ವಾಹನ ಚಾಲಕರಿಗೆ ರಸ್ತೆ ಸುರಕ್ಷತೆ ಅಭಿಯಾನ: ಬೀದಿ ನಾಟಕ ಪ್ರದರ್ಶನ
Road safety campaign for motorists: Street play performance
ಯಮಕನಮರಡಿ 24: ವಾಹನ ಚಾಲಕರು ರಸ್ತೆ ನಿಯಮವನ್ನು ಪಾಲಿಸಿ, ಜಾಗೃತಿಯಿಂದ ವಾಹನ ಓಡಿಸುವುದು ಹಾಗೂ ತಮ್ಮ ಜೀವದ ರಕ್ಷಣೆಯ ಜೊತೆಗೆ ಇನ್ನೋಬ್ಬರ ಜೀವವನ್ನು ಉಳಿಸುವಲ್ಲಿ ಎಚ್ಚರ ವಹಿಸಿ ವಾಹನ ಚಲಾಯಿಸಬೇಕೆಂದು, ಹತ್ತರಗಿ ಟೋಲ್ ಪ್ಲಾಸಾ ಪ್ರೋಜೆಕ್ಟ ಮ್ಯಾನೇಜರ್ ರವೀಂದ್ರ ಎಂ. ವಾಹನ ಚಾಲಕ ಹಾಗೂ ಸಮುದಾಯದವರಿಗೆ ಕರೆ ನೀಡಿದರು.
ಅವರು ಕಳೆದ ಶನಿವಾರ 24 ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹೈವೆ ಇಸ್ಟ್ರಾ ಟ್ರಸ್ಟ್ ಹತ್ತರಗಿ ಟೋಲ್ ಪ್ಲಾಸಾ ಇವರು ಯಮಕನಮರಡಿ ಬಸ್ ನಿಲ್ದಾಣ ಆವರಣದಲ್ಲಿ ಆಯೋಜಿಸಿದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಆಯೋಜಿಸಿದ ಜಾಗೃತಿ ಬೀದಿನಾಟಕಕ್ಕೆ ತಮಟೆ ವಾದ್ಯ ನುಡಿಸಿ ಚಾಲನೆ ನೀಡಿ ಮಾತನಾಡಿ, ವಾಹನ ಸವಾರರು ವಾಹನ ಚಲಾವಣೆ ಮಾಡುವಾಗ ವಾಹನಕ್ಕೆ ಸಂಬಂಭದ ಪಟ್ಟಂತಹ ಎಲ್ಲಾ ದಾಖಲೆ ಪತ್ರಗಳನ್ನು ಇಟ್ಟುಕೊಳ್ಳಬೇಕೆಂದರು.
ಆಶಾದೀಪ ಸಮುದಾಯ ಕಲಾಕೇಂದ್ರ, ಚಿಕ್ಕೋಡಿ ಕಲಾತಂಡದವರು ಯಮಪಾಶದಿಂದ ದೂರು ಬೀದಿನಾಟಕ ಜಾಗೃತಿ ಹಾಡುಗಳ ಮುಖಾಂತರ ಮಿತ ವೇಗದ ವಾಹನ ಚಲಾವಣೆ, ಹೆಲ್ಮೆಟ್ ಧರಿಸಿ ಜೀವ ರಕ್ಷಣೆ, ಮದ್ಯಪಾನ ಸೇವಿಸಿ ವಾಹನ ಚಾಲನೆ ಮಾಡುವದರಿಂದ ಆಗುವ ಪರಿಣಾಮ ಕುರಿತು ಸಾರ್ವಜನಿಕರಿಗೆ ಮನಮುಟ್ಟುವಂತೆ ಬೀದಿನಾಟಕ ಪ್ರದರ್ಶನ ನೀಡಿ ಅರಿವು ಮೂಡಿಸಿದರು. ಜಾಗೃತಿ ಕಾರ್ಯಕ್ರಮದಲ್ಲಿ ಸೇಪ್ಟಿ ಮ್ಯಾನೇಜರ್ ಇದ್ರು ಸಾಲಿ, ಮಹೇಶ ಕೌಶಿಕ, ಪತ್ರಕರ್ತ ಗೋಪಾಲ ಚಪಣಿ ಉಪಸ್ಥಿತರಿದ್ದರು.
ಬೀದಿನಾಟಕ ತಂಡದಲ್ಲಿ ಭರತ ಕಲಾಚಂದ್ರ, ಪ್ರಕಾಶ ಜನಮಟ್ಟಿ, ಪುಂಡಲೀಕ ನಾಯಿಕ, ಅಪ್ಪಾಸಾಬ ಚಿಮನೆ, ಸಂತ್ರಾಮ ಕಾಂಬಳೆ, ಮಹೇಶ ಪಕಾಲೆ, ಸಾವಿತ್ರಿ ಹಳಕಲ್, ಸುಜಾತಾ ಮಗದುಮ್ಮ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 