ಯರಗಟ್ಟಿಯಲ್ಲಿ ಬೀರ​‍್ಪ ದೇವರ ಜಾತ್ರೆ

ಯರಗಟ್ಟಿಯಲ್ಲಿ ಬೀರ​‍್ಪ ದೇವರ ಜಾತ್ರೆ  Beerpa Devara Jathre in Yaragatti


ಯರಗಟ್ಟಿ  08: ಸ್ಥಳೀಯ ಬೀರ​‍್ಪನ ಗುಡ್ಡದಲ್ಲಿ ಬೀರ​‍್ಪ ದೇವರ ಜಾತ್ರಾ ಮಹೋತ್ಸವ ಅತ್ಯಂತ ಸಂಭ್ರಮ ಹಾಗೂ ವಿಜೃಂಭಣೆಯಿಂದ ನಡೆಯಿತು.  ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಶಾಸಕ ವಿಶ್ವಾಸ ವೈದ್ಯ ಭಾಗವಹಿಸಿ ಬೀರ​‍್ಪ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಶಾಸಕರು, ದೇವಾಲಯಕ್ಕೆ 24 ಗಂಟೆಗಳ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ದೇವಾಲಯ ಅಭಿವೃದ್ಧಿ ಮಂಡಳಿಗೆ ಮನವಿ ಮಾಡಿದರು. ದೇವಾಲಯದಲ್ಲಿ ಜಾಗವಿದ್ದು, ಸುಸಜ್ಜಿತ ಸಮುದಾಯ ಭವನ ನಿರ್ಮಿಸಿ ನೀಡುವುದಾಗಿ ಭರವಸೆ ನೀಡಿದರು.  

ಬೀರ​‍್ಪ ದೇವರ ಕೃಪಾಕಟಾಕ್ಷ ಹಾಗೂ ಆಶೀರ್ವಾದ ಸದಾ ಸವದತ್ತಿ ಕ್ಷೇತ್ರದ ಜನತೆಯ ಮೇಲಿರಲಿ. ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿ ಹಾಗೂ ಆರೋಗ್ಯ ದೊರೆಯಲಿ ಎಂದು ಪ್ರಾರ್ಥಿಸಿದರು.  ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಹನುಮಂತ ಹಾರೂಗೊಪ್ಪ, ನಿಖಿಲ್ ಪಾಟೀಲ್, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸವರ, ಮಾಜಿ ತಾ.ಪಂ. ಸದಸ್ಯ ವಿಠ್ಠಲಗೌಡ ದೇವರಡ್ಡಿ ಸೇರಿದಂತೆ ಹಲವು ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.