ಮಿರಜ್ ಪಟ್ಟಣದ ನಿರ್ಮಲ ಆಸ್ಪತ್ರೆಯ ವತಿಯಿಂದ ವಿಶ್ವ ತಂಬಾಕು ರಹಿತ ದಿನದ ನಿಮಿತ್ಯ ಬೃಹತ್ ಜಾಗೃತಿ ರಾ​‍್ಯಲಿ..!

ಮಿರಜ್ ಪಟ್ಟಣದ ನಿರ್ಮಲ ಆಸ್ಪತ್ರೆಯ ವತಿಯಿಂದ ವಿಶ್ವ ತಂಬಾಕು ರಹಿತ ದಿನದ ನಿಮಿತ್ಯ ಬೃಹತ್ ಜಾಗೃತಿ ರಾ​‍್ಯಲಿ..! A massive awareness rally was organized by Nirmala Hospital in Miraj town on the occasion of World N

ಲೋಕದರ್ಶನ ವರದಿ 

 ಕಾಗವಾಡ 29 : ಮಹಾರಾಷ್ಟ್ರದ ಮಿರಜ್ ಪಟ್ಟಣದ ನಿರ್ಮಲ ಆಸ್ಪತ್ರೆ, ವ್ಯಸನಮುಕ್ತಿ ಮತ್ತು ಪುನರವಸತಿ ಕೇಂದ್ರದ ವತಿಯಿಂದ ಮೇ 30 ರಂದು ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಶುಕ್ರವಾರ ದಿ. 29 ರಂದು ತಂಬಾಕು ಸೇವನೆಯಿಂದಾಗುವ ದಷ್ಪರಿಣಾಮಗಳ ಕುರಿತು ಮತ್ತು ತಂಬಾಕು ಮುಕ್ತ ಸಮಾಜವನ್ನು ರಚಿಸಲು ಜಾಗೃತಿ ರಾ​‍್ಯಲಿಯನ್ನು ಹಮ್ಮಿಕೊಳ್ಳಲಾಯಿತು. 

ಜಾಗೃತಿ ರಾ​‍್ಯಲಿಗೆ ಬೀದಿ ನಾಟಕ ಮತ್ತು ಪ್ರತಿಜ್ಞಾ ಭೋದನೆಯೊಂದಿಗೆ ಚಾಲನೆ ನೀಡಲಾಯಿತು. ನಸಿಂರ್ಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ನಿರ್ಮಲ್ ಆಸ್ಪತ್ರೆಯ ಸಿಬ್ಬಂದಿಗಳು ಸೇರಿ ತಂಬಾಕು ಸೇವನೆಯಿಂದಾಗುವ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ದುಷ್ಪರಿಣಾಮಗಳನ್ನು ಎತ್ತಿ ತೋರಿಸುವ ಪರಿಣಾಮಕಾರಿ ಬೀದಿ ನಾಟಕವನ್ನು ಪ್ರದರ್ಶಿಸಿದರು. ಎಲ್ಲರೂ ತಂಬಾಕು ಮುಕ್ತ ಜೀವನ ನಡೆಸುವ ಪ್ರತಿಜ್ಞೆಯನ್ನು ಸ್ವೀಕರಿಸಿದರು. 

ರಾ​‍್ಯಲಿಯು ಮಿರಜ್ ಪಟ್ಟಣದ ನಿರ್ಮಲ್ ಆಸ್ಪತ್ರೆಯಿಂದ ವಂಟಮೂರಿ ಕಾರ್ನರ್, ಗಾಂಧಿ ಚೌಕ್, ಪ್ರಿಯದರ್ಶಿನಿ ಹೋಟೆಲ್ ರಸ್ತೆ, ಅಮರ್ ಖಡ್ಡಾ ಮೂಲಕ ಸಾಗಿ, ರಾ​‍್ಯಲಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ತಂಬಾಕು ವಿರೋಧಿ ಸಂದೇಶವನ್ನು ಸಾರುವ ಫಲಕಗಳು ಹಿಡಿದು, ಘೋಷಣೆಗಳನ್ನು ಕೂಗುತ್ತ ಜಾಗೃತಿ ಮೂಡಿಸಿದರು. ರಾ​‍್ಯಲಿಯ ಯಶಸ್ವಿಗೆ ಮಿರಜ್ ಸಂಚಾರ ಪೋಲಿಸ್ ಮತ್ತು ಮಹಾತ್ಮ ಗಾಂಧಿ ಪೊಲೀಸ್ ಠಾಣೆ ಸಿಬ್ಬಂದಿಗಳು ಸಹಕಾರ ನೀಡಿದರು.  

ಈ ವೇಳೆ ವಿನಾಯಕ ಕವಡೆ, ಡಾ. ಶ್ರದ್ಧಾ ಗಾಯಕವಾಡ, ಡಾ. ಅನಿತಾ ಖರಾತ, ಡಾ. ಪ್ರಿಯಾಂಕಾ ಸಚದೇವ, ಲಕ್ಷ್ಮಿ ಭಂಡಾರೆ, ಸೇಜಲ ಬನಸೋಡೆ, ಸಚೀನ ಪಾಟೀಲ, ಇಮ್ರಾನ ಮುಲಾನಿ, ಅಮೀರ ಶರಿಕಮಸಲತ, ಅಜೀಂ ತಾಂಬೋಳಿ, ರಾಹುಲ ಲೋಹಾರ, ಸ್ವರೂಪ ರಾಯನಾಡೆ, ಹರೀಶ ಲೋಹಾರ, ಸಚೀನ ಪೇಟಕರ ಸೇರಿದಂತೆ ನಿರ್ಮಲ ಆಸ್ಪತ್ರೆಯ ಸಿಬ್ಬಂದಿಗಳು, ನರ್ಸಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.