ಸೇವಾ ನಿವೃತ ಯೋಧನಿಗೆ ಮೆರವಿಣಿಗೆಯ ಮೊಲಕ ಸ್ವಾಗತ
A parade welcomes a retired soldier
ಸೇವಾ ನಿವೃತ ಯೋಧನಿಗೆ ಮೆರವಿಣಿಗೆಯ ಮೊಲಕ ಸ್ವಾಗತ
ಚಿಕ್ಕೋಡಿ, 04 : ಯುವಜನಾಂಗ ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಜೊತೆಗೆ ಹೆಚ್ಚು ಹೆಚ್ಚು ಯುವಕರು ದೇಶ ಸೇವೆಗೆ ಮುಂದಾಗಬೇಕು ಎಂದು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಮತ್ತು ಮಾಜಿ ಸೈನಿಕ ತಾತೋಬಾ ಬಾಳಗೌಡಾ ಪಾಟೀಲ ಹೇಳಿದರು.
ತಾಲೂಕಿನ ನಾಯಿಂಗ್ಲಜ ಗ್ರಾಮದಲ್ಲಿ ಭಾರತೀಯ ಸೇನೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ಶುಕ್ರವಾರ ಗ್ರಾಮಕ್ಕೆ ಆಗಮಿಸಿದ ನಿವೃತ್ತ ಹವಾಲ್ದಾರ ರಾಮಗೌಡಾ ಮಲಗೌಡಾ ಪಾಟೀಲ ಅವರನ್ನು ಗ್ರಾಮದ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ ಮತ್ತು ಗ್ರಾಮಸ್ಥರು ಅದ್ದೂರಿಯಾಗಿ ಮೆರವಣಿಗೆಯ ಮೂಲಕ ಅದ್ದೂರಿ ಸ್ವಾಗತಿಸಿಕೊಂಡ ನಂತರ ನಡೆದ ಸ್ವಾಗತ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ದೇಶ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ನಮಗೆ ಆ ಭಾಗ್ಯ ಲಭಿಸಿರುವುದು ನಮ್ಮ ಪುಣ್ಯ ಎಂದರು.
ಸೇವಾ ನಿವೃತ್ತ ಸೈನಿಕ ರಾಮಗೌಡಾ ಮಲಗೌಡಾ ಪಾಟೀಲ ಅವರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ತೆರೆದ ವಾಹನದಲ್ಲಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಮಂದಿರಗಳಿಗೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು. ನಂತರ ನಡೆದ ಸ್ವಾಗತ ಸಮಾರಂಭದಲ್ಲಿ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಮತ್ತು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ಸಂಘದ ಉಪಾಧ್ಯಕ್ಷರು ಮತ್ತು ಮಾಜಿ ಸೈನಿಕ ರಾಜಕುಮಾರ ಸಾತು ತಳವಾರ ಪ್ರಾಸ್ತಾವಿಕ ಮಾತನಾಡಿದರು. ಈರಗೌಡಾ ಭೀಮಗೌಡಾ ಪಾಟೀಲ, ರಾಮಗೌಡಾ ಮಲಗೌಡಾ ಪಾಟೀಲ, ಪದ್ಮಾಕರ ದೇವಪ್ಪಾ ದಿವಟೆ, ಕಲ್ಲಪ್ಪಾ ದತ್ತು ಮಾಳಗೆ, ಅಜೀತ ಸದಾಶಿವ ದಿವಟೆ ಮುಂತಾದವರು ಉಪಸ್ಥಿತರಿದ್ದರು. ಅಪ್ಪಣ್ಣಾ ಮಾರುತಿ ದಿವಟೆ ಸ್ವಾಗತಿಸಿದರು. ಸಂತೋಷ ರಾಮಾ ಪಾಟೀಲ ವಂದಿಸಿದರು.
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ 