ಹೂವಿನ ಹಡಗಲಿ

ಆರೋಗ್ಯ ರಕ್ಷಣೆಗೆ ಜನಾರೋಗ್ಯ ಜಾಗೃತಿ ಅಗತ್ಯ

ಆರೋಗ್ಯ ರಕ್ಷಣೆಗೆ ಜನಾರೋಗ್ಯ ಜಾಗೃತಿ ಅಗತ್ಯ

                 ಹೂವಿನ ಹಡಗಲಿ: 23- ವೇಗದ ಒತ್ತಡದ ಬದುಕಿನಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ತಪಾಸಣೆ ಆಗುತ್ತಿರುವುದು ಶ್ಲಾಘನೀಯ ಸೇವೆ ಎಂದು ಡಾ ಎಂ ಧರ್ಮಣ್ಣ ಅಭಿಪ್ರಾಯಪಟ್ಟರು.ಪಟ್ಟಣದ ವಿ ಕೇರ್ ಖಾಸಗಿ ಆಸ್ಪತ್ರೆಯಲ್ಲಿ ಎ ಎಸ್ ಐ ವಿಜಯನಗರ ,ಐಎಂಎ ಮತ್ತು ಎ ಎಫ್ ಐ ಹೂವಿನಹಡಗಲಿ ಇವರ ಸಂಯುಕ್ತ ಆಶ್ರಯದಲ್ಲಿ ಹಡಗಲಿಯ ವಿ ಕೇರ್ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಉಚಿತ ಎಂಡೊಸ್ಕೋಪ್ ತಪಾಸಣಾ ಶಿಬಿರವನ್ನುಉದ್ಘಾಟಿಸಿ ಅವರು ಮಾತನಾಡಿದರು.ಇಂತಹ ವೈದ್ಯಕೀಯ ತಪಾಸಣೆ ಆಗುತ್ತಿರುವುದು ನಮಗೆ ಹೆಮ್ಮೆಯ ವಿಷಯ.

                ಮಾತ್ರವಲ್ಲದೆ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬದವರಿಗೆ ಆಸರೆ ಎಂದು ತಿಳಿಸಿದರು.ಐಎಂಎ ಅಧ್ಯಕ್ಷರು ಮತ್ತು ವಿ ಕೇರ್ ಆಸ್ಪತ್ರೆಯ ವೈದ್ಯರಾದ ಡಾ. ವೀರೇಶ್ ಎಚ್ ಎಂ ಎಂಡೋಸ್ಕೋಪಿ ಮಹತ್ವ ಮತ್ತು ಅದರ ಉಪಯುಕ್ತತೆಗಳನ್ನು ತಾಲೂಕು ವೈದ್ಯರ ಸಂಘದ ವೈದ್ಯರುಗಳಿಗೆ ಮಾಹಿತಿ ನೀಡಿದರು ಕಾರ್ಯಗಾರವನ್ನು ಹಮ್ಮಿಕೊಳ್ಳುವುದರ ಮೂಲಕ 25 ರೋಗಿಗಳಿಗೆ ಉಚಿತವಾಗಿ ಎಂಡಸ್ಕೋಪ್ ಮೂಲಕ ಪರೀಕ್ಷೆಯನ್ನು ಮಾಡಿದರು.ಡಾ ಶಿವಕುಮಾರ್ ಬಿ, ಡಾ ಭಾರತಿ, ಕಾರ್ಯದರ್ಶಿಗಳಾದ ಡಾ. ನಿಖಿಲ್ ಕೆ, ಎ ಎಫ್ ಐ ನ ಡಾ ಪ್ರಕಾಶ್ ಅಟವಾಳಗಿ, ಡಾ ಸೋಮಶೇಖರ್ ಎಂ ಕೆ, ಡಾ ಉಮೇಶ್ ಜೆಡಿ, ಡಾ ಎಸ್ ಬಿ ಪಾಟೀಲ್, ಡಾ ಸತೀಶ್ ಅಂಗಡಿ, ಡಾ ರಮ್ಯಾ ಎಸ್, ಡಾ ಅಕ್ಕಮ್ಮ. ಮತ್ತು ಇನ್ನಿತರ ವೈದ್ಯರು ಈ ಮಾಹಿತಿ ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ