ನಿವೃತ್ತಿ ಹೊಂದಿನ ಪ್ರಾಂಶುಪಾಲ ಠಾಕ್ರಾ ನಾಯ್ಕಗೆ ಅದ್ಧೂರಿ ಸನ್ಮಾನದ ಬೀಳ್ಕೊಡಿಗೆ
A grand farewell to retiring Principal Thakra Naik
ಲೋಕದರ್ಶನ ವರದಿ
ಕಂಪ್ಲಿ 04: ಪಟ್ಟಣದ ಯಲ್ಲಮ್ಮಕ್ಯಾಂಪ್(ಮುದ್ದಾಪುರ)ಬಳಿಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಯೋ ನಿವೃತ್ತಿ ಹೊಂದಿದ ಪ್ರಾಂಶುಪಾಲ ಠಾಕ್ರಾ ನಾಯ್ಕ ಇವರಿಗೆ ಅದ್ಧೂರಿಯಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ನಂತರ ಪ್ರಭಾರಿ ಪ್ರಾಂಶುಪಾಲ ಜಿ.ಕೆ.ವಿಶ್ವನಾಥಗೌಡ ಮಾತನಾಡಿ, ಠಾಕ್ರಾ ನಾಯ್ಕ ಅವರು ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ನೀಡಬೇಕೆಂಬ ಹಿನ್ನಲೆ ಬಳ್ಳಾರಿಯಲ್ಲೇ ಮೊದಲು ಕರ್ತವ್ಯಕ್ಕೆ ಹಾಜರಾಗಿ, ಕೊಪ್ಪಳ, ಬಳ್ಳಾರಿಯಲ್ಲೇ ಬಹುದಿನಗಳವರೆಗೆ ಸೇವೆ ಸಲ್ಲಿಸಿ,
ಈಗ ಬಳ್ಳಾರಿ ಜಿಲ್ಲಾ ವ್ತಾಪ್ತಿಯ ಕಂಪ್ಲಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಳೆದ ಹತ್ತು ತಿಂಗಳು ಪ್ರಾಂಶುಪಾಲರಾಗಿ ದಕ್ಷ, ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರತಿಯೊಂದು ಹಂತದಲ್ಲಿ ಉಪಸ್ಯಾನಕರಿಗೆ ಸಲಹೆ ಸೂಚನೆ ನೀಡುವ ಜೊತೆಗೆ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳುವಂತಹ ಕೋರ್ಸ್ ಪಡೆದು, ಜೀವನ ಕಟ್ಟಿಕೊಳ್ಳುವಂತೆ ತಿಳಿಸುತ್ತಿದ್ದರು. ಇವರ ಸೇವೆ ಇನ್ನಷ್ಟು ವರ್ಷಗಳ ಅವಶ್ಯಕತೆ ಇತ್ತು. ಆದರೆ, ಸರ್ಕಾರದ ನಿರ್ದೇಶನದಂತೆ ವಯೋ ನಿವೃತ್ತಿ ಸಹಜವಾಗಿದೆ. ಆದ್ದರಿಂದ ಠಾಕ್ರಾ ನಾಯ್ಕ ಇವರ ಮುಂದಿನ ಜೀವನವು ಸುಂದರ ಮತ್ತು ಆರೋಗ್ಯಕರವಾಗಿ ಕೂಡಿರಲಿ ಎಂದರು.
ತದನಂತರ ಸನ್ಮಾನಿಸಿ ಸ್ವೀಕರಿಸಿ ನಿವೃತ್ತ ಪ್ರಾಂಶುಪಾಲ ಠಾಕ್ರಾ ನಾಯ್ಕ ಮಾತನಾಡಿ, ನನ್ನ ವೃತ್ತಿ ಜೀವನವೂ ಅಕ್ಕಪಕ್ಕದ ಬಳ್ಳಾರಿ-ಕೊಪ್ಪಳದಲ್ಲಿ ನಡೆಸಿರುವ ಖುಷಿ ತಂದಿದೆ. ಭೂಮಿ ಮೇಲೆ ಜನ್ಮತಾಳಿದ ಮೇಲೆ ಏನನ್ನಾದರೂ ಸಾಧಿಸಬೇಕೆಂಬ ಛಲ ಇದ್ದಾಗ ಮಾತ್ರ ಪ್ರತಿ ಹಂತದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿ ಹಂತದಲ್ಲಿ ಒಳ್ಳೆಯ ಶಿಕ್ಷಣದೊಂದಿಗೆ ಉನ್ನತ ಹುದ್ದೆ ಪಡೆಯಲಾಯಿತು.
ನಿರಂತರವಾಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದು ನಮ್ಮ ಧ್ಯೇಯವಾಗಿತ್ತು. ಅದರಂತಯೇ ವೃತ್ತಿ ಜೀವನ ಮಾಡಿಕೊಂಡು ಬಂದಿರುವೆ. ಇಷ್ಟು ವರ್ಷ ಸೇವೆ ಮಾಡಲು ಅವಕಾಶ ದೊರತಿದೆ. ಇಷ್ಟು ಬೇಗ ನಿವೃತ್ತಿ ಹೊಂದುತ್ತೇವೆ ಎಂದು ಭಾವಿಸಿರಲಿಲ್ಲ. ಆದರೆ, ಸರ್ಕಾರದ ನಿರ್ದೇಶನದಂತೆ ಸರ್ಕಾರಿ ನೌಕರರಿಗೆ ನಿವೃತ್ತಿ ಸರ್ವೆ ಸಾಮಾನ್ಯ. ಆದ್ದರಿಂದ ಈಗ ನಮ್ಮ ವೃತ್ತಿ ಜೀವನ ಮುಗಿದ್ದು, ಇನ್ನೂ ಮುಂದಿನ ನಿವೃತ್ತಿ ಜೀವನವೇ ಆಧಾರವಾಗಲಿದೆ ಎಂದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 