ಹೂವಿನ ಹಡಗಲಿ

ಕಾಲ್ವಿ ತಾಂಡದಲ್ಲಿ ಆಯುಷ್ಯ ಸೇವಾ ಗ್ರಾಮ ಕಾರ್ಯಕ್ರಮ

ಕಾಲ್ವಿ ತಾಂಡದಲ್ಲಿ ಆಯುಷ್ಯ ಸೇವಾ ಗ್ರಾಮ ಕಾರ್ಯಕ್ರಮ

ಹೂವಿನಹಡಗಲಿ 22: ತಾಲ್ಲೂಕಿನ ಕಾಲ್ವಿ ಗ್ರಾಮ ಪಂಚಾಯಿತಿಯ ಕಾಲ್ವಿ ತಾಂಡದಲ್ಲಿ ಜಿಲ್ಲಾ ಆಯುಷ್ಯ ಇಲಾಖೆ ಬಳ್ಳಾರಿ ಹಾಗೂ ಆಯುಷ್ಯ ಆರೋಗ್ಯ ಕೇಂದ್ರ ಮತ್ತು ಕ್ಷೇಮ ಕೇಂದ್ರ ಉತ್ತಂಗಿ, ಇವರ ಸಹಯೋಗದಲ್ಲಿ ಎಸ್.ಸಿ.ಪಿ ಯೋಜನೆ ಅಡಿಯಲ್ಲಿ ಆಯುಷ್ಯ ಸೇವಾ ಗ್ರಾಮ ಕಾರ್ಯಕ್ರಮ ಆಯೋಜಿಸಿ ಮನೆಮನೆಗೆ ಭೇಟಿ ನೀಡಿ ಅನಾರೋಗ್ಯ ಪೀಡಿತರನ್ನ ಪರೀಕ್ಷಿಸಿ ಉಚಿತ ಔಷಧಿಗಳನ್ನ ವಿತರಿಸಲಾಯಿತು. ಮನೆಮದ್ದು ಪ್ರಾತ್ಯಕ್ಷಿಕೆಯನ್ನು, ಯೋಗಾಭ್ಯಾಸದ ಪ್ರಾತ್ಯಕ್ಷಿಕೆಯನ್ನು ತೋರಿಸಿ ಔಷಧಿ ಸಸ್ಯಗಳನ್ನ ವಿತರಿಸಿಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಪಶ್ಚಿಮ ಕಾಲ್ವಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ತಿಪ್ಪಾನಾಯ್ಕ ವಹಿಸಿದ್ದರು, ಪಶ್ಚಿಮ ಕಾಲ್ವಿ ಜಿಲ್ಲಾ ಪಂಚಾಯಿತಿ ಸದಸ್ಯೆ ಎಸ್.ಎಂ.ಲಲಿತಾ ಬಾಯಿ ಸೋಮಿನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ತಾಲ್ಲೂಕು ಪಂಚಾಯಿತಿ ಸದಸ್ಯೆ ರೇಣುಕಾ ಶಂಕರನಾಯ್ಕ, ಬಳ್ಳಾರಿ ಜಿಲ್ಲಾ ಆಯುಷ್ಯ ಅಧಿಕಾರಿ ಡಾ.   ವಿ.ಕೆ.ವರಪ್ರಸಾದ್, ಜಿಲ್ಲಾ ಆಯುಷ್ಯ ಕಛೇರಿಯ ಆಡಳಿತಾಧಿಕಾರಿ ಶರಣಬಸಪ್ಪ.ಎಸ್. ಜಿನಗಾ, ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯ ಲಾಲಸಿಂಗ ನಾಯ್ಕ, ಚಂನ್ನರಾಜ ನಾಯ್ಕ, ಭಾರತಿಬಾಯಿ, ದೇವಿಬಾಯಿ, ಭೀಮಾನಾಯ್ಕ, ಸವಿತಾಬಾಯಿ, ಪಿಡಿಓ ಮಂಜುನಾಥ, ಮುಖಂಡ ಉಮೇಶ ನಾಯ್ಕ, ಪ್ರಾಥಮಿಕ ಶಾಲೆಯ ಮುಖ್ಯಗುರು ಜಿ.ಮಲ್ಲಿಕಾರ್ಜುನ, ವೈದ್ಯಾಧಿಕಾರಿ ಡಾ. ಕೊಟ್ರಮ್ಮ, ಕಾರ್ಯಕ್ರಮ ಸಂಯೋಜಕ ಡಾ. ಪ್ರಕಾಶ್ ತಿಗರಿ, ಡಾ. ಮಂಜುನಾಥ ಹನಸಿ, ಡಾ. ಅಶೋಕ, ಡಾ. ಹಾಲಮ್ಮ, ಡಾ.ಪಣಿಂಧರ್, ಡಾ. ವಿಜಯಕುಮಾರ, ಡಾ. ಉಮಾಪಾಟೀಲ್, ಡಾ. ಗುರು ಮುರುಗೇಶ, ಆಶಾ ಕಾರ್ಯಕರ್ತರಾದ ರುಕ್ಮಿಣಿ, ಅಕ್ಕಮ್ಮ, ನಾಗವೇಣಿ, ಅಂಗನವಾಡಿ ಶಿಕ್ಷಕಿಯರಾದ ರುಕ್ಮಿಣಿ ಮತ್ತು ಕವಿತಾಬಾಯಿ ಹಾಗೂ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಹಾಗೂ ಆಯುಷ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಂಕರನಾಯ್ಕ ಪ್ರಾರ್ಥಿಸಿದರು, ಕಾರ್ಯಕ್ರಮ ಸಂಯೋಜಕ ಡಾ. ಪ್ರಕಾಶ ತಿಗರಿ ಸ್ವಾಗತಿಸಿದರು, ಡಾ.ವಿಜಯಕುಮಾರ ಪ್ರಾಸ್ತಾವಿಕ ನುಡಿ ನುಡಿದರು, ಡಾ. ಮಂಜುನಾಥ ತಿಗರಿ ನಿರೂಪಿಸಿದರು.

ಸುದ್ದಿ ಓದಿ