ಶಿವಕುಮಾರ ಪಾಟೀಲರಿಗೆ ಸನ್ಮಾನ
Tribute to Shivakumar Patil
ಶಿವಕುಮಾರ ಪಾಟೀಲರಿಗೆ ಸನ್ಮಾನ
ಹುಬ್ಬಳ್ಳಿ 04 : ಗೋಪನಕೊಪ್ಪದ ಶಾಂತವೀರ ಲೇ ಓಟ್‌ನ ಸುಂದರವಾದ ರಸ್ತೆಯನ್ನು ನಿರ್ಮಿಸಿ ಕೊಟ್ಟಿದ್ದಕ್ಕಾಗಿ ವಾರ್ಡ ನಂಬರ್-28 ರ ಕಾರ್ೋರೇಟರ್ ಆದ ಶಿವಕುಮಾರ ಪಾಟೀಲ ಶಾಂತವೀರ ಲೇ ಓಟ್ ನಿವಾಸಿಗಳ ಸಂಘದ ಪರವಾಗಿ ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷರಾದ ಆನಂದ ಹೆಚ್ ವಾಯಿ ಅವರ ಮನೆಯಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಿದ್ದಕ್ಕಾಗಿ ಕಾಂಟ್ರ್ಯಾಕ್ಟರ್ ಆದ ಸಂಗಮೇಶ ಅವರನ್ನೂ ಸಹ ಅಭಿನಂದಿಸಲಾಯಿತು.
ಸನ್ಮಾನ ಸ್ವೀಕರಿಸಿದ ಶಿವಕುಮಾರ ಪಾಟೀಲ ಅವರು ಮಾತನಾಡಿ, ಮುಂಬರುವ ದಿನಗಳಲ್ಲಿ ಆದ್ಯತೆಯ ಮೇರೆಗೆ ಬಡಾವಣೆಯ ಎಲ್ಲ ಕೆಲಸ ಕಾರ್ಯಗಳನ್ನು ಮಾಡುವುದಾಗಿ ಆಶ್ವಾಸನೆ ನೀಡಿದರು. ಕಾರ್ಯಕ್ರಮದಲ್ಲಿ ಆನಂದ ಹೆಚ್ ವಾಯಿ, ಸಂಜೀವಕುಮಾರ ಭೂಶೆಟ್ಟಿ, ಮೃತ್ಯುಂಜಯ್ ಶೆಟ್ಟರ್, ಬಸವರಾಜ್ ಶೆಟ್ಟರ್, ವಿಕ್ರಮ್ ವೆರ್ಣೇಕರ್, ಆರ್ ಕೆ ಹೊಸಮನಿ, ದೀಪಕ್ ಪುರಾಣಿಕ್, ಗುಡ್ಡಪ್ಪ ಭೂಶೆಟ್ಟಿ, ಅಶೋಕ ಬಣಗಾರ್, ರಮೇಶ ಪಾಟೀಲ, ಸುನೀಲ್ ಜೀವನಗೌಡ್ರ, ಸಿದ್ದೇಶ ಅಂಗಡಿ, ರಘು ಸಂಗಮಿ, ಶಿವನಗೌಡ್ರ ಪಾಟೀಲ, ರಾಜು ಭೂಶೆಟ್ಟಿ ಹಾಗೂ ಶಾಂತವೀರ ಲೇ ಓಟ್ ನಿವಾಸಿಗಳು ಉಪಸ್ಥಿತರಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 