ಬಕ್ರೀದ್ ಹಬ್ಬದ ಪ್ರಯುಕ್ತ ಜಾಗೃತಿ ಜಾಥಾ
Awareness rally on the occasion of Bakrid festival
ಜಮಖಂಡಿ 06: ನಗರದ ಗ್ರಾಮೀಣ ಪೋಲಿಸ್ ಠಾಣೆಗೆ ಜಿಲ್ಲಾ ಡಿ,ಆರ್ ಚಿತಾ ಪೋಲಿಸ್ ತಂಡ ಆಗಮಿಸಿ. ಗ್ರಾಮೀಣ ಪ್ರದೇಶದಲ್ಲಿ ಚಿತಾ ಬೈಕ್‌ಗಳ ಮೂಲಕ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಬಕ್ರೀದ್ ಹಬ್ಬದ ಕುರಿತು ಮುಂಜಾಗ್ರತವಾಗಿ ಜಾಗೃತಿಯನ್ನು ಮೂಡಿಸಿದರು.
ತಾಲೂಕಿನ ಹಿಪ್ಪರಗಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಗ್ರಾಮೀಣ ಠಾಣೆಯ ಪೋಲಿಸರು ಮತ್ತು ಚಿತಾ ಬೈಕ್‌ಗಳ ಪೋಲಿಸರು ಪ್ರಮುಖ ರಸ್ತೆಯ ಮೂಲಕ ಸಂಚರಿಸಿದರು.
ಬಕ್ರೀದ್ ಹಬ್ಬದ ಕುರಿತು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ. ಹಿಂದು, ಮುಸ್ಲಿಂ ಎಂಬ ಭೇಧ, ಭಾವಗಳನ್ನು ಮರೆತು. ಎಲ್ಲ ಸಮಾಜದ ಭಾಂದವರು ಒಂದಾಗಿ ಸಹಬಾಳ್ವೆಯಿಂದ ಜೀವನ ಸಾಗಿಸುವದು ಹಾಗೂ ಯಾವುದೇ ಕೋಮು, ಗಲಭೆಗಳು ನಡೆಯದಂತೆ ಮುಂಜಾಗ್ರತವಾಗಿ ಜನತೆಯಲ್ಲಿ ಚಿತಾ ಬೈಕ್‌ಗಳ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್‌ಐ, ಗಂಗಾಧರ ಪೂಜಾರಿ, ಎಎಸ್‌ಐಗಳಾ ಕೆ,ಪಿ, ಸವದತ್ತಿ, ಎ,ಆಯ್, ಮಾಚಕನೂರ ಹಾಗೂ ಪೋಲಿಸ್ ಸಿಬ್ಬಂದಿಗಳು ಚಿತಾ ಬೈಕ್‌ಗಳ ಜಾಥಾದಲ್ಲಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 