ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಯಬೇಕು: ಉಮಾಪತಿ
ಲೋಕದರ್ಶನ ವರದಿ
ಹೂವಿನಹಡಗಲಿ13: ನಗರ ಪ್ರದೇಶಗಳಲ್ಲಿ ಗುರು-ಶಿಷ್ಯರ ಸಂಬಂಧ ಯಾಂತ್ರಿಕವಾದರೇ ಇತ್ತ ಗ್ರಾಮಾಂತರ ಪ್ರದೇಶದಲ್ಲಿ ಹಳೆ ವಿದ್ಯಾರ್ಥಿಗಳು ಗುರುವಿನ ಬಗ್ಗೆ ಗೌರವ,ಸಂಸ್ಕೃತಿ,ಸಂಸ್ಕಾರವೇ ವಿದ್ಯಾರ್ಥಿ ಜೀವನದಲ್ಲಿ ಕಲಿತ ಪಾಠಕ್ಕೆ ನಿದರ್ಶನವಾಗಿದೆ ಎಂದು ಶಿಕ್ಷಕ ಉಮಾಪತಿ ಹೇಳಿದರು.
ಪಟ್ಟಣದ ಜಿಪಿಜಿ ಸರ್ಕಾರಿ ಪ್ರೌಢಶಾಲೆಯ 1987ರ ಎಸ್ಎಸ್ಎಲ್ಸಿ ಬ್ಯಾಚ್ನ ಹಳೆ ವಿದ್ಯಾರ್ಥಿಗಳು ಭಾನುವಾರ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರಸ್ತುತ ತಂತ್ರಜ್ಞಾನ ಬೆಳೆದಿದ್ದು, ಭಾರತ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಯಬೇಕಾಗಿದೆ ಎಂದು ಅವರು ಶಿಕ್ಷಕ ವೃತ್ತಿ ಪಾವಿತ್ರವಾದದ್ದು ಜತೆಗೆ ಗುರುಗಳಿಂದಲೇ ಸಮಾಜ ಪರಿರ್ವತನೆಗೆ ಸಾಧ್ಯ ಎಂದ ಅವರು ಕೆಲ ಶಿಕ್ಷಕರು ಕುಡಿದು ಶಾಲೆಯಲ್ಲಿ ಪಾಠ ಮಾಡುವುದರಿಂದ ಶಿಕ್ಷಕ ಸಮೂಹಕ್ಕೆ ಕಳಂಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಸಹಾಯಕ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎಂ.ಬೆಟ್ಟಯ್ಯ ಮಾತನಾಡಿ ಯುವಕರು ಸಮಾಜ ಮುಖಿ ಕೆಲಸ ಮಾಡುವ ಮೂಲಕ ಸಾರ್ಥಕ ಬದುಕನ್ನು ಕಂಡು ಕೊಳ್ಳಿ ಎಂದರು.ಶಿಕ್ಷಕಿ ಶಾಂತಮ್ಮ ಮಾತನಾಡಿ ಬಡತನದಲ್ಲಿ ಬೆಳೆದ ನಾನು ಗುರುಗಳ ಮಾರ್ಗದರ್ಶನದಿಂದ ವೃತ್ತಿಯಲ್ಲಿ ಕನ್ನಡ ಟೀಚರ್ ಆಗಬೇಕೆಂಬ ಕನಸು ನನಸು ಮಾಡಿದ್ದಾನೆ ಎಂದ ಅವರು ಗುರು ಮೀರಿದ ಶಿಷ್ಯರಾಗಿ ಬೆಳೆಯಬೇಕು ಎಂದ ಅವರು ಗುರುವಂದನಾ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಶ್ಲಾಘಿಸಿದರು. ದೈಹಿಕ ಶಿಕ್ಷಕ ನಾಗೇಂದ್ರನಾಯ್ಕ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಶಾಂತಮೂರ್ತಿ ಬಿ.ಕುಲಕರ್ಣಿ ಗುರು-ಶಿಷ್ಯರ ಬಗ್ಗೆ ಮಾತನಾಡಿದರು.ಜಿಪಿಜಿ ಉಪ ಪ್ರಾಚಾರ್ಯ ದಾದಾ ಸಾಹೇಬ್ ಕಡ್ಲಿ ಇದ್ದರು.
ಗುರುಗಳಾದ ಎಚ್.ಎಂ.ಬೆಟ್ಟಯ್ಯ, ವಿಶ್ವನಾಥ ಆಚಾರ್ಯ,ಉಮಾಪತಿ, ಡಿ.ಸಿ.ಜೋಷಿ,ಯು.ಶಾಂತಮ್ಮ, ಎಂ.ಟಿ.ವೇದಮೂರ್ತಿ, ನಾಗೇಂದ್ರನಾಯ್ಕ ಅವರನ್ನು ಸನ್ಮಾನಿಸಲಾಯಿತು.ಶಿಕ್ಷಕಿ ರೇಣುಕಾ ಸರಾಫ್ ಪ್ರಾರ್ಥಿಸಿದರು ನಂತರ ಶಿಕ್ಷಕ ಖಾದರಬಾಷಾ ಸ್ವಾಗತಿಸಿದರು.ಶಿಕ್ಷಕ ನಿರಂಜನಾ ಮೂರ್ತಿ ಪ್ರಾಸ್ತಾವಿಕ ಮಾತನಾಡಿದರು.ಮು.ಗು.ಸುರೇಶ ಅಂಗಡಿ ಮತ್ತು ಪ್ರಾಚಾರ್ಯ ಕೊಟ್ರೇಶ ನಿರೂಪಿಸಿದರು.ಜಿಪಿಜಿ ಎಕ್ಸಲೆಂಟ್ 1987ನೇ ಅಧ್ಯಕ್ಷ ಎಚ್.ಎಸ್.ಪ್ರಶಾಂತ ಸೇರಿದಂತೆ ಮಾಜಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕೀರ್ತಿವಿಜಯ ಜೈನ್, ಬಸೆಟ್ಟಿ ನಾಗರಾಜ, ಗೋಪಿನಾಯ್ಕ, ಟಿ.ಎಸ್.ಜಗದೀಶ, ದಿನೇಶ ರೆಡ್ಡಿ, ರಫಿ ಹಂಪಸಾಗರ, ಶಶಿಕಾಂತ ಶಿಕ್ಷಕರ ಪರಿಚಯವನ್ನು ಮಾಡಿದರು .