ನದಿಗೆ 1.06 ಲಕ್ಷ ಕ್ಯೂಸೆಕ್ಸ್ ನೀರು : ಕಂಪ್ಲಿ-ಕೋಟೆಯಲ್ಲಿ ಮುಳುಗಿದ ಸಂಪರ್ಕ ಸೇತುವೆ : ಜಮೀನು, ದೇವಸ್ಥಾನಗಳು ಜಲಾವೃತ
1.06 lakh cusecs of water in the river: Link bridge submerged in Kampli-Kot: Land, temples inundated
ನದಿಗೆ 1.06 ಲಕ್ಷ ಕ್ಯೂಸೆಕ್ಸ್ ನೀರು : ಕಂಪ್ಲಿ-ಕೋಟೆಯಲ್ಲಿ ಮುಳುಗಿದ ಸಂಪರ್ಕ ಸೇತುವೆ : ಜಮೀನು, ದೇವಸ್ಥಾನಗಳು ಜಲಾವೃತ
ಕಂಪ್ಲಿ 29 : ತುಂಗಭದ್ರಾ ಜಲಾಶಯದಿಂದ 1.06ಲಕ್ಷ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಟ್ಟಿರುವುದರಿಂದ ಕಂಪ್ಲಿ-ಕೋಟೆಯಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಂಪ್ಲಿ ಗಂಗಾವತಿ ಸಂಪರ್ಕ ಸೇತುವೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು,ಕಂಪ್ಲಿ-ಗಂಗಾವತಿ ಸಂಪರ್ಕ ಕಡಿತಗೊಂಡಿದ್ದರೆ,ನದಿ ತೀರದ ಜಮೀನುಗಳು, ದೇವಸ್ಥಾನಗಳು ಹಾಗೂ ಸಂಪರ್ಕ ರಸ್ತೆಗಳು ಜಲಾವೃತಗೊಂಡಿವೆ. ಕೋಟೆ ಪ್ರದೇಶದ, ಪ್ರವಾಹದ ನೀರು ಆಂಜಿನೇಯ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಿದೆ. ನದಿ ತೀರದ ಸ್ಮಶಾನದ ರಸ್ತೆ, ಮಾಗಾಣಿ ರಸ್ತೆ ಹಾಗೂ ನದಿ ತೀರದ ಕಬ್ಬಿನ ಹಾಗೂ ಬಾಳೆ ತೋಟಗಳು ಜಲಾವೃತಗೊಂಡಿವೆ. ಕಂಪ್ಲಿ ಸಿರುಗಪ್ಪ ಮಾರ್ಗದಲ್ಲಿ ಇಟಗಿ ಗ್ರಾಮದ ಹತ್ತಿರ ಹಿನ್ನೀರು ಬಂದಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ.ಕಂಪ್ಲಿ ಭಾಗದ ಸಂಪರ್ಕ ರಸ್ತೆಗಳು, ಮಾಗಾಣಿ ರಸ್ತೆಗಳು ಜಲಾವೃತಗೊಂಡಿವೆ. ಕಂಪ್ಲಿ ಭಾಗದ ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳು ಹಾಗೂ ನೌಕರರ, ವ್ಯಾಪಾರಸ್ಥರು ಮತ್ತೆ ಸುತ್ತು ಬಳಸಿ ಗಂಗಾವತಿಗೆ ತೆರಳಬೇಕಾಗಿದೆ. ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮೇಲೆ ನೀರು ಬಂದಿರುವುದರಿಂದ ವಾಹನ ಹಾಗೂ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿದ್ದುಅಧಿಕಾರಿಗಳ ಭೇಟಿ : ತುಂಗಭದ್ರಾ ಜಲಾಶಯದಿಂದ ಅಧಿಕ ಪ್ರಮಾಣದ ನೀರನ್ನು ಬಿಟ್ಟಿರುವ ಹಿನ್ನೆಲೆಯಲ್ಲಿ ಕಂಪ್ಲಿ ಕೋಟೆಯಲ್ಲಿ ನದಿ ಮೈದುಂಬಿ ಹರಿಯುತ್ತಿದ್ದು, ಸಂಪರ್ಕ ಸೇತುವೆ ನೀರಿನಲ್ಲಿ ಮುಳುಗಿದ್ದು, ಸಂಚಾರ ಸ್ಥಗಿತಗೊಂಡಿದ್ದು, ಸ್ಥಳಕ್ಕೆ ಪ್ರಭಾರಿ ತಹಸಿಲ್ದಾರ್ ನರಸಪ್ಪ, ಪಿಐ ಕೆ.ಬಿ.ವಾಸುಕುಮಾರ್,ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರೀಶೀಲಿಸಿದರಲ್ಲದೆ, ನದಿಯಲ್ಲಿ ಪ್ರವಾಹ ಇರುವುದರಿಂದ ಯಾರೂ ನದಿಗೆ ಇಳಿಯಬಾರದು, ಮೀನುಗಾರರು ಮೀನಿ ಹಿಡಿಯಲು ನದಿಗೆ ತೆರಳಬಾರದು ಎಂದು ಸೂಚಿಸಿದರಲ್ಲದೆ, ನದಿ ತೀರದ ಗ್ರಾಮಗಳಲ್ಲಿ ಹಾಗೂ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪ್ರಭಾರಿ ತಹಸಿಲ್ದಾರ್ ನರಸಪ್ಪ, ಪಿಐ ಕೆ.ಬಿ.ವಾಸುಕುಮಾರ್ ತಿಳಿಸಿದರು. ಸಂಭವನೀಯ ಪ್ರವಾಹ ನುಗ್ಗುವ ಕಂಪ್ಲಿ ಕೋಟೆಯ ಮೀನುಗಾರರ ಕಾಲೋನಿಯಲ್ಲಿ ಮುನ್ನೆಚ್ಚರಿಕೆ ವಹಿಸಿದ್ದು, ಪ್ರವಾಹ ಅಧಿಕವಾದರೆ, ಮೀನುಗಾರರ ಕುಟುಂಬಗಳನ್ನು ಸ್ಥಳಾಂತರ ಮಾಡಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು. ಜು003ತುಂಗಭದ್ರಾ ಜಲಾಶಯದಿಂದ ನೀರನ್ನು ಬಿಟ್ಟಿರುವುದರಿಂದ ಕಂಪ್ಲಿ ಕೋಟೆಯ ಸಂಪರ್ಕ ಸೇತುವೆ ನೀರಿನಲ್ಲಿ ಮುಳುಗಿರುವುದು. ಜು003;1ಕೋಟೆಯಲ್ಲಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿರುವುದರಿಂದ ಕೋಟೆಯ ಹೊಳೆ ಆಂಜಿನೇಯಸ್ವಾಮಿ ದೇವಸ್ಥಾನ,ಕಬ್ಬಿನ ತೋಟ ಜಲಾವೃತಗೊಂಡಿದೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 