ಜಿಲ್ಲೆಯಲ್ಲಿ 85 ಸಾವಿರ ಹೆಕ್ಟೆರ್ ಬಿತ್ತನೆ ಽ ಮಳೆ ಕೊರತೆಯಾದಲ್ಲಿ ಬೆಳೆಗೆ ಸಲಹೆ ಅಗತ್ಯ ಬೀಜ ರಸಗೊಬ್ಬರ ಲಭ್ಯತೆಗೆ ಕ್ರಮ : ಡಿಸಿ ಸಂಗಪ್ಪ

ಜಿಲ್ಲೆಯಲ್ಲಿ 85 ಸಾವಿರ ಹೆಕ್ಟೆರ್ ಬಿತ್ತನೆ ಽ ಮಳೆ ಕೊರತೆಯಾದಲ್ಲಿ ಬೆಳೆಗೆ ಸಲಹೆ ಅಗತ್ಯ ಬೀಜ ರಸಗೊಬ್ಬರ ಲಭ್ಯತೆಗೆ ಕ್ರಮ : ಡಿಸಿ ಸಂಗಪ್ಪ  85 thousand hectares of sowing in the district. If there is a shortage of rain, advice is needed for

ಲೋಕದರ್ಶನ ವರದಿ 

ಬಾಗಲಕೋಟೆ 06 : ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳು ಸಮರ​‍್ಕವಾಗಿ ಲಭ್ಯವಾಗುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಜರುಗಿದ ಮುಂಗಾರು ಹಂಗಾಮಿನ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಜನವರಿಯಿಂದ ಜೂನ್ ವರೆಗೆ ವಾಡಿಕೆಯಂತೆ 93.8 ಎಂಎಂ ಮಳೆ ಆಗಬೇಕಿತ್ತು. ಆದರೆ 101 ಎಂ.ಎಂ ಮಳೆ ಆಗಿರುತ್ತದೆ. ಬಾದಾಮಿ, ಮುಧೋಳ, ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಹೆಚ್ಚಿಗೆ ಮಳೆಯಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 85 ಸಾವಿರ ಹೆಕ್ಟೆರ್ನಷ್ಟು ಕಬ್ಬು ಹಾಗೂ ಇತರೆ ಬೆಳೆಗಳ ಬಿತ್ತನೆ ಆಗಿರುತ್ತದೆ.

ಇನ್ನು ಬಿತ್ತನೆ ಮಾಡದ ರೈತರು ಸಮರ್ಕವಾಗಿ ಮಳೆ ಆಗುವವರೆಗೆ ಬಿತ್ತನೆ ಕಾರ್ಯ ಮಾಡಬಾರದೆಂದು ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಇರುವುದಿಲ್ಲ. ಅಗತ್ಯ ದಾಸ್ತಾನು ಲಭ್ಯವಿರುತ್ತದೆ. ವಿವಿಧ ಬಿತ್ತನೆ ಬೀಜಗಳಿಗೆ 7128 ಕ್ವಿಂಟಲ್ ಬೇಡಿಕೆ ಇದ್ದು, ಈ ಪೈಕಿ 3580 ಕ್ವಿಂಟಲ್ ಬಿತ್ತನೆ ಬೀಜ ಸರಬರಾಜು ಆಗಿದೆ. 1319 ಕ್ವಿಂಟಲ್ನಷ್ಟು ವಿತರಣೆ ಮಾಡಲಾಗಿದೆ. 2261 ಕ್ವಿಂಟಲ್ನಷ್ಟು ಇದೆ. ವಿವಿಧ ರಸಗೊಬ್ಬರ ಸೇರಿ ಒಟ್ಟು 55711 ಮೆ.ಟನ್ ಬೇಡಿಕೆ ಪೈಕಿ 26463 ಮೆ.ಟನ್ ಹಂಚಿಕೆಯಾಗಿದೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಆರ್‌.ಎಸ್‌.ಕೆಗಳಲ್ಲಿ ರೈತರಿಗೆ ವ್ಯವಸ್ಥಿತವಾಗಿ ವಿತರಣೆಗೆ ಕ್ರಮಕೈಗೊಳ್ಳಬೇಕು. ಯಾವ ಯಾವ ಬೆಳೆಗೆ ಯಾವ ಯಾವ ಗೊಬ್ಬರವನ್ನ ಎಷ್ಟು ಹಾಕಬೇಕು ಎಂಬುದರ ಬಗ್ಗೆ ಮಾಹಿತಿ ಬೋರ್ಡ ಹಾಕಿ ರೈತರಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದರು.  

ಬೀಜ ಮತ್ತು ರಸಗೊಬ್ಬರ ಮಾರಾಟಗಾರರು ನಿಗದಿತ ದರದಲ್ಲಿಯೇ ವಿತರಣೆ ಮಾಡಬೇಕು. ಕೃತಕ ಅಭಾವ ಸೃಷ್ಟಿಸುವುದು, ಹೆಚ್ಚಿನ ದರ ವಸೂಲಿ ಮಾಡುವುದು ಅಥವಾ ಕಳಪೆ ಗುಣಮಟ್ಟದ ಕೃಷಿ ಪರಿಕಗಳನ್ನು ಮಾರಾಟ ಮಾಡುವವರ ವಿರುದ್ದ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ತಾಲೂಕಾ ಮಟ್ಟದ ಅಧಿಕಾರಿಗಳು ನಿರಂತರವಾಗಿ ಪರೀಶೀಲನೆ ನಡೆಸಿ, ರೈತರಿಗೆ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ನೀಡಬೇಕೆಂದರು. ಮಳೆ ವಿಳಂಬವಾದಲ್ಲಿ ಪರ್ಯಾಯ ಯೋಜನೆಯಲ್ಲಿ ತಿಳಿಸಿದ ಬೇಸಾಯ ಕ್ರಮಗಳನ್ನು ಅನುಸರಿಸಲು ತಿಳಿಸಿದರು. ಅಲ್ಲದೇ ತೋವಿವಿಯ ಸಹ ಸಂಶೋಧನಾ ನಿರ್ದೇಶಕ ಡಾ.ವಸಂತ ಗಾಣಗೇರ ಅವರು ವಿವಿಧ ಬೆಳೆಯ ತಳಿಗಳ ಬಗ್ಗೆ ಮಾಹಿತಿ ನೀಡಿದರು.  

ರಸಗೊಬ್ಬರ ಸರಬರಾಜು ಮಾಡುತ್ತಿರುವ ಇಪ್ಕೋ, ಐ.ಪಿ.ಸಿ ಹಾಗೂ ಸಿಐಎಲ್ ಕಂಪನಿಗಳು ರೈಲ್ವೆ ಮೂಲಕ ಬಾಗಲಕೋಟೆಯಲ್ಲಿ ರಸಗೊಬ್ಬರ ಇಳಿಸದೇ ವಿಜಯಪುರದಲ್ಲಿ ಇಳಿಸುತ್ತಿರುವದರಿಂದ ಅಲ್ಲಿಂದ ತಾಲೂಕಾವಾರು ಸರಬರಾಜಿಗೆ ತೊಂದರೆಯಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದಾಗ ಬಾಗಲಕೋಟೆ ಮೂಲಕವೇ ವಿಜಯಪೂರಕ್ಕೆ ಗೂಡ್ಸ್‌ ರೈಲು ಹೋಗುತ್ತಿರುವದರಿಂದ ಬಾಗಲಕೋಟೆಯಲ್ಲಿ ಗೊಬ್ಬರ ಇಳಿಸಲು ಕ್ರಮಕೈಗೊಳ್ಳಲು ವಿವಿಧ ಕಂಪನಿ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಖೇತ ಬಚಾವೋ ಅಭಿಯಾನದ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ತಿಳಿಸಿದರು. ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಟಿ.ಎಸ್‌.ರುದ್ರೇಶಪ್ಪ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಹಕಾಟೆ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಎಸ್‌.ಎಂ.ಕೋರೆ, ಜಮಖಂಡಿ ವಿಭಾಗದ ಕೃಷಿ ಉಪನಿರ್ದೇಶಕಿ ಮಂಜುಳಾ ಬಸವರೆಡ್ಡಿ, ಮಾರ್ಕೆಟಿಂಗ್ ಫೆಡರೇಷನ್ ಅಧಿಕಾರಿ ಸುಪ್ರಿಯಾ ಸೇರಿದಂತೆ ಆಯಾ ತಾಲೂಕಿ ಕೃಷಿ ಅಧಿಕಾರಿಗಳು ಹಾಗೂ ರಸಗೊಬ್ಬರ ಸರಬರಾಜು ಕಂಪನಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.