ಹೂವಿನ ಹಡಗಲಿ

ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ಲೋಕದರ್ಶನ ವರದಿ 

ಹೂವಿನಹಡಗಲಿ 28:  ವಿಧಾನಸಭೆ ಅಧಿವೇಶನ ನಡೆಯಲು ಅವಕಾಶ ನೀಡದೆ ಕಾಂಗ್ರೆಸ್ ಕಾಲಹರಣ ಮಾಡಿದೆ ಎಂದು ಆರೋಪಿಸಿ ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ಸೋಮವಾರ ಬಿಜೆಪಿ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. 

ಬಿಜೆಪಿ ಮುಖಂಡರಾದ ಎಂ.ಬಿ.ಬಸವರಾಜ ಮಾತನಾಡಿ ಹರ್ಷನ ಕೊಲೆಮಾಡಿದ ಗೂಂಡಾಗಳನ್ನು ಕಾಂಗ್ರೆಸ್ ನವರು ಬೆಂಬಲಿಸುತ್ತಿದ್ದಾರೆ. ಮೇಕೆದಾಟು ಪಾದಯಾತ್ರೆ ನೆಪದಿಂದ ಕಾಂಗ್ರೆಸ್ ಮುಖಂಡರರು ಅಧಿವೇಶನ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಕಿಡಿಕಾರಿದ ಅವರು ಮುಂದಿನ ದಿನದಲ್ಲಿ ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸುತ್ತಾರೆ ಎಂದರು. 

ಬಿಜೆಪಿ ಜಿಲ್ಲಾ ಕಾರ‌್ಯದರ್ಶಿ ಹೆಚ್‌.ಪೂಜಪ್ಪ ಮಾತನಾಡಿ ವಿಧಾನಸಭೆ ಅಧಿವೇಶನ ನಡೆಯಲು ಅವಕಾಶ ನೀಡದೆ ಕಾಂಗ್ರೆಸ್ ಕಾಲಹರಣ ಮಾಡುತ್ತಿದೆ. ಹಿಂದುಗಳು, ರೈತರ ಜೀವಕ್ಕೆ ಕಾಂಗ್ರೆಸ್ ಪಕ್ಷ ಬೆಲೆ ಕೊಡುತ್ತಿಲ್ಲ ಜತೆಗೆ ಕಾಂಗ್ರೆಸ್ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿದೆ ಎಂದು ಆರೋಪಿಸಿದರು. ಈಟ.ಲಿಂಗರಾಜ ಮಾತನಾಡಿ ರಾಜ್ಯದ ಅಭಿವೃದ್ದಿ ಕಾಂಗ್ರೆಸ್ ಗೆ ಬೇಕಾಗಿಲ್ಲ ಮೇಕೆದಾಟುನಿಂದ ಅಧಿವೇಶನ ನಡೆಯಲು ಅವಕಾಶ ನೀಡದೆ ಕಾಂಗ್ರೆಸ್ ಕಾಲಹರಣ ಮಾಡುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.ಬಿಜೆಪಿ ಮಂಡಲ ಅಧ್ಯಕ್ಷ ಸಂಜೀವರೆಡ್ಡಿ ಮಾತನಾಡಿದರು.ಈ ಸಂದರ್ಭದಲ್ಲಿ ಮುಖಂಡರಾದ ಕೊಟ್ರೇಶನಾಯ್ಕ, ಶಶಿಧರಶೆಟ್ಟಿ, ಪುಟಾಣಿ ಬಸವರಾಜ,ಹಾಲೇಶನಾಯ್ಕ ಇದ್ದರು. 


ಸುದ್ದಿ ಓದಿ