ಹವಾಮಾನ ಬದಲಾವಣೆಯ ಕುರಿತು ಕ್ರಿಯಾ ಯೋಜನೆ ತರಬೇತಿ ಕಾರ್ಯಕ್ರಮ
Action Planning Training Program on Climate Change
ಲೋಕದರ್ಶನ ವರದಿ
ಗದಗ 6: ಗದಗ ಜಿಲ್ಲೆಗೆ ಹವಾಮಾನ ಬದಲಾವಣೆಯ ಕ್ರಿಯಯಾ ಯೋಜನೆಯ ಕಾರ್ಯಕ್ಷಮತೆಗಳನ್ನು ಅಳವಡಿಸಿಕೊಳ್ಳುವುದರ ವರದಿಯನ್ನು ತಯಾರಿಸಬೇಕೆಂದು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ , ಬೆಂಗಳೂರು (ಎಂಪ್ರಿ) ಹಿರಿಯ ಸಮಾಲೋಚಕರಾದ ಡಾ. ಸರಿತಾ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು. ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆ ಕುರಿತು ಕ್ರಿಯಾ ಯೋಜನೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹವಾಮಾನ ಬದಲಾವಣೆಯ ಇಲಾಖಾ ಕ್ರಿಯಾ ಯೋಜನೆಯ ಕಾರ್ಯಕ್ಷಮತೆ ಸೂಚಕಗಳ ಅನುಷ್ಟಾನ ಕುರಿತು ಅಧಿಕಾರಿಗಳು ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ. ಗದಗ ಜಿಲ್ಲೆಗೆ ಈ ಕಾರ್ಯಕ್ಷಮತೆಗಳನ್ನು ಅಳವಡಿಸಿಕೊಳ್ಳುವುದಕ್ಕಾಗಿ, ಸೂಕ್ತ ವರದಿಯನ್ನು ತಯಾರಿಸಲು ತಾವುಗಳು ಶ್ರಮಿಸಬೇಕು. ಇದರ ಜೊತೆಗೆ ಹೊಸ ತಂತ್ರಜ್ಞಾನಗಳ ಮೂಲಕ ತ್ಯಾಜ್ಯ ನಿರ್ವಹಣೆ ಮತ್ತು ತ್ಯಾಜ್ಯದಿಂದ ಇಂಧನ ಉತ್ಪಾದನೆಗೆ ಆದ್ಯತೆ ನೀಡಬೇಕು. ನದಿ, ಕೆರೆಗಳ ನೀರಿನ ಗುಣಮಟ್ಟದ ಕಾಪಾಡುವುದು, ಮಾಲಿನ್ಯ ತಡೆಗಟ್ಟಲು ಪರಿಸರವನ್ನು ಸುಸ್ಥಿರವಾಗಿಡಲು, ಮತ್ತು ಹಸಿರು ಇಂಧನಗಳ ಬಳಕೆಯನ್ನು ಹೆಚ್ಚಿಸಲು ಎಲ್ಲರೂ ಕೈಜೋಡಿಸಬೇಕೆಂದು ಅವರು ಹೇಳಿದರು.
ಹವಾಮಾನ ಬದಲಾವಣೆ ಕುರಿತು, ಕರ್ನಾಟಕ ಕ್ರಿಯಾ ಯೋಜನೆ ಬಗ್ಗೆ ಸುದೀರ್ಘ ವಿವರಣೆ ನೀಡಿದ ಅವರು ಕಾರ್ಯನೀತಿ, ಕಾರ್ಯತಂತ್ರಗಳು ಮತ್ತು ವಿವಿಧ ಸಂಘ-ಸಂಸ್ಥೆಗಳ ಕರ್ತವ್ಯವನ್ನು ಡಾ. ಸರಿತಾ ವಿವರಿಸಿದರು. ವಿಷಯ ತಜ್ಞರಾದ ಶಶಿಕುಮಾರ್ ಅವರು. ಅಭ್ಯರ್ಥಿಗಳಿಗೆ ಜಲ ಸಂಪನ್ಮೂಲ ವಲಯದ ಹವಾಮಾನ ಕ್ರಿಯಾ ಯೋಜನೆ ಕುರಿತು ಮಾಹಿತಿ ನೀಡಿದರು. ಗದಗ ಜಿಲ್ಲೆಯ ಎನ್.ಆರ್.ಡಿ.ಎಂ.ಎಸ್ ನ ಅಧಿಕಾರಿ ಮಂಜುನಾಥ್ ಅಭ್ಯರ್ಥಿಗಳಿಗೆ ಎನ್ಆರ್ಡಿಎಂಎಸ್ ಕೇಂದ್ರದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳವರು ಹಾಜರಿದ್ದರು. ಲತಾ ಎಂ.ಎಚ್. ಕಾರ್ಯಕ್ರಮ ನಿರೂಪಿಸಿದರು. ಜಗದಾಂಬ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 