ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ
Unopposed election of new office bearers
ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ
ಕೊಪ್ಪಳ : ಇಲ್ಲಿನ ಸವಿತಾ ಸಮಾಜ ವಿವಿದೋದ್ದೇಶ ಸಹಾಕರ ಸಂಘ ನಿಯಮಿತಕ್ಕೆ ಇಂದು ಜರುಗಿದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು 2024 ರಿಂದ 2029 ವರೆಗಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ನಾಗರಾಜ ಕಂಪ್ಲಿ ಹಾಗೂ ಉಪಾಧ್ಯಕ್ಷರಾಗಿ ಶಿವಮೂರ್ತಿ ಚಿಕ್ಕಮಾದಿನಾಳ ಇವರನ್ನು ಚುನಾವಣಾಧಿಕಾರಿಗಳು ಆಯ್ಕೆಗೊಳಿಸಿ ಘೋಷಿಸಿದ್ದಾರೆ.
ಇನ್ನುಳಿದಂತೆ ಕಾರ್ಯಕಾರಿ ನಿರ್ದೇಶಕ ಮಂಡಳಿಗೆ ದೇವಪ್ಪ ಕರ್ಕಿಹಳ್ಳಿ, ವಿಠ್ಠಲ ಗೌರಿಅಂಗಳ, ತುಕಾರಾಂ ಸವಿತಾ, ಮಾರುತಿ ಸೂಗೂರು, ಬಡಪ್ಪ ಮಲ್ಕಾಪುರ, ರಾಘವೇಂದ್ರ ಸವಿತಾ, ಮಹಿಳಾ ನಿರ್ದೇಶಕರಾಗಿ ಶ್ರೀಮತಿ ಅಯ್ಯಮ್ಮ ಸವಿತಾ ಹಾಗೂ ಶ್ರೀಮತಿ ರಂಗಮ್ಮ ಸವಿತಾ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಜಿಲ್ಲಾ ಉಪನಿಬಂಧಕರ ಕಛೇರಿಯ ಪ್ರಥಮ ದರ್ಜೆಯ ಸಹಾಯಕರೂ ಹಾಗೂ ಸವಿತಾ ಸಮಾಜ ವಿವಿದೋದ್ಧೇಶ ಸಹಕಾರ ಸಂಘ ನಿಯಮಿತದ ಚುನಾವಣಾಧಿಕಾರಿಯಾಗಿ ನಿರ್ಮಲಾ ಬ ಗದಗೇರಿ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಸವಿತಾ ಸಮಾಜದ ಮುಖಂಡರಾದ ದೇವಪ್ಪ ಗೌರಿಅಂಗಳ, ರವಿಕುಮಾರ ಸೂಗೂರು, ಕಲ್ಲಪ್ಪ ಹೊನ್ನುಂಚಿ, ಈಶಪ್ಪ ಚಿಕ್ಕಮಾದಿನಾಳ, ಕಾರ್ಯದರ್ಶಿ ಯಲ್ಲಪ್ಪ ಸವಿತಾ, ಪಿಗ್ಮಿ ಏಜೆಂಟ್ ನಾಗರಾಜ ಸವಿತಾ, ಸಣ್ಣ ಯಲ್ಲಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ 