ಹೂವಿನ ಹಡಗಲಿ

ನೀರು, ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ: ಶಾಸಕ ಪಿ.ಟಿ.ಪರಮೇಶ್ವರನಾಯ್ಕ

ನೀರು, ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ  ನೀಡಿ: ಶಾಸಕ ಪಿ.ಟಿ.ಪರಮೇಶ್ವರನಾಯ್ಕ

ಲೋಕದರ್ಶನ ವರದಿ

ಹೂವಿನಹಡಗಲಿ :- ಮೈಲಾರಲಿಂಗೇಶ್ವರ ಜಾತ್ರೆಗೆ ಆಗಮಿಸಲಿರುವ ಲಕ್ಷಾಂತರ ಭಕ್ತರಿಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸಲು ಅಧಿಕಾರಿಗಳು  ಹೆಚ್ಚು ಶ್ರಮವಹಿಸಿ ಕಾರ್ಯನಿರ್ವಹಿಸಿ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಸೂಚಿಸಿದರು.

ತಾಲ್ಲೂಕಿನ ಮೈಲಾರ ಸುಕ್ಷೇತ್ರದಲ್ಲಿ ಜಾತ್ರಾ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ಸಭೆಗೆ ಅಧಿಕಾರಿಗಳು ಗೈರು ಅದವರಿಗೆ ಕಾರಣ ಕೇಳಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ,ಜಿ.ಪಂ.ಸಿಇಒ ಅವರಿಗೆ ಸೂಚಿಸಿದರು. ಜಾತ್ರೆಗೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಹೊಳೆ ನೀರು ಮತ್ತು ಬೋರ ವೆಲ್ ನೀರು ಸೇರಿ ಬಿಡುತ್ತಾರೆ ಎಂದ ಗ್ರಾಮಸ್ಥರು ಆರೋಪಕ್ಕೆ ಶಾಸಕರು ನೀರು ಪತ್ಯೇಕ ಬಿಡುವಂತೆ ಪಂಚಾಯ್ತಿ ಅಧಿಕಾರಿಗಳಿಗೆ ಸೂಚಿಸಿದರು.  

ಜಾತ್ರಾ ಸಂದರ್ಭದಲ್ಲಿ ಜನಾರೋಗ್ಯದ ಮೇಲೆ ದುಷ್ಪರಿಣಾಮ ಬೀರದಂತೆ ತಾತ್ಕಾಲಿಕ ನಾನಾ ಕಡೆಗಳಲ್ಲಿ ನಾಲ್ಕು ಆಸ್ಪತ್ರೆ ,ವೈದ್ಯರು,ಸಿಬ್ಬಂದಿ ನೇಮಕ,ಔಷಧಿ ಕೊರತೆಯಾಗದಂತೆ ನೋಡಿ ಕೊಳ್ಳಿ ,ಜತೆಗೆ ಜಾತ್ರೆಗೆ ಬರುವ ವಾಹನಗಳಿಗೆ ಸುಂಕ ವಸೂಲಿ ಮಾಡಬೇಡಿ ಎಂದ ಅವರು ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ತುಂಗಭದ್ರಾ ನದಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದ ಅವರು ಜಾತ್ರಾ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು. ಜಾತ್ರಾ ಮುನ್ನವೇ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲು ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಹೇಳಿದರು. 

ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಅನುಕೂಲವಾಗುವಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ನೇರ ಬಸ್ ಸಂಪರ್ಕ ಕಲ್ಪಿಸಬೇಕು. ಕೇವಲ ಆದಾಯವನ್ನು ನಿರೀಕ್ಷಿಸದೇ ಸೇವಾ ದೃಷ್ಟಿಯಿಂದಲೂ ರಾತ್ರಿ ಸಂದರ್ಭದಲ್ಲಿಯೂ ಸಹ ಸಮರ್ಪಕವಾಗಿ ಬಸ್ ಓಡಿಸಬೇಕು ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಹೆಚ್ಚುವರಿ ಹಣ ವಸೂಲಿ ಮಾಡಬೇಡಿ ಎಂದು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ ಅವರು 

ಸಭೆಯಲ್ಲಿ  ಜಿಲ್ಲಾಧಿಕಾರಿ ವೆಂಕಟೇಶ, ಜಿ.ಪಂ. ಸಿಇಒ ಹರ್ಷಲ್ ಬೋಯರ್,ದೇವಸ್ಥಾನ ಧರ್ಮಕರ್ತ ಶ್ರೀಗುರು ವೆಂಕಪ್ಪಯ್ಯ ಒಡೆಯರ್, ಸಹಾಯಕ ಆಯುಕ್ತ ಟಿ.ವಿ.ಪ್ರಕಾಶ್, ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಯಂ.ಹೆಚ್.ಪ್ರಕಾಶ್ರಾವ್, ತಹಶೀಲ್ದಾರ್ ಕೆ.ಶರಣಮ್ಮ,ಪುರಸಭೆ ಅಧ್ಯಕ್ಷ ಜ್ಯೋತಿ ಮಲ್ಲಣ್ಣ, ಅಟವಾಳಗಿ ಕೊಟ್ರೇಶ,ಬ್ಯಾಲಹುಣ್ಸಿ ಬಸವನಗೌಡ ಪಾಟೀಲ,ಜಿ.ವಸಂತ,ದೇವಸ್ಥಾನ ಕಾರ್ಯನಿವರ್ಾಹಕಾಧಿಕಾರಿ  ಬಿ.ಎಂ.ಕೃಷ್ಣಪ್ಪ ಇದ್ದರು 

ಸುದ್ದಿ ಓದಿ