ನಡೆಯದ ಟಿಪ್ಪು ಭಾವಚಿತ್ರದ ಮೆರವಣಿಗೆ: ಯುವಕರು ನಿರಾಸೆ
ಲೋಕದರ್ಶನ ವರದಿ
ಜಮಖಂಡಿ 21:ನಗರದ ಟಿಪ್ಪು ಸುಲ್ತಾನ ವೃತ್ತದಲ್ಲಿ ಇಂದು ನಡೆಯಬೇಕಾಗಿದ್ದ ಟಿಪ್ಪು ಭಾವಚಿತ್ರದ ಮೆರವಣಿಗೆ ನಡೆಯದೇ ಕಾರಣ ಸಮೂದಾಯದ ಯುವಕರು ನಿರಾಸೆ ಭಾವ ವ್ಯಕ್ತಪಡಿಸಿದರು. ಕುಂಚನೂರ ವೃತ್ತದಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡೆತಡೆ ಉಂಟು ಮಾಡಿದ ಘಟನೆ ನಡೆದಿದೆ,
ಕುಂಚನೂರ ವೃತ್ತ ಮತ್ತು ಹೊರವಲಯ ಕೆಟ್ಟೆ ಕೆರೆ ಪ್ರದೇಶದಲ್ಲಿ ಕೆಲ ಸಮೂದಾಯದ ಯುವಕರಿಂದ ಅಲಿನ್ಲ ವಾತಾವರಣ ಕೆಲಕಾಲ ಪ್ರಕ್ಷಬ್ಧ ಉಂಟಾಗಿತ್ತು. ಟಿಪ್ಪು ಸುಲ್ತಾನ ಅವರ ಜನ್ಮದಿನ ಆಚರಣೆಯಂದು ಡಿಜೆ ಸೌಂಡ್ ಸಿಸ್ಟಂ ಅಳವಡಿಕೆಗೆ ಪೋಲೀಸ್ ಇಲಾಖೆ ಅನುಮತಿ ನೀಡದಿರುವುದನ್ನು ಪ್ರಶ್ನಿಸಿ ಕೆಲ ಯುವಕರು ಆಕ್ರೋಶ ವ್ಯಕ್ತಪಡಿಸಿ, ರಸ್ತೆ ತಡೆ ನಡೆಸಿ, ವಾಹನ ಸಂಚಾರಕ್ಕೆ ಅಡೆತಡೆ ಉಂಟು ಮಾಡಲಾಗಿತ್ತು. ಇದರಿಂದ ಶಹರದ ಕೆಲವು ಪ್ರದೇಶಗಳಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣಗೊಂಡಿತ್ತು. ಪೋಲೀಸ್ ಬಂದೋಬಸ್ತಿ ಹೆಚ್ಚಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತವಾಗಿ ಬೇರೆ ತಾಲೂಕಿನ ಪೋಲಿಸರನ್ನು ಕರೆಸಲಾಗಿ ಬೀಗಿ ಬಂದೋ ಬಸ್ತ್ ನಡೆಸಲಾಗಿಯಿತು.
ಕುಂಚನೂರ ವೃತ್ತದಲ್ಲಿ ಕೆಲವೊಂದು ಸಂಘಟನೆ ಯುವಕರು ತಮ್ಮದೇ ಆದ ಪ್ರತ್ಯೇಕ ಧ್ವಜಗಳನ್ನು ಹಾರಿಸಿಕೊಂಡು ತಿರುಗುತ್ತಿದ್ದು ಕಂಡು ಬಂದಿತು. ರಸ್ತೆ ಮಧ್ಯದಲ್ಲಿದ್ದ ಯುವಕರನ್ನು ಚದುರಿಸಲು ಕೆಲಕಾಲ ಪೋಲೀಸರು ಹರಸಾಹಸ ಪಟ್ಟರು.ಒಂದು ಗುಂಪು ಕುಂಚನೂರು ವೃತ್ತದಲ್ಲಿ ರಸ್ತೆತಡೆ ನಡೆಸಿದರೆ ಮತ್ತೊಂದು ಗುಂಪು ಕೆಟ್ಟೆಕೆರೆ ಬಳಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಮೇಲೆ ನಿಂತು ವಾಹನಗಳನ್ನು ತಡೆಯುವುದು ಕಂಡು ಬಂತು.ಕೆಲಂದಿಷ್ಟು ಯುವಕರು ರಸ್ತೆಯ ಮೇಲೆ ಕುಳಿತು ಟಿಪ್ಪು, ಡಾ,ಅಂಬೇಡ್ಕರ್, ಬುದ್ದ ಅವರ ಭಾವಚಿತ್ರಗಳನ್ನು ಹಿಡಿದು ಪ್ರತಿಭಟನೆಯನ್ನು ನಡೆಸಿದರು. ಶಾಸಕ ಆನಂದ ನ್ಯಾಮಗೌಡ ಅವರ ವಿರುದ್ದ ಘೋಷಣೆಯನ್ನು ಕೂಗುತ್ತಿರುವುದು ಸಾಮಾನ್ಯವಾಗಿತ್ತು.
ಅನುಮತಿ-ಟಿಪ್ಪು ಸುಲ್ತಾನ ಜಯಂತಿಯಂದು ಬೃಹತ್ ಮೆರವಣಿಗೆ ಮೂಲಕ ಶಹರದ ಬೀದಿಗಳಲ್ಲಿ ಮೆರವಣಿಗೆ ನಡೆಸಲು ಸಿದ್ದರಾಗಿದ್ದ ಯುವಕರಿಗೆ ಮೆರವಣಿಗೆ ರದ್ದಾಗಿದ್ದು ನಿರಾಸೆ ತಂದಿತ್ತು. ಕೊನೆಗೆ ಸಂಜೆ ಟಿಪ್ಪು ವೃತ್ತದ ಬಳಿ ಸಮಾರಂಭವೊಂದು ಆಯೋಜಿಸಲಾಗಿತ್ತು.