ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಸಾವು ಪರಿಹಾರಕ್ಕೆ ಸಿದ್ಧರಾಮಯ್ಯನವರಿಗೆ ಮನವಿ

Appeal to Siddaramaiah for the death of Ayyappaswamy Maladharis

ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಸಾವು ಪರಿಹಾರಕ್ಕೆ ಸಿದ್ಧರಾಮಯ್ಯನವರಿಗೆ ಮನವಿ 

ಶಿರಹಟ್ಟಿ 30: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಅಯ್ಯಪ್ಪಸ್ವಾಮಿ ಸನ್ನಿಧಾನದಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ 6 ಜನ ಮಾಲಾಧಿಕಾರಿಗಳು ಮರಣ ಹೊಂದಿರುವ ಹಿನ್ನೆಲೆ ಪ್ರತಿಯೊಂದು ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕೆಂದು ಒತ್ತಾಯಿಸಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಟ್ಟಣದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಭಕ್ತವೃಂದ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಸಂತೋಷ ಕುರಿ, ಗೂಳಪ್ಪ ಕರಿಗಾರ, ಹನಮಂತ ಪವಾರ, ಚಂದ್ರು ಜೊಗೇರ, ಪ್ರವೀಣ ಗಂಟಿ, ಮನೋಜ ಭಜಂತ್ರಿ, ಮಲ್ಲು ಬೋರಶೆಟ್ರ, ಮಲ್ಲಪ್ಪ ಕುದರಿ, ಆನಂದ ಗಂಟಿ, ಗೌಡಪ್ಪ ಪಾಟೀಲ, ಮಂಜು ಕಲಾಲ, ಪ್ರಶಾಂತ ಗಾಯಕವಾಡ ಹಾಗೂ ಮಹಾಂತೇಶ ಛಲವಾದಿ ಇದ್ದರು.