7ರಂದು ಬಿಜೆಪಿಯಿಂದ ಶಾಸಕರ ವಿರುದ್ಧ ಜಾಗೃತಿ ಜಾಥಾ
ಹೂವಿನಹಡಗಲಿ 03: ಶಾಸಕ ಪಿ.ಟಿ. ಪರಮೇಶ್ವರನಾಯ್ಕರ ಭ್ರಷ್ಟಾಚಾರ, ಅವ್ಯವಹಾರ ವಿರುದ್ಧ ಬಿಜೆಪಿ ಪಕ್ಷದಿಂದ 7ರಂದು ಹೂವಿನಹಡಗಲಿಯಲ್ಲಿ ಜನ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಮಂಡಲ ಅಧ್ಯಕ್ಷ ಸಂಜೀವರೆಡ್ಡಿ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಅವರ ವಿರುದ್ಧ ಅದೇ ಪಕ್ಷದ ಮಾಜಿ ಶಾಸಕರು ಭ್ರಷ್ಟಾಚಾರ, ಶೇ.60ರಷ್ಟು ಕಮಿಷನ್ ಆರೋಪ ಮಾಡಿದ್ದಾರೆ.ಜತೆಗೆ ಶಾಸಕರು ಹರಪನಹಳ್ಳಿಯ ರಕ್ತ ಸಂಬಂಧಿಕರ ಹೆಸರಿನಲ್ಲಿ ಕಾಮಗಾರಿಗಳು ನಡೆಯುತ್ತಿದ್ದು,ಅವು ಸಂಪೂರ್ಣ ಕಳಪೆಯಾಗಿವೆ ಇದಕ್ಕೆ ಸಾಕ್ಷಿ ಬೇಕಾಗಿಲ್ಲ ಎಂದರು.
ಕ್ಷೇತ್ರದ ಅಭಿವೃದ್ದಿಯಿಂದ ಶಾಸಕರ 2ನೇ ಬಾರಿ ಗೆಲುವು ಅಲ್ಲ .ಬಿಜೆಪಿ ಗುಂಪುಗಾರಿಕೆಯಿಂದ ಗೆಲುವು ಆಗಿದೆ .ಶಾಸಕರ ವರ್ತನೆಯಿಂದ ಡಿವೈಎಸ್ಪಿ ಮಹಿಳೆ ವೃತ್ತಿ ಜೀವನ ಕೊನೆಗೊಳಿಸಿದ್ದು ಶಾಸಕರಿಗೆ ಸಲ್ಲುತ್ತದೆ. ಎಂ.ಪಿ.ಪ್ರಕಾಶ್ ರ ಅವಧಿಯಲ್ಲಿದ್ದ ಸಾಹಿತ್ಯ,ಸಾಂಸ್ಕೃತಿಕ ಚಟುವಟಿಕೆಗಳು ಇದೀಗ ಕಣ್ಮರೆಯಾಗಿವೆ ಜತೆಗೆ ಕ್ಷೇತ್ರದ ಅಭಿವೃದ್ದಿ ಕುಂಠಿತಗೊಂಡಿವೆ ಎಂದ ಅವರು ಮುಂಬರುವ ಚುನಾವಣೆಯಲ್ಲಿ ಶಾಸಕರಿಗೆ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದರು.
ಮಾಜಿ ಶಾಸಕ ಬಿ.ಚಂದ್ರನಾಯ್ಕ ಮಾತನಾಡಿ ಬಿಜೆಪಿ ಅವಧಿಯಲ್ಲಿ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ರೈತರ ಜಮೀನುಗಳಿಗೆ ನೀರು ಹರಿಸಲಾಗಿದೆ ಜತೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ,ಎಂಜೀನೀಯರಿಂಗ್ ಕಾಲೇಜು ಸೇರಿದಂತೆ ಸಾಕುಷ್ಟು ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳಲಾಗಿದೆ.ಲಾಟರಿ ಎಂಎಲ್ಎ ಈ ಬಾರಿ ಮತದಾರರು ಲಕ್ಷ್ಮೀಪುರ ತಾಂಡಕ್ಕೆ ಕಳಿಸುತ್ತಾರೆ ಎಂದು ಟೀಕಿಸಿದರು.
ಬಿಜೆಪಿ ಪಕ್ಷದ ಮುಖಂಡರಾದ ದೂದನಾಯ್ಕ, ಮಧುನಾಯ್ಕ,ಕೊಟ್ರೇಶ ನಾಯ್ಕ,ಶಿವಪುರ ಸುರೇಶ, ಎಲ್.ಕೆ.ರವಿಕುಮಾರ, ರಾಮನಾಯ್ಕ, ಜಿಲ್ಲಾ ಒಬಿಸಿ ಘಟಕದ ಅಧ್ಯಕ್ಷ ಈಟಿ.ಲಿಂಗರಾಜ,ವೀರೇಶ ಇದ್ದರು.