ಪಾರದರ್ಶಕತೆಯಿಂದ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡ ಸಹೃದಯ ಕಾವ್ಯ ಪ್ರಶಸ್ತಿ: ಬಸವರಾಜ ಜಗಜಂಪಿ

ಪಾರದರ್ಶಕತೆಯಿಂದ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡ ಸಹೃದಯ ಕಾವ್ಯ ಪ್ರಶಸ್ತಿ: ಬಸವರಾಜ ಜಗಜಂಪಿ Award ceremony

ಲೋಕದರ್ಶನ ವರದಿ 

ಬೆಳಗಾವಿ 08: ಸತತ ನಾಲ್ಕು ವರ್ಷಗಳಿಂದ ತನ್ನದೇ ಆದ ಪಾರದರ್ಶಕತೆ, ಗುಣಮಟ್ಟದಿಂದ ಯೋಗ್ಯ ಕೃತಿಗಳಿಗೆ ಪ್ರಶಸ್ತಿ ನೀಡುವ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಸಹೃದಯ ಸಾಹಿತ್ಯ ಪ್ರತಿಷ್ಠಾನದ ಕಾರ್ಯ ಅಭಿನಂದನಾರ್ಹವಾದುದು ಎಂದು ಜನಪದ ವಿದ್ವಾಂಸರು, ಹಿರಿಯ ಸಾಹಿತಿಗಳಾದ ಡಾ. ಬಸವರಾಜ ಜಗಜಂಪಿ ಹೇಳಿದರು. 

ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಏರಿ​‍್ಡಸಿದ ಸಹೃದಯ ಕಾವ್ಯ ಪ್ರಶಸ್ತಿ ಪ್ರದಾನ ಹಾಗೂ ಕವಿಗೋಷ್ಠಿ ಸಮಾರಂಭದಲ್ಲಿ ನಾಗರೇಖಾ ಗಾಂವಕರ ಹಾಗೂ ಲಕ್ಷ್ಮಿಕಾಂತ ಮಿರಜಕರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಪ್ರತಿಷ್ಠಾನದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ಇಂದು ಯುವ ಬರಹಗಾರರು ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಬರವಣಿಗೆ ಮೂಲಕ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಜನರ ನೋವಿಗೆ ಮಿಡಿಯುವ, ಜಗದ ದುಃಖಕ್ಕೆ ಸಾಂತ್ವನ ನೀಡುವ ಬರಹಗಳು ಬಹುಕಾಲ ಜನರ ನೆನಪಿನಲ್ಲಿ ಉಳಿಯುತ್ತವೆ. ಇಂದು ಪ್ರಶಸ್ತಿಗಾಗಿ ನಡೆಯುತ್ತಿರುವ ಲಾಬಿಗಳನ್ನು ಗಮನಿಸಿದರೆ ಮನಸಿಗೆ ನೋವಾಗುತ್ತದೆ. ಆದರೆ ಸಹೃದಯ ಪ್ರತಿಷ್ಠಾನವು ಇಂತಹ ಯೋಗ್ಯರಿಗೆ ನೀಡುವ ಪ್ರಶಸ್ತಿಗಳು ಖುಷಿಯನ್ನು ಕೊಡುತ್ತವೆ ಎಂದು ಡಾ. ಬಸವರಾಜ ಜಗಜಂಪಿ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ತೀರ​‍್ುಗಾರರಾದ ಡಾ. ಪಿ ಜಿ. ಕೆಂಪಣ್ಣವರ ಪ್ರಶಸ್ತಿ ಪಡೆದ ಎರಡು ಕೃತಿಗಳ ಕುರಿತು ಪರಿಚಯ ಮಾಡಿ ಈ ಎರಡು ಕೃತಿಗಳ ಆಯ್ಕೆ ನನಗೆ ತೃಪ್ತಿ ತಂದಿದೆ ಎಂದರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಎಲ್‌. ಎಸ್‌. ಶಾಸ್ತ್ರಿ ಅವರಿಗೆ ಪ್ರತಿಷ್ಠಾನದ ಸಹೃದಯ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರಾದ ನಾಗರೇಖಾ ಗಾಂವಕರ, ಲಕ್ಷ್ಮಿಕಾಂತ ಮಿರಜಕರ, ಎಲ್‌. ಎಸ್‌. ಶಾಸ್ತ್ರಿ, ಮುಖ್ಯ ಅತಿಥಿಗಳಾದ ಕಾರ್ಯಪಾಲಕ ಅಭಿಯಂತರ ವಿಠಲ ತಡಸಲೂರು ಅವರು ಮಾತನಾಡಿದರು. ಪ್ರತಿಷ್ಠಾನ ನಡೆಸಿಕೊಂಡು ಬಂದ ಕಾರ್ಯವಿಧಾನಗಳ ಬಗ್ಗೆ ಪ್ರಾಸ್ತವಾವಿಕವಾಗಿ ಅಧ್ಯಕ್ಷ ನಾಗೇಶ್ ಜೆ. ನಾಯಕ ಮಾತನಾಡಿದರು. ಇಂತಹ ಅಪರೂಪದ ಪ್ರಶಸ್ತಿ ಪ್ರದಾನ ಕಾರ್ಯ ನಮ್ಮ ಕುಂದಾನಗರಿಯಲ್ಲಿ ನಡೆಯುತ್ತಿರುವುದು ನಮ್ಮ ಸೌಭಾಗ್ಯ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಖ್ಯಾತ ರಂಗಕರ್ಮಿ ಶೀರೀಷ ಜೋಶಿ ನುಡಿದರು. 

ಇದೇ ಸಂದರ್ಭದಲ್ಲಿ ಯುವಕವಿಗಳಿಂದ ಕವಿತಾ ವಾಚನ ನಡೆಯಿತು. ವಿವಿಧ ಜಿಲ್ಲೆಗಳಿಂದ ಬಂದ ಹದಿನಾಲ್ಕು ಕವಿಗಳು ತಮ್ಮ ಸ್ವರಚಿತ ಕವಿತೆ ವಾಚನ ಮಾಡಿ ಕೇಳುಗರ ಮೆಚ್ಚುಗೆ ಗಳಿಸಿದರು. ಅನುಸೂಯಾ ಮೇಟ್ಯಾಲ ಪ್ರಾರ್ಥಿಸಿದರು. ಎಸ್‌. ಬಿ. ಗರಗದ ಸ್ವಾಗತಿಸಿದರು. ರಮೇಶ್ ತಳವಾರ ಗ್ರಂಥ ಸಮರ​‍್ಿಸಿದರು. ಬವರಾಜ ಪಟ್ಟಣಶೆಟ್ಟಿ ವಂದಿಸಿದರು.