ಬಿ.ಕೆ. ಹರಿಪ್ರಸಾದ ಜನ್ಮದಿನ: ರೋಗಿಗಳಿಗೆ ಹಣ್ಣು ವಿತರಣೆ
B.K. Hariprasad's Birthday: Distribution of Fruits to Patients
ಹಾವೇರಿ, ಜು. 29: ಬಿ.ಕೆ. ಹರಿಪ್ರಸಾದ ಅಭಿಮಾನಿ ಬಳಗದ ವತಿಯಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಅವರ ಜನ್ಮದಿನವನ್ನು ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಎಂ.ಎನ್. ಮೈದೂರ, ಸತೀಶ ಈಳಗೇರ, ಪ್ರಭು ಬಿಷ್ಟನಗೌಡ್ರ, ಪ್ರಸನ್ನ ಹಿರೇಮಠ, ಬಸವರಾಜ ಬಳ್ಳಾರಿ, ಶಂಕರ ಸುತಾರ, ಬಸವೇಶಗೌಡ ಪಾಟೀಲ, ಜಮೀರ ಜಿಗರಿ, ಉಮೇದ ನದಾಫ, ಸೈಯದ್, ಉಮರ್ ಇನಾಮದಾರ, ಜಾಫರ್ ಅತ್ತಾರ, ಕರಬಸಣ್ಣ ಹಲಗಣ್ಣನವರ, ಸುರೇಶ ಈಳಗೇರ, ರಾಕೇಶ್ ಈಳಗೇರ, ಶಿವಯೋಗಣ್ಣ ಅರಿಶಿಣದ, ತೌಶಿಫ ದೊಡ್ಡಮನಿ, ಶರಣು ಹಿರೇಮಠ, ಚನ್ನಬಸಯ್ಯ ಲಕ್ಷ್ಮೇಶ್ವರಮಠ, ರಫೀಕ್ ನದಾಫ, ಇಸ್ಮಾಯಿಲ್ ಸಾಬ್, ಅತ್ತಾವುಲ್ಲಾ ಖಾಜಿ, ಅಬ್ದುಲ್ ಖಾದರ್ ಧಾರವಾಡ, ನವೀನ್ ಬಡಿಗೇರ ಸೇರಿದಂತೆ ಹಲವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ, ಅವರ ಆರೋಗ್ಯ ಶೀಘ್ರ ಸುಧಾರಿಸಲಿ ಎಂದು ಶುಭ ಹಾರೈಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 