ಜಮಖಂಡಿ ನಗರದ ಡಾ. ಬಾಬಾಸಾಹೇಬ ಅಂಬೇಡ್ಕರ ಸರ್ಕಲ್‌ನಲ್ಲಿ ಕರ್ನಾಟಕ ರಾಜ್ಯದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ

ಜಮಖಂಡಿ ನಗರದ ಡಾ. ಬಾಬಾಸಾಹೇಬ ಅಂಬೇಡ್ಕರ ಸರ್ಕಲ್‌ನಲ್ಲಿ ಕರ್ನಾಟಕ ರಾಜ್ಯದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ Protest led by Karnataka State Litha Sangharsh Samiti at Dr. Babasaheb Ambedkar Circle, Jamkhandi N

ಲೋಕದರ್ಶನ ವರದಿ 

ಜಮಖಂಡಿ 05 : ರಾಜ್ಯದ ನೂತನ ಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ ಅವರ ಸಚಿವ ಸಂಪುಟ ಕೂಡಾ ನೂತನವಾಗಿ ರಚನೆಯಾಗಿದ್ದು. ಅಪ್ಪಟ ಅಂಬೇಡ್ಕರವಾದಿ ಮಾಜಿ ಸಚಿವ ಡಾ, ಹೆಚ್ ಸಿ ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ರಾಜ್ಯ ದಲಿತ ಸಂಘರ್ಷ ಸಮಿತಿ (ಸಾಗರಬಣ) ಜಿಲ್ಲಾಧ್ಯಕ್ಷ ಪರಶುರಾಮ ಕಾಂಬಳೆ ಒತ್ತಾಯಿಸಿದರು. ನಗರದ ಡಾ,ಬಾಬಾಸಾಹೇಬ ಅಂಬೇಡ್ಕರ ಸರ್ಕಲ್‌ನಲ್ಲಿ ಕರ್ನಾಟಕ ರಾಜ್ಯದಲಿತ ಸಂಘರ್ಷ ಸಮಿತಿ (ಸಾಗರಬಣ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಸುಮಾರು ನಾಲ್ಕು ದಶಕಗಳಿಂದ ಡಾ,ಹೆಚ್ ಸಿ ಮಹದೇವಪ್ಪನವರು ರಾಜಕೀಯದಲ್ಲಿದ್ದು.

ಸಂವಿಧಾನ ಆಶಯಗಳ ಸಾಕಾರಕ್ಕಾಗಿ ಜಾತ್ಯಾತೀತ ಸಮಾಜಕ್ಕಾಗಿ ದೀನ ದಲಿತರ ಹಿಂದುಳಿದ, ಅಲ್ಪಸಂಖ್ಯಾತರ, ಮಹಿಳೆಯರ, ಬಡವರ ಪರವಾಗಿ ಧ್ವನಿಯಾಗಿ ಕೆಲಸ ಮಾಡುತ್ತಾ ಬಂದಿರುತ್ತಾರೆ.  ಕೋಮುವಾದದ ಪರವಾಗಿ ಮೃದು ಧೋರಣೆ ತಾಳಿದವರಲ್ಲ. ನಿರಂತರ ಕೋಮುವಾದದ ವಿರುದ್ದವಾಗಿ ಗಟ್ಟಿಯಾಗಿ ನಿಂತು ಸಮಸಮಾಜದ ಕನಸು ಹೊತ್ತು ಬದ್ದತೆಯಿಂದ ಸೈದ್ದಾಂತಿಕ ನೆಲಗಟ್ಟಿನಲ್ಲಿ ರಾಜಕೀಯ ಮಾಡುತ್ತಾ ಬಂದಿದ್ದು. ಅಂತವರಿಗೆ ಸಚಿವ ಸ್ಥಾನವನ್ನು ನೀಡಬೇಕು ಎಂದರು.  

ಇದೇ ಸಂದರ್ಭದಲ್ಲಿ ದೀಪಕ ಕಂಕಣವಾಡಿ, ಬಸವರಾಜ ದೊಡಮನಿ, ಅಮೀತ ಸೂರಗೊಂಡ, ಸಹಜಾನಂದ ದೊಡಮನಿ,ಅಡಿವೆಪ್ಪ ಮರೇಗುದ್ದಿಶಂಕರ ಹೊಸಮನಿ, ರಾಜು ಪೋಳ, ಹನಮಂತ ಮೇಲ್ಗಡೆ,ದೀಲಿಪ ಕಾಂಬಳೆ,ಚಿದಾನಂದ ಕಂಬಾಗಿ, ಸೋಮು ಶಿಂಗೆ, ವಿಠ್ಠಲ ಕಾಂಬಳೆ, ಶಿವನಿಂಗ ಕಾಂಬಳೆ, ಹನಮಂತ ಕಾಂಬಳೆ, ಕೃಷ್ಣಾ ಶೇಗುಣಶಿ, ಈಶ್ವರ ಚನ್ನಪ್ಪಗೋಳ ಸೇರಿದಂತೆ ಅನೇಕರು ಇದ್ದರು.