ಮೆಡಿಸಿನ್ ವಿಭಾಗದಲ್ಲಿ ಕಾಲೇಜ್ ಟಾಪರ್ ಆಗಿ ಉತ್ತೀರ್ಣ: ಅಭಿಷೇಕಸ್ವಾಮಿ
Passed as College Topper in Medicine: Abhishekaswamy
ಮೆಡಿಸಿನ್ ವಿಭಾಗದಲ್ಲಿ ಕಾಲೇಜ್ ಟಾಪರ್ ಆಗಿ ಉತ್ತೀರ್ಣ: ಅಭಿಷೇಕಸ್ವಾಮಿ
ಗಂಗಾವತಿ 29: ನಗರದ ಡಾ.ಅಭಿಷೇಕಸ್ವಾಮಿ ಹೇರೂರ ಎಮ್.ಡಿ.ಜನರಲ್ ಮೆಡಿಸಿನ್ ವಿಭಾಗದಲ್ಲಿ ಕಾಲೇಜ್ ಟಾಪರ್ ಆಗಿ ಉತ್ತೀರ್ಣರಾಗಿದ್ದಾರೆ.ಗಂಗಾವತಿ ನಗರದ ಸೇ0ಟ್ ಫಾಲ್ಸ್ ಮತ್ತು ಲಿಟಲ್ ಹಾರ್ಟ್ಸ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಅಭ್ಯಾಸವನ್ನು ಮುಗಿಸಿರುವ ಡಾ.ಅಭಿಷೇಕಸ್ವಾಮಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 98ಅ ಅಂಕಗಳನ್ನು ಗಳಿಸಿ ಜಿಲ್ಲಾ ಟಾಪರ್ ಎನಿಸಿಕೊಂಡಿದ್ದರು.ನಂತರ ಸತ್ಯ ಸಾಯಿ ಲೋಕಸೇವಾ ಟ್ರಸ್ಟ್ ನಡೆಸುವ ಅಳಿಕೆ ಗ್ರಾಮದ ಕಾಲೇಜ್ ನಲ್ಲಿ ಪಿ.ಯು.ಸಿ.ಅಭ್ಯಾಸ ಮಾಡಿ 97ಅ ಅಂಕಗಳಿಸಿ, ಸಿ.ಇ.ಟಿ.ಯಲ್ಲಿ ರಾಜ್ಯಕ್ಕೆ 261 ನೇ ರ್ಯಾಂಕ್ ಪಡೆದಿದ್ದರು.
ಸರಕಾರಿ ಮೈಸೂರು ಮೆಡಿಕಲ್ ಕಾಲೇಜ್ ನಲ್ಲಿ ಎಮ್.ಬಿ.ಬಿ.ಎಸ್.ಪದವಿ ಮುಗಿಸಿ,ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಮೆಡಿಕಲ್ ಕಾಲೇಜ್ ನಲ್ಲಿ ಎಮ್.ಡಿ.ಜನರಲ್ ಮೆಡಿಸಿನ್ ವಿಭಾಗದಲ್ಲಿ ಪ್ರವೇಶ ಪಡೆದಿದ್ದರು.ಡಾ.ಅಭಿಷೇಕಸ್ವಾಮಿ ಹೇರೂರ ಅವರ ಸಾಧನೆಗೆ ಕುಟುಂಬ ವರ್ಗ ಮತ್ತು ಓಷಧ ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 