂಜಾರ ಜಾನಪದ ಸಿರಿ’ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಬಂಜಾರು ಮಹಿಳೆಯರು ಧರಿಸುವ ಉಡುಪುಗಳಲ್ಲಿ ಸಣ್ಣ ಸಣ್ಣ ಕನ್ನಡಿಗಳು,ಮಣಿ, ಕವಡೆ ಗಳನ್ನು  ವಿಶಿಷ್ಟ ಕಸೂತಿ ಕಲೆಯನ್ನು ಒಳಗೊಂಡಿದೆ ಜತೆಗೆ ಅವರ ಲಂಬಾಣಿ ನೃತ್ಯ, ಸಂಗೀತ ಅನನ್ಯ ಎಂದರು.   ಮಾಜಿ ಕಸಾಪ ಅಧ್ಯಕ್ಷೆ ಕೌಸಲ್ಯಬಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಬಗ್ಗೆ ಮಾತನಾಡಿದರು.  ಹೆಚ್‌.ಶಿವಬಸಪ್ಪ ಮಾತನಾಡಿ ವಿದ್ಯಾರ್ಥಿಗಳು ಸಾಹಿತ್ಯಿಕ, ಸಾಂಸ್ಕೃತಿಕ ವಿಷಯಗಳಲ್ಲಿ ಆಸಕ್ತಿ ಹೊಂದಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.ಸಂಸ್ಥೆಯ ಅಧ್ಯಕ್ಷೆ ಹೆಚ್‌.ಗಾನೆಶ್ವರಿ, ಮುಖ್ಯೋಪಾಧ್ಯಾಯಿನಿ ಹೆಚ್‌.ಕಾವ್ಯಾರಾಣಿ ಇದ್ದರು. ಅಧ್ಯಕ್ಷತೆ  ಕಸಾಪ ಹೋಬಳಿ ಘಟಕ ಅಧ್ಯಕ್ಷ  ಜಿ.ಎಸ್‌.ಸತೀಶ ಮಾತನಾಡಿದರು. 


ಸುದ್ದಿ ಓದಿ