ಬಿಇಓ ಎಚ್ ನಾಣಕೀ ನಾಯ್ಕ ಅವರಿಗೆ ರಾಜ್ಯ ಶಿಕ್ಷಣ ಸೇವಾ ರತ್ನ ಪ್ರಶಸ್ತಿ

ಬಿಇಓ ಎಚ್ ನಾಣಕೀ ನಾಯ್ಕ ಅವರಿಗೆ ರಾಜ್ಯ ಶಿಕ್ಷಣ ಸೇವಾ ರತ್ನ ಪ್ರಶಸ್ತಿ  BEO H Nanaki Naik gets State Education Seva Ratna Award

ಲಕ್ಷ್ಮೇಶ್ವರ 28: ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ನಾಣಕೀ ನಾಯ್ಕ ಅವರಿಗೆ ವಿಶ್ವ ವಿಜಯ ಪತ್ರಿಕೆ ಅವರು 21ನೇ ವರ್ಷಾಚರಣೆ ಅಂಗವಾಗಿ 2025- 26-ನೇ ಸಾಲಿನ ವಿವಿಧ ರಂಗದಲ್ಲಿ ಸಾಧನೆಗೈದ ಸಾಧಕರೆಂದು ಗುರುತಿಸಿ ರಾಜ್ಯ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದೆ.

ರಾಜ್ಯ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿಇಓ ಎಚ್ ನಾಣಕೀ ನಾಯ್ಕ ಅವರು ನಾವು ಯಾವುದೇ ಸರ್ಕಾರಿ ಹುದ್ದೆಯಲ್ಲಿ ಇರಲಿ ಅದನ್ನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಅದರಿಂದ ನಮಗೂ ಆತ್ಮ ತೃಪ್ತಿ ಇರುತ್ತದೆ. ನಾವು ಮಾಡುವ ಉತ್ತಮ ಕಾರ್ಯದಿಂದ ನಮ್ಮ ಘನತೆ ಗೌರವ ಸಹ ಹೆಚ್ಚುತ್ತದೆ. ಅದಕ್ಕೆ ರಾಜ್ಯ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದು ನನಗೆ ಸಂತೋಷ ತಂದಿದೆ ಎಂದರು.

ಈ ಸಮಯದಲ್ಲಿ ಶಿಕ್ಷಕರ ವೃಂದದವರು, ಮುಖಂಡರು, ಗಣ್ಯಮಾನ್ಯರು ಇದ್ದರು.