ಗದಗ ಜಿಲ್ಲಾ ಸ್ಲಂ ಮಹಿಳಾ ಸಮಿತಿಯಿಂದ ಸಾವಿತ್ರಿಬಾ ಪುಲೆ ಅವರ 194ನೇ ಜಯಂತಿ

194th birth anniversary of Savitriba Pule from Gadag Zilla Slum Mahila Samiti

ಗದಗ ಜಿಲ್ಲಾ ಸ್ಲಂ ಮಹಿಳಾ ಸಮಿತಿಯಿಂದ ಸಾವಿತ್ರಿಬಾ ಪುಲೆ ಅವರ 194ನೇ ಜಯಂತಿ 

ಗದಗ 03:  ಸ್ವಾತಂತ್ರ್ಯಪೂರ್ವ ಭಾರತದಲ್ಲಿ  ಮಹಿಳಾ ಶಿಕ್ಷಣದ ಪ್ರವರ್ತಕರಾದ ಸಾವಿತ್ರಿಬಾ ಪುಲೆ ಅವರು ಭಾರತೀಯರ ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗವನ್ನು ಪಡೆಯಲು ಮತ್ತು ಮಹಿಳೆಯರು ತಲೆ ಎತ್ತಿ ಬದುಕಲು ಸಹಾಯ ಮಾಡಲು ತಮ್ಮ ಜೀವನನ್ನು ಮುಡಿಪಾಗಿಟ್ಟರು, ನಮ್ಮ ದೇಶದಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳು ಇವತ್ತು ಸಿಗುತ್ತಿರುವುದು ಅಂದು ಸಾವಿತ್ರಿಬಾ ಪುಲೆ ಅವರು ನಡೆಸಿದ ಹೋರಾಟದ ಫಲ ಎಂದು ಗದಗ ಜಿಲ್ಲಾ ಸ್ಲಂ ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ ಹೇಳಿದರು. 

 ಅವರು ಗದಗ ಜಿಲ್ಲಾ ಸ್ಲಂ ಸಮಿತಿ ಹಾಗೂ ಮಹಿಳಾ ಸಮಿತಿಯ ನೇತೃತ್ವದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾ ಪುಲೆ ಅವರ 194ನೇ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ 1831 ಜನವರಿ 3ರಂದು ಮಹಾರಾಷ್ಟ್ರದಲ್ಲಿ ಜನಿಸಿದ ಸಾವಿತ್ರಿಬಾ ಪುಲೆ ಅವರು ಸಮಾಜ ಸುಧಾರಣೆಗೆ ಮಹಿಳೆಯರಿಗೆ ಉತ್ತಮ ಶಿಕ್ಷಣ ಸಿಗುವಂತಾಗಬೇಕು ಎಂಬ ಪ್ರತಿಪಾದನೆಯೊಂದಿಗೆ ಹೋರಾಟ ಆರಂಭಿಸಿದರು, ಆ ಸಂದರ್ಭದಲ್ಲಿ ಎದುರಾದ ಪ್ರತಿರೋಧವನ್ನು ಲೆಕ್ಕಿಸಿದೆ ಮಹಿಳೆಯರಿಗೆ ಶಿಕ್ಷಣ ಮತ್ತು ಸಮಾನ ಹಕ್ಕುಗಳನ್ನು ಸಿಗಬೇಕೆಂದು ನಿರಂತರವಾಗಿ ಹೋರಾಟವನ್ನು ಮಾಡಿದರು, ಭಾರತದ ಸ್ವಾತಂತ್ರ ಸಂಗ್ರಾಮಕ್ಕೊ ಮೊದಲೇ ಇವರು ಅಜ್ಞಾನ ವಿಮೋಚನೆಗೆ ಅಕ್ಷರ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು ಶೋಷಿತ ಸಮುದಾಯಗಳಿಗೆ ಮತ್ತು ಮಹಿಳೆಯರಿಗೆ ವಿದ್ಯಾದಾನ ಮಾಡುವ ಮೂಲಕ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದರು ಎಂದು ತಿಳಿಸಿದರು, ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್‌.ಮಾನ್ವಿ ಮಾತನಾಡಿ ಭಾರತದ ಮೂದಲು ಮಹಿಳಾ ಶಿಕ್ಷಕಿಯಾಗಿರುವ ಸಾವಿತ್ರಿಬಾ ಪುಲೆ ಅವರು ಶೋಷಿತ ಸಮುದಾಯ ಮತ್ತು ಮಹಿಳೆಯರಿಗೆ ಸಂಕಷ್ಟದ ದಿನಮಾನಗಳಲ್ಲೂ ಅಕ್ಷರವನ್ನು ಕಲಿಸಿ ಅವರನ್ನು ಮೇಲೆತ್ತುವಲ್ಲಿ ಶ್ರಮಿಸಿದ್ದಾರೆ. 

 ಅಸಮಾನತೆಯಲ್ಲಿ ಬಳಲುತ್ತಿದ್ದ ಹೆಣ್ಣು ಮಕ್ಕಳಿಗೆ ಅಕ್ಷರದ ಬೆಳಕು ನೀಡಿದ ಮೂದಲು ಮಹಿಳಾ ಶಿಕ್ಷಕಿ ಸಾವಿತ್ರಿಬಾ ಪುಲೆ ನಮ್ಮಗೆ ಮಾರ್ಗದರ್ಶಕರು ಮತ್ತು ಆದರ್ಶವಾಗಿದ್ದಾರೆ ಎಂದು ಹೇಳಿದರು ಜಿಲ್ಲಾ ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಕಾರ್ಯದರ್ಶಿ ಅಶೋಕ ಕುಸಬಿ, ಸ್ಲಂ ಸಮಿತಿ ಮುಖಂಡರಾದ ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಮೆಹಬೂಬಸಾಬ ಬಳ್ಳಾರಿ, ಮಂಜುನಾಥ ಶ್ರೀಗಿರಿ, ಮೆಹರುನಿಸಾ ಡಂಬಳ, ದುರ್ಗಪ್ಪ ಮಣ್ಣವಡರ, ಖಾಜಾಸಾಬ ಇಸ್ಮಾಯಿಲನವರ, ಮೈಮುನ ಬೈರಕದಾರ, ಶಂಕ್ರ​‍್ಪ ಪೂಜಾರ, ಜಂದಿಸಾಬ ಬಳ್ಳಾರಿ, ಮಕ್ತುಮಸಾಬ ಮುಲ್ಲಾನವರ, ಸಾಕ್ರುಬಾಯಿ ಗೋಸಾವಿ, ಮುಂತಾದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.