ಭಾಷೆ, ಸಾಹಿತ್ಯ ಮತ್ತು ಸಂಸ್ಕ್ರತಿ ಪರಂಪರೆ ಮುಂದಿನ ಪೀಳಿಗೆ ಉಳಿಸಿ
ಹೂವಿನ ಹಡಗಲಿ 27: ಪಟ್ಟಣದ ಎಸ್.ಆರ್.ಎಂ.ಪಿ.ಪಿ ಕಾಲೇಜಿನಲ್ಲಿ ಈಚೆಗೆ ನಡೆದ 2025-26 ನೇ ಸಾಲಿನ ’ಕನ್ನಡ ಸಿರಿ ಕನ್ನಡ ಪ್ರತಿಭಾ ಪರೀಕ್ಷೆ ಕಾರ್ಯಕ್ರಮ ಜರುಗಿತು. ಶಾಸಕ ಕೃಷ್ಣನಾಯಕ ಮಾತನಾಡಿನಮ್ಮ ನಾಡಿನ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಬೆಳೆಸುವಲ್ಲಿ ಇಂತಹ ಪ್ರತಿಭಾ ಪರೀಕ್ಷೆಗಳು ಪ್ರಮುಖ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳಲ್ಲಿ ಕನ್ನಡದ ಅರಿವು ಮತ್ತು ಆಸಕ್ತಿಯನ್ನು ಮೂಡಿಸುತ್ತಿರುವ ’ಕನ್ನಡಸಿರಿ’ ಟ್ರಸ್ಟ್ನ ಕಾರ್ಯ ಶ್ಲಾಘನೀಯ ಎಂದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ರಂಗಭಾರತಿ ಕಾರ್ಯಾಧ್ಯಕ್ಷ ಶ್ರೀಮತಿ ಎಂ.ಪಿ. ಸುಮಾ ವಿಜಯ್ , ಮಾಜಿ ಪುರಸಭಾ ಅಧ್ಯಕ್ಷ ವಾರದ ಗೌಸ್ ಮೊದ್ದಿನ್, ಕನ್ನಡಸಿರಿ ಟ್ರಸ್ಟ್ನ ಸಂಸ್ಥಾಪಕ ನಿರ್ದೇಶಕ ಎ.ಕೆ. ಆನಂದ ಹೊನ್ನೂರು, ಮುಖಂಡರಾದ ಬೀರಬ್ಬಿ ಮಂಜುನಾಥ್, ಪುನೀತ್ ದೊಡ್ಮಿನಿ, ಶಿವರಾಜ್. ಗುರುಪ.ಸಾದ್, ತಿರುಕಪ್ಪ ಇದ್ದರು.