ಹೂವಿನ ಹಡಗಲಿ

ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಿ - ಶಾಸಕ ಕೃಷ್ಣನಾಯಕ

ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಿ - ಶಾಸಕ ಕೃಷ್ಣನಾಯಕ

                ಹೂವಿನ ಹಡಗಲಿ 20: ಆಧುನಿಕ ಸಮಗ್ರ ಕೃಷಿ ಪದ್ಧತಿಯು ಬೆಳೆಗಳು, ಜಾನುವಾರು, ಮೀನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಯಿಂದ ರೈತರಿಗೆ ದ್ವಿಗುಣ ಆದಾಯ ಹೆಚ್ಚುತ್ತದೆ ಎಂದು ಶಾಸಕ ಕೃಷ್ಣನಾಯಕ ಹೇಳಿದರು.ಪಟ್ಟಣದ ತಾಪಂ ಕೆಡಿಪಿ ತ್ರೈಮಾಸಿಕ ಪ್ರಗತಿ ಪರೀಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಎರಡು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ದತಿಗೆ ಕಡಿಮೆ ಖರ್ಚು ವೆಚ್ಚದಲ್ಲಿ ಹೆಚ್ಚು ಆದಾಯ ಬರುವ ಹವಾಮಾನ ಬದಲಾವಣೆಗೆ ಪೂರಕ ಬೆಳೆಗಳನ್ನು ಬೆಳೆಯಬೇಕು ಎಂದರು. ಕೃಷಿ ಇಲಾಖೆಗೆ ಸಂಬಂಧಪಟ್ಟ ಕುಂದು- ಕೊರತೆಗಳನ್ನು ಗಮನಿಸಿ, ರೈತರಿಗೆ ಪೂರಕವಾಗುವಂತೆ ರೈತರ ಕಚೇರಿಯಲ್ಲಿ  ಟಿವಿ ಅಳವಡಿಕೆ, ವಿಡಿಯೋ ಮೂಲಕ ಕೃಷಿಗೆ ಸಂಬಂಧಿಸಿದಂತೆ  ರೈತರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

               ತಹಶಿಲ್ದಾರ  ಕೆ.ಎಂ.ಗುರುಬಸವರಾಜ ಮಾತನಾಡಿ, ವಿವಿಧ ಹೋಬಳಿಯ ರೈತರ ಜಮೀನುಗಳ ಮಣ್ಣನ್ನು ಪರೀಕ್ಷೆ ಮಾಡಿ ರೈತರಿಗೆ ಯಾವ ಬೆಳೆ ಎಲ್ಲಿ  ಹೆಚ್ಚಾಗಿ ಬೆಳೆಯುತ್ತದೆ ಎಂಬುದನ್ನು ಮಾಹಿತಿ ನೀಡಿ, ಸಮಗ್ರ ಕೃಷಿ, ಸಾವಯವ ಕೃಷಿ, ಸಾಂಪ್ರದಾಯಿಕ ಕೃಷಿಗೆ ಹೆಚ್ಚು ಒತ್ತು ನೀಡಿ ಎಂದರು.ಕೃಷಿ ಇಲಾಖೆ ಅಧಿಕಾರಿ  ಕೆಟಿ ಮಂಜುನಾಥ ಮಾತನಾಡಿ,ರೈತರ ಬೆಳೆವಿಮೆ ಹೆಚ್ಚಿಸಲು ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಮಧ್ಯವರ್ತಿಗಳ ಹೆಸರುಗಳನ್ನ ಯಾರು ಕೂಡ ಹೇಳುತ್ತಿಲ್ಲ ಅದರ ಬಗ್ಗೆ ಮಾಹಿತಿ ನೀಡದೆ ಇರುವುದು ದುರಾದೃಷ್ಟಕರ ಸಂಗತಿ ಎಂದರು. ಹಿಂಗಾರಿನಲ್ಲಿ   ರಾಗಿ, ಕಡ್ಲಿ,ಬೆಳೆಯನ್ನು ರೈತರು ಹೆಚ್ಚಾಗಿ ಬೆಳೆಯುತ್ತಾರೆ.,

              ಜೋಳ ಸೂರ್ಯಕಾಂತಿ ಬೆಳೆಯನ್ನು ಕಡಿಮೆ ಪ್ರಮಾಣದಲ್ಲಿ  ಬೆಳೆಯುತ್ತಾರೆ ಎಂದರು. ಪಶು ಸಂಗೋಪನೆ ಇಲಾಖೆ ಅಧಿಕಾರಿ ನಾರಾಯಣ ಬಣಕಾರ್  ಮಾತನಾಡಿ, ಬೀದಿ ನಾಯಿಗಳನ್ನು ಎಲ್ಲೆಂದರಲ್ಲಿ ಬಿಡಬೇಡಿ, ಬೀದಿ ನಾಯಿಗಳ ಸಂತತಿ ತಡೆಯಲು ನಾವು ಈಗಾಗಲೇ ಗಂಡು ನಾಯಿಗಳಿಗೆ ವ್ಯಾಕ್ಸಿನ್ ಮೂಲಕ, ಆಪರೇಷನ್ ಮಾಡುತ್ತಿದ್ದೇವೆ, ರೇಬಿಸ್ ರೋಗ ಹರಡದೆ ಹಾಗೆ ನಾಯಿಗಳಿಗೆ ಚುಚ್ಚುಮದ್ದನ್ನು ಹಾಗೂ ಸೂಕ್ತವಾದ ಚಿಕಿತ್ಸೆಯನ್ನು ನೀಡುತ್ತಿದ್ದೇವೆ ಎಂದು ಹೇಳಿದರು.ಪಟ್ಟಣದ ಪುಟ್  ಪಾತ್ ನಲ್ಲಿ ಒತ್ತುವರಿ ಮಾಡಿದ ಡಬ್ಬ ಅಂಗಡಿಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಹನುಮಂತಪ್ಪ ಶಾಸಕರು ಸೂಚಿಸಿದರು. ತಾಪಂ ಇಒ ಪರಮೇಶ್ವರ​‍್ಪ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು. 


ಸುದ್ದಿ ಓದಿ