ಮಾತೃಭೂಮಿ, ಮಾತೃಭಾಷೆ ಮರೆಯಬಾರದು: ರಾಜ್ಯಪಾಲ
ಹಾವೇರಿ20: ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳ ಜ್ಞಾನ ಇರಲಿ. ಆದರೆ ನಮ್ಮ ಕೆಲಸ ಕಾರ್ಯ ಮಾತೃಭಾಷೆಯಲ್ಲೇ ನಡೆಯಲಿ. ನಾವು ಎಲ್ಲೆ ಇರಲಿ ಮಾತೃಭೂಮಿ ಹಾಗೂ ಪ್ರಾಂತೀಯ ಭಾಷೆ ಮರೆಯಬಾರದು ಎಂದು ರಾಜ್ಯಪಾಲ ವಜುಭಾಯ್ ರೂಡಾಭಾಯ್ ವಾಲಾ ಅವರು ಹೇಳಿದರು.
ಗುರುವಾರ ಹಾನಗಲ್ ತಾಲೂಕು ಅಕ್ಕಿಆಲೂರಿನಲ್ಲಿ ಜರುಗಿದ ಕನ್ನಡ ನುಡಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾತೃಭೂಮಿಗಾಗಿಯೇ ಜೀವನ ಮತ್ತು ಮರಣ ಎಂದು ನಾವು ಭಾವಿಸಿಕೊಳ್ಳಬೇಕು ಎಂದು ಹೇಳಿದರು.
ಮಾತೃಭೂಮಿ, ಮಾತೃಭಾಷೆಯಯನ್ನು ಗೌರವಿಸುವ ಬರದಲ್ಲಿ ಇತರ ಭಾಷೆ, ದೇಶ, ಸಂಸ್ಕೃತಿ ಜನರನ್ನು ದ್ವೇಷಿಸಬಾರದು. ಹಲವು ಭಾಷೆ ಹಾಗೂ ವೇಷಗಳಿದ್ದರೂ ದೇಶ ಒಂದೇ ಎಂಬ ಭಾವನೆಯಿಂದ ಭಾರತೀಯರು ವಿವಿಧತೆಯಲ್ಲಿ ಎಕತೆಯ ಸಂಸ್ಕೃತಿ ಜಗತ್ತಿಗೆ ನಮ್ಮ ಹಿರಿಯರು ತೋರಿಸಿಕೊಟ್ಟಿದ್ದಾರೆ. ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳಿದ್ದಾರೆ.
ಗೀತೋಪದೇಶದಲ್ಲಿ ಶ್ರೀಕೃಷ್ಣನು ಮನುಷ್ಯರು ಹೇಗೆ ಜೀವಿಸಬೇಕು ಎಂದು ಹೇಳಿದ್ದಾರೆ.
ಅವರು ಹೇಳಿದಂತೆ ತನಗಾಗಿ ಜೀವಿಸುವವನು ಪಶು, ಪರರಿಗಾಗಿ ಜೀವಿಸುವವನು ಮಾನವ. ಈ ಧ್ಯೇಯದೊಂದಿಗೆ ಪರರ ಸೇವೆಯಲ್ಲಿ ಸಮಾಜದ ಸೇವೆಯಲ್ಲಿ ಸಂಘ-ಸಂಸ್ಥೆಗಳು ಕೆಲಸಮಾಡಬೇಕು ಎಂದು ಕರೆ ನೀಡಿದರು.
ಭಾರತವನ್ನು ಬ್ರಿಟಿಷರು ಹಾಗೂ ಮೊಗಲರು ಹಲವಾರು ವರ್ಷಗಳ ಕಾಲ ಆಳಿದರೂ ಇವರ ಸಂಸ್ಕೃತಿಗೆ ಭಾರತೀಯರು ಒಳಗಾಗಿಲ್ಲ.
ಆದರೆ ನಮ್ಮ ಸಂಸ್ಕೃತಿ ಮರೆತಿಲ್ಲ, ಯಾರು ದೇಶದ ಸಂಸ್ಕೃತಿ ಮರೆಯುತ್ತಾರೆ ಆ ದೇಶ ಹಾಳಾಗುತ್ತದೆ. ಭಾರತೀಯ ಸಂಸ್ಕೃತಿ ಉಳಿಸುವ ಕೆಲಸ ನಮ್ಮ ಹಿರಿಯರಿಂದ, ಸಂಘ-ಸಂಸ್ಥೆಗಳಿಂದ ಪರಂಪರಾಗತವಾಗಿ ನಡೆದುಕೊಂಡು ಬಂದಿದೆ. ಈ ಪರಂಪರೆ ಮುಂದುವರೆಯಬೇಕೆಂದು ಆಶಯ ವ್ಯಕ್ತಪಡಿಸಿದರು.
ಜೀವನದಲ್ಲಿ ಎಲ್ಲ ಸೌಲಭ್ಯಗಳನ್ನು ಹೊಂದಿದವವನ್ನು ಪೂಜಿಸುವುದಿಲ್ಲ. ಬದಲಾಗಿ ಜ್ಞಾನ ಹಾಗೂ ಸಂಸ್ಕಾರ ಇರುವವರನ್ನು ಪೂಜಿಸುತ್ತಾರೆ. ದೇವರನ್ನು ಕಾಣಲು ಸಾಧ್ಯವಿಲ್ಲ ಆದರೆ ಗುರುವನ್ನು ಕಾಣುತ್ತೇವೆ.
ನಮ್ಮ ದೇಶದಲ್ಲಿನ ಗುರು ಪರಂಪರೆ ಸಂಸ್ಕೃತಿ ಬೇರೆ ದೇಶಗಳಲ್ಲಿ ಕಾಣಲು ಸಿಗುವುದಿಲ್ಲ ಎಂದು ಹೇಳಿದರು.
ಗೌತಮ ಬುದ್ಧ ಕರುಣೆ ಹಾಗೂ ದಯೆಯಿಂದ ಹೆಸರಾದವರು. ಇವರ ಭಾವನೆಗಳು ನಮ್ಮಲ್ಲಿ ಜಾಗೃತಗೊಳ್ಳಬೇಕು. ಎಲ್ಲರೂ ಒಂದಾಗಿ ಸಹಬಾಳ್ವೆ ನಡೆಸಬೇಕು, ಕನ್ನಡ ಭಾಷೆಗೆ ಉತ್ತೇಜನ ನೀಡಬೇಕು. ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಸಹಾಯಮಾಡಬೇಕು.
ನಾವು ಎಷ್ಟೇ ಗಳಿಸಲಿ ಆ ಗಳಿಕೆಯಲ್ಲಿ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ನೀಡಬೇಕು. ಕನ್ನಡ ಭಾಷೆಯ ಪ್ರಚಾರವಾಗಬೇಕು, ರಾಷ್ಟ್ರಕ್ಕಾಗಿ ಜೀವಿಸಬೇಕು, ಸಮಾಜದ ಬಗ್ಗೆ ಕಾಳಜಿ ಹೊಂದಬೇಕು ಹಾಗೂ ಪ್ರಜೆಗಳ ಸುಖಕ್ಕಾಗಿ ಮತ್ತು ಕನ್ನಡದ ಪ್ರಚಾರಕ್ಕಾಗಿ ದುಡಿಯೋಣ ಎಂದು ಹೇಳಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ವಿವಿಧ ಮಠಾಧೀಶರು ಇತರರು ಉಪಸ್ಥಿತರಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 