ಶಾಮನೂರು ಶಿವಶಂಕರ್ಪ ನಿಧನಕ್ಕೆ ವೀರಶೈವ ಘಟಕ ಸಂತಾಪ
ಹೂವಿನಹಡಗಲಿ 15- ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಮಾಜಿ ಸಚಿವರು ಮತ್ತು ಭಾರತ ವೀರಶೈವ ಮಹಾಸಭಾ ಅದ್ಯಕ್ಷರಾದ ಶಾಮನೂರು ಶಿವಶಂಕರ್ಪ ನಿಧನಕ್ಕೆ ಹೂವಿನಹಡಗಲಿ ವೀರಶೈವ ತಾಲ್ಲೂಕು ಘಟಕ ತೀವ್ರ ಸಂತಾಪ ಸಲ್ಲಿಸಿದ್ದಾರೆ. ಪಟ್ಟಣದ ಮಲ್ಲನಕೆರೆ ಮಠದಲ್ಲಿ ಸೋಮವಾರ ಚನ್ನಬಸವ ಸ್ವಾಮಿಗಳ ಸಾನಿಧ್ಯದಲ್ಲಿ ವೀರಶೈವ ತಾಲ್ಲೂಕು ಘಟಕ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ವೀರಶೈವ ಸಮಾಜ ತಾಲ್ಲೂಕು ಅದ್ಯಕ್ಷ ಸಿಕೆಎಂ.ಬಸವಲಿಂಗಸ್ವಾಮಿ ಮಾತನಾಡಿ ವೀರಶೈವ ಸಮಾಜಕ್ಕೆ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಶೈಕ್ಷಣಿಕ. ಆರೋಗ್ಯ ಕೊಡುಗೆ ನೀಡಿದ್ದಾರೆ ಎಂದರು.ನಗರ ಘಟಕ ಅದ್ಯಕ್ಷ ಎಂ.ಉಮೇಶ,ವರ್ತಕ ಎಸ್.ಎಂ.ಅಶೋಕ, ಮತ್ತು ಬಿ.ಬಿ.ಅಸುಂಡಿ, ಪಿ. ಕೇಶಪ್ಪ, ಸೊಪ್ಪಿನ ಮಂಜುನಾಥ, ವಿ.ಸಿ.ಪಾಟೀಲ, ಹಣ್ಣಿ ವೀರೇಶ. ಬಿ.ಸಿದ್ದೇಶ,ಸೊಪ್ಪಿನ ವೀರಣ್ಣ, ಕರ್ಜಗಿ ಕೊಟ್ರೇಶ, ಕೆ.ಜೆ.ಮಲ್ಲನಗೌಡ, ಜಗದೀಶ ಇದ್ದರು.