ಹೂವಿನ ಹಡಗಲಿ

ಸಿದ್ದಾಂತ ಶಿಖಾಮಣಿ ಗ್ರಂಥ: ಶಿವಾಗಮ ಆಧಾರಿತ ಕೃತಿ

ಸಿದ್ದಾಂತ ಶಿಖಾಮಣಿ ಗ್ರಂಥ: ಶಿವಾಗಮ ಆಧಾರಿತ ಕೃತಿ

ಲೋಕದರ್ಶನ ವರದಿ 

ಹೂವಿನ ಹಡಗಲಿ 05 : ಸಿದ್ಧಾಂತ ಶಿಖಾಮಣಿ’ ಗ್ರಂಥವು ವೀರಶೈವ ಸಿದ್ದಾಂತದ ಆಚರಣೆಗಳು, ಧಾರ್ಮಿಕ ಪರಂಪರೆ, ಜೀವಾತ್ಮ ಪರಮಾತ್ಮರ ಅನುಸಂಧಾನ ಕುರಿತ ಶಿವಾಗಮ ಆಧಾರಿತ ಮಹತ್ವದ ಕೃತಿಯಾಗಿದೆ ಎಂದು ಸಾಹಿತಿ,ನಿವೃತ್ತ ಮುಖ್ಯಗುರುಗಳಾದ ಎಂ.ಪಿ.ಎಂ ಕೊಟ್ರಯ್ಯ ಅಭಿಪ್ರಾಯಪಟ್ಟರು.  ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ತಾಲೂಕಿನ ಪುರ ಗ್ರಾಮದ ಸೋಗಿ ಪುರವರ್ಗ ಕಟ್ಟಿಮನಿ ಮಠದಲ್ಲಿ ಆಯೋಜಿಸಲಾಗಿದ್ದ  ಶ್ರೀಷ.ಬ್ರ.ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಪೀಠಾರೋಹಣದ ರಜತ ಮಹೋತ್ಸವ ದತ್ತಿ,  ಕಾಳಮ್ಮ ಸಿದ್ದಪ್ಪ  ಕರಿಶೆಟ್ಟಿ ಸ್ಮಾರಕ ದತ್ತಿ, ಶ್ರೀಮತಿ ಸೊಪ್ಪಿನ ನೀಲಮ್ಮ ಹುಚ್ಚಮ್ಮ ಸ್ಮರಣಾರ್ಥ ದತ್ತಿ, ಅಂಗಡಿ ವೀರಭದ್ರ​‍್ಪ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ, 139ನೇ ಮಾಸಿಕ ಧರ್ಮಸಭೆ,  ಜಗದ್ಗುರು ರೇಣುಕಾಚಾರ್ಯರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ’ಸಿದ್ದಾಂತ ಶಿಖಾಮಣಿ’ ಗ್ರಂಥದ ಕುರಿತು ಮಾತನಾಡಿದರು. ಶ್ರೀಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  ತಾಲೂಕು ಜಂಗಮ ಪೌರೋಹಿತ್ಯ ಬಳಗದ ಅಧ್ಯಕ್ಷ ವೀರೇಶ್ ರ ನೇತೃತ್ವದಲ್ಲಿ ವೇದಘೋಷ ಮಾಡಲಾಯಿತು.ಕೋಗಳಿಯ ಸಂಗೀತ ಕಲಾವಿದ ಶಂಕರಯ್ಯಸ್ವಾಮಿಗಳು ಪ್ರಾರ್ಥಿಸಿದರು.  

ದತ್ತಿದಾನಿ, ಗೌರೀಶ ಅಂಗಡಿ ಸ್ವಾಗತಿಸಿದರು. ಶ್ರೀಮಠದ  ಧರ್ಮಕರ್ತರಾದ ಪಿ.ಕೆ.ಎಂ ವಿಶ್ವಾನಂದಸ್ವಾಮಿಗಳು, ಅಂಗೂರಿನ ಪೂಜ್ಯರು ಧ್ವಜಾರೋಹಣ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು, ವಿಶ್ರಾಂತ ಪ್ರಾಚಾರ್ಯರ  ಡಾ.ಕೆ.ರುದ್ರ​‍್ಪ ಮಾತನಾಡಿದರು. ವಿಶ್ರಾಂತ ಪ್ರಾಚಾರ್ಯರಾದ   ಶಾಂತಮೂರ್ತಿ ಬಿ ಕುಲಕರ್ಣಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಎ.ಎಂ.ಹಾಲಯ್ಯ, ಹಿರಿಯರಾದ    ವಿ.ಸಿ.ಪಾಟೀಲ್,ಓಲಿ ಈಶಪ್ಪ, ಗಡ್ಡಿಗುಡ್ಡಪ್ಪ ಇದ್ದರು. ಅಧ್ಯಕ್ಷತೆಯನ್ನು ಕಸಾಪ  ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್ ವಹಿಸಿದ್ದರು. ಹಕ್ಕಂಡಿಯ ಮೈಲಾರಲಿಂಗೇಶ್ವರ ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮ ನೆರವೇರಿತು. ಶ್ರೀಮಠದ ಭಕ್ತರಿಗೆ,ಸೇವಾರ್ಥಿಗಳಿಗೆ ಗುರುರಕ್ಷೆ ನೀಡಲಾಯಿತು. ಸಾನಿಧ್ಯ ವಹಿಸಿದ್ದ ಶ್ರೀಷ.ಬ್ರ.ಶಿವಯೋಗಿಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಂಗೂರೇಶ್ವರ ಮಠ, ಅಂಗೂರು ಆಶೀರ್ವಚನ ನೀಡಿದರು. ದತ್ತಿದಾನಿಗಳು,ಶ್ರೀಮಠದ ಸೇವಾ ಸಮಿತಿಯ ಪ್ರಭು ಸೊಪ್ಪಿನ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ