ಹೂವಿನ ಹಡಗಲಿ

ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ 5ನೇ ತಾಲೂಕು ಸಮ್ಮೇಳನ

ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ 5ನೇ ತಾಲೂಕು ಸಮ್ಮೇಳನ

ಹೂವಿನಹಡಗಲಿ 19:  ಸರಕಾರಗಳ ನೀತಿ ವಿರುದ್ಧ ಮಾತನಾಡುವವರನ್ನು  ಜನ ವಿರೋಧಿಗಳು ಎನ್ನುವ ಹಾಗೆ ಬಿಂಬಿಸಲಾಗುತ್ತಿದೆ. ಸಂವಿಧಾನದ ಆಶಯಗಳನ್ನು ಈಡೇರಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಅಖಿಲ ಭಾರತ ವಿದ್ಯಾರ್ಥಿ ಪೇಡೆರೆಷನ್  ಸ್ವತಂತ್ರ ಪೂರ್ವ  ನಂತರದಲ್ಲಿ ಶಿಕ್ಷಣ, ವಿದ್ಯಾರ್ಥಿಗಳ ಪರವಾದ ಹೋರಾಟ ಮಾಡುತ್ತಾ 85 ವರ್ಷಗಳ ಹಾದಿಯಲ್ಲಿ ಸಾಗಿದೆ. ಎಂದು ಕಸಾಪ ಅಧ್ಯಕ್ಷ ಎಂ ಪಿ ಎಂ ಮಂಜುನಾಥ ಹಾಲಸ್ವಾಮಿಗಳು ಹೇಳಿದರು.ಸ್ಥಳೀಯ ರಂಗಭಾರತಿ ಕಲಾ ಮಂದಿರದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪೇಡೆರೆಷನ್  ಹಮ್ಮಿಕೊಂಡಿದ್ದ 5ನೇ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.ಉಚಿತ ವೈಜ್ಞಾನಿಕ ಸಮಾನ ಶಿಕ್ಷಣಕ್ಕಾಗಿ ನಿರಂತರ ವೀರೊಚಿತ ಹೋರಾಟ ಮಾಡುತ್ತಾ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುತ್ತಿದೆ. ಎಂದರು.

ಎಐವೈಎಫ್‍ನ ರಾಜ್ಯ ಕಾರ್ಯದರ್ಶೀ ಸಂತೋಷ ಹೆಚ್. ಎಂ ಮಾತನಾಡಿ  90ರ ದಶಕದ ನಂತರ ಬಂದ ಸರಕಾರಗಳು ಹೊಸ ಆರ್ಥಿಕ ನೀತಿಯ ಹೆಸರಿನಲ್ಲಿ ಜಾರಿಗೆ ತಂದಿರುವ ವಿದ್ಯಾರ್ಥಿ ವಿರೋಧಿ ನೀತಿಗಳಾದ ಶಿಕ್ಷಣದ ಖಾಸಗೀಕರಣವು ಅತ್ಯಂತ ಕೆಟ್ಟದಾದ ನಿರ್ಧಾರವಾಗಿದೆ. ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಸಂಘಟನೆ ಮತ್ತು ಹೋರಾಟ ಅನಿವಾರ್ಯ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಎಐಎಸ್‍ಎಫ್ ರಾಜ್ಯ ಉಪಾದ್ಯಕ್ಷ ಚಂದ್ರನಾಯ್ಕ, ರಾಜ್ಯ ಕಾರ್ಯದರ್ಶಿ ರಮೇಶನಾಯ್ಕ, ಬಳಿಗಾನೂರು ಕೊಟ್ರೇಶ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ವಿ.ಬಿ.ಜಗದೀಶ. ಭಾರತೀಯ ಸರ್ವಧರ್ಮ ರಕ್ಷಣಾ ವೇದಿಕೆ ಅಧ್ಯಕ್ಷ ಬಿಚ್ಚುಗತ್ತಿ ಖಾಜಾಹುಸೇನ,  ಅಂಗನವಾಡಿ ಫೆಡೆರೇಷನ್  ತಾಲೂಕು ಅಧ್ಯಕ್ಷೆ ಬಿ. ಜಯಲಕ್ಷ್ಮಿ,  ಅಕ್ಷರ ದಾಸೋಹ ಸಂಘಟನೆಯ ಅಧ್ಯಕ್ಷೆ ಅನಸೂಯ.ಕೆ. ಬಸವರಾಜ ಸಂಶಿ ಶಾಂತರಾಜ್ ಜೈನ್ ಶಾಂತೇಶ ನಾಯ್ಕ ವಿ ಜಯನಾಯ್ಕ, ಶಿವಕುಮಾರ ಸೇರಿದಂತೆ ಇತರರು ಇದ್ದರು ಅಧ್ಯಕ್ಷತೆಯನ್ನು ಹಲಗಿ ಸುರೇಶ ವಹಿಸಿದ್ದರು.

ಸುದ್ದಿ ಓದಿ