ವಿವೇಕಾನಂದರ ಜಯಂತಿ : ದಾನಿಗಳಿಗೆ ಸನ್ಮಾನ
ಹೂವಿನಹಡಗಲಿ 14: ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಕೊಂಡು ಸಮಾಜಕ್ಕೆ ಮಾದರಿ ಆಗಬೇಕು ಎಂದು ತುಂಗಭದ್ರಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಡಾ.ಎಂ.ಧರ್ಮಣ್ಣ ಹೇಳಿದರು.
ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ ಸಾಕ್ಷರತಾ ವತಿಯಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ಹಾಗೂ ದಾನಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ಯುವಕರ ಚೇತನ ವಿವೇಕಾನಂದರು ಸಮಾಜದ ಎಲ್ಲ ವರ್ಗಗಳ ಜನರ ಹಿತಕ್ಕಾಗಿ ಶ್ರಮಿಸಿದ್ದರು ಜತೆಗೆ ಚಿಕಾಗೋ ಭಾಷಣ ಅವರನ್ನು ವಿಶ್ವದಾದ್ಯಂತೆ ಪ್ರಸಿದ್ದಿ ತಂದಿತು ಎಂದರು.
ಸಂಸ್ಥೆಯ ನಿರ್ದೇಶಕೀ ಟಿ.ಮಾಲತೇಶ ಯುವಕರಿಗೆ ವಿವೇಕಾನಂದ ಸದಾ ಸ್ಪೂರ್ತಿ ಎಂದರು.199-2000 ನೇ ಎಸ್ಸೆಸ್ಸೆಲ್ಸಿ ಬ್ಯಾಚ್ ವಿದ್ಯಾರ್ಥಿನಿ ಶಾಲೆ ಕೆ.ರಶ್ಮಿ ಶಾಲೆಗೆ 22,000 ಮೌಲದ್ಯ ಅಹುಜಾ ಮೈಕ್ ಸೆಟ್ ದಾನ ನೀಡಿದ ನಿಮಿತ್ತ ತಂದೆ ಕೆ.ರುದ್ರಪ್ಪ ಅವರನ್ನು ಸನ್ಮಾನಿಸಲಾಯಿತು.ವಿದ್ಯಾರ್ಥಿಗಳಾದ ಮಾಗಳದ ಸುನೀತಾ,ಕೆ.ಸಹನಾ,ಕೀರ್ತನ, ಆಂಗ್ಲ ವಿಷಯ ಶಿಕ್ಷಕ ಲಂಬಾಣಿ ಗಿಡ್ಡಾನಾಯ್ಕ ವಿವೇಕಾನಂದರ ಕುರಿತು ಮಾತನಾಡಿದರು.ಮುಖ್ಯಗುರು ಸುರೇಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸಹ ಶಿಕ್ಷಕರ ಸಂಘದ ಕೋಶಾಧ್ಯಕ್ಷ ಬಸಪ್ಪ ಕೆ.ಸ್ವಾಗತಿಸಿದರು.ಶಿಕ್ಷಕರಾದ ಸ್ವಾಮಿನಾಥ ರಾಮಸ್ವಾಮಿ, ಆನಂದ ಜಿ, ಗೀತಾ ಪಿಎಂ.ಪ್ರತಿಮಾ,ಎನ್.ರೇಖಾ, ಎಸ್.ಜಯಮ್ಮ, ವೈ.ಸಂಗಮೇಶ ಸುಂಕದ ಪ್ರಸಾ,ಸಂತೋಷ ಕುಮಾರ ಎಸ್ ಇದ್ದರು