ಎಲ್ಲರೊಂದಿಗೆ ಬೆರೆಯುವ ಪ್ರವೃತ್ತಿ ಬೆಳೆಸಿಕೊಳ್ಳಿ: ಸಿದ್ದರಾಮ ಸ್ವಾಮೀಜಿ
Cultivate the habit of mingling with everyone: Siddarama Swamiji
ಬೈಲಹೊಂಗಲ 10: ಮಾನವ ಅಹಂಕಾರಿಗಳಾಗದೆ ಎಲ್ಲರೊಂದಿಗೆ ಬೆರೆಯುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹಿಪ್ಪರಗಿ ಸಿದ್ದರಾಮ ಸ್ವಾಮೀಜಿ ಹೇಳಿದರು. ನಗರದ ರುದ್ರಾಕ್ಷಿ ಮಠದಲ್ಲಿ ನಡೆದ ಶ್ರಾವಣ ಮಾಸದ ಪ್ರವಚನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಿಷ್ಕಾಮ ಪುಣ್ಯವಿಲ್ಲದೆ ಜ್ಞಾನ ಪ್ರಾಪ್ತಿಯಾಗುವುದಿಲ್ಲ. ಪರಿಪೂರ್ಣ ಭಾವನೆಯೊಂದಿಗೆ ಸಚ್ಚಿದಾನಂದ ಸ್ವರೂಪನಾದ ದೇವರ ಕುರಿತು ಚಿಂತನೆ ನಡೆಸಬೇಕು. ಪ್ರವಚನ ಆಲಿಸುವುದರಿಂದ ಪುಣ್ಯ ಹಾಗೂ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದರು. ಚಿತ್ರನಟ ಶಿವರಂಜನ್ ಬೊಳನ್ನವರ ಮಾತನಾಡಿ, ಮನುಷ್ಯನ ಆಯುಷ್ಯ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಭೂಮಿಗೆ ಬಂದ ಬಳಿಕ ಯಾವುದೇ ಸಾಧನೆ ಮಾಡದೆ ತೆರಳಬಾರದು ಎಂದು ಹೇಳಿದರು.
ಅರ್ಬನ್ ಬ್ಯಾಂಕ್ ಅಧ್ಯಕ್ಷ ಡಾ. ಬಿ.ಎಚ್. ಮೆಟಗುಡ್ಡ ಮಾತನಾಡಿ, ಹಿಂದೂ ಸನಾತನ ಧರ್ಮವನ್ನು ಉಳಿಸಿ ಬೆಳೆಸುವ ಮಠಗಳು ಶ್ರೇಷ್ಠವಾಗಿವೆ ಎಂದರು. ವೇ.ಮೂ. ವಿಶ್ವನಾಥ ಹಿರೇಮಠ ಮಾತನಾಡಿ, ಶ್ರಾವಣ ಮಾಸದಲ್ಲಿ ಪ್ರವಚನ ಆಲಿಸುವುದರಿಂದ ನೆಮ್ಮದಿ ಮತ್ತು ಸಂತೋಷ ದೊರೆಯುತ್ತದೆ ಎಂದರು. ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಹಾಂತೇಶ ಅಕ್ಕಿ, ಬಾಬು ಕುಡಸೋಮಣ್ಣವರ, ಬಸವರಾಜ ಶಿಂತ್ರಿ, ಗುರುಪುತ್ರ ಹೊಸಮನಿ, ಎಸ್.ಎಂ. ಪಾಟೀಲ, ಮಹೇಶ ಕೊಟಗಿ, ಚಂದ್ರಶೇಖರ ಕೊಪ್ಪದ, ರುದ್ರ್ಪ ಹೊಸಮನಿ, ಚಂದನ ಸವದತ್ತಿ, ಬಸವರಾಜ ಬಡಿಗೇರ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 