ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ತುಲಾಭಾರ ಸೇವೆ ಹಾಗೂ ಉಡಿತುಂಬುವ ಕಾರ್ಯಕ್ರಮ
Tulabhara Seva and Uditumba program at Amminabawi Sansthan Panchagriha Hiremath
ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ತುಲಾಭಾರ ಸೇವೆ ಹಾಗೂ ಉಡಿತುಂಬುವ ಕಾರ್ಯಕ್ರಮ
ಧಾರವಾಡ, 10 : ವೀರಶೈವ-ಲಿಂಗಾಯತ ಧರ್ಮದ ಪಂಚಪೀಠಗಳಲ್ಲಿ ಒಂದಾದ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶಾಖಾಮಠವಾದ ತಾಲೂಕಿನ ಅಮ್ಮಿನಬಾವಿಯ ಶ್ರೀಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ 92ನೆಯ ವರ್ಧಂತಿ ಮಹೋತ್ಸವ ಆಗಷ್ಟ-13ರಂದು (ಬುಧವಾರ) ಮುಂಜಾನೆ 10 ಗಂಟೆಗೆ ಶ್ರೀಮಠದ ಕಿರಿಯಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜರುಗಲಿದೆ.
ಶ್ರೀಗಳ ಪರಿಚಯ : ಶ್ರೀಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ 1939ರಲ್ಲಿ ತಮ್ಮ 5ನೆಯ ವರ್ಷದಲ್ಲಿಯೇ ಶ್ರೀಸಂಸ್ಥಾನ ಪಂಚಗೃಹ ಹಿರೇಮಠದ ಗುರುತ್ವಾಧಿಕಾರವನ್ನು ಹೊಂದಿದ್ದು, ಒಂದರ್ಥದಲ್ಲಿ ಅವರದು ಸಂಪೂರ್ಣ 92 ವಸಂತಗಳ ಸುದೀರ್ಘ ಸನ್ಯಾಸ. ಧರ್ಮ ಜಾಗೃತಿ ಕೈಂಕರ್ಯಕ್ಕೆ ಮೊದಲ ಆದ್ಯತೆ ನೀಡಿ, ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಇಷ್ಟಲಿಂಗಾನುಷ್ಠಾನಗೈದು ಭಕ್ತಗಣಕ್ಕೆ ಧರ್ಮದ ಅರಿವು ತುಂಬಿದ್ದಾರೆ. ಅಕ್ಷರ ಮತ್ತು ಪುಸ್ತಕ ಪ್ರೀತಿಯೊಂದಿಗೆ ಪ್ರಾಥಮಿಕ ಹಾಗೂ ಪೌಢ ಶಾಲೆಗಳನ್ನು ಆರಂಭಿಸಿ ಹಳ್ಳಿಗಾಡಿನ ಮಕ್ಕಳ ಶಾಲಾ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿದ್ದಾರೆ. ಶ್ರೀಗಳು ರಚಿಸಿರುವ 108 ವಚನಗಳ ‘ಶ್ರೀಶಾಂತೇಶ್ವರ ವಚನ ಸುಧೆ’ ಎಂಬ ಕೃತಿ ಪ್ರಕಟಗೊಂಡಿದೆ.
ಉಡಿತುಂಬುವ ಕಾರ್ಯಕ್ರಮ : ಶ್ರೀಮಾತೆ ಆದಿಶಕ್ತಿಯ ಸ್ವರೂಪಿಗಳಾದ 108 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಶೋಭಾ ಯರಗಂಬಳಿಮಠ ಅವರಿಂದ ಜರುಗಲಿದೆ. ಶ್ರೀಮಠದ ಹಲವಾರು ಭಕ್ತರು ಶ್ರೀಶಾಂತಲಿಂಗ ಶ್ರೀಗಳಿಗೆ ವಿವಿಧ ತುಲಾಭಾರ ಸೇವೆ ಜರುಗಿಸಿ ಭಕ್ತಿ ಸಮರ್ಿಸಲಿದ್ದಾರೆ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 