ಮಣಿಕಂಠ ಫೌಂಡೇಶನ ಸದಸ್ಯರಾದ ಮಡುಸ್ವಾಮಿ ರವರಿಂದ ಶ್ರೀಶೈಲ ಪಾದಯಾತ್ರಿಗಳಿಗೆ ಅನ್ನ ದಾಸೋಹ
Maduswamy, a member of Manikantha Foundation, distributes food to Srisailam hikers
ವಿಜಯಪುರ 09 : ನಗರದ ನೀಲಕಂಠೇಶ್ವರ ಶ್ರೀಶೈಲ ಪಾದಯಾತ್ರಾ ಕಮೀಟಿಯಿಂದ ಸುಮಾರು 400ಕ್ಕೂ ಹೆಚ್ಚು ಭಕ್ತರು ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ವಿಜಯಪುರದಿಂದ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದರು, ಈ ವೇಳೆ ದಿನಾಂಕ: 08-03-2026 ರಂದು ಪಾದಯಾತ್ರಿಗಳ ಕಮೀಟಿಯು ಸುರಪುರ ತಾಲೂಕಿನ ಮಾರ್ಗವಾಗಿ ಸಂಚರಿಸುವಾಗ ದಾರಿಯುದ್ದಕ್ಕೂ ಮಣಿಕಂಠ ಫೌಂಡೇಶನ್ ವತಿಯಿಂದ ಭಕ್ತರಿಗೆ ನೀರಿನ ಬಾಟಲಿಗಳನ್ನು ಹಂಚಿದರು, ಹಾಗೂ ಪಾದಯಾತ್ರಿಗಳು ಸುಗೂರ ಗ್ರಾಮದ ಬಯಲು ಪ್ರದೇಶದಲ್ಲಿ ರಾತ್ರಿ ವಸ್ತಿಯನ್ನು ಮಾಡಿದ ಪ್ರಯುಕ್ತ ಪಾದಯಾತ್ರಿಗಳಿಗೆ ಒಂದು ಹೊತ್ತಿನ ಅನ್ನ ದಾಸೋಹ ಕಾರ್ಯಕ್ರಮವನ್ನು ಮಣಿಕಂಠ ಫೌಂಡೇಶನ್ ಸದಸ್ಯರಾದ ಮಡಿವಾಳಯ್ಯ ಹಿರೇಮಠ (ಮಡುಸ್ವಾಮಿ) ರವರಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪಾದಯಾತ್ರಿಗಳ ಜೊತೆ ಭಾಗಿಯಾದ ಮಡುಸ್ವಾಮಿ ಶ್ರೀಶೈಲ ಮಲ್ಲಿಕಾರ್ಜುನನ ನಂದಿಕೋಲಕ್ಕೆ ವಿಶೇಷ ಅಭಿಷೇಕ ಹಾಗೂ ಪೂಜೆ ಪುನಸ್ಕಾರ ನೆರವೇರಿಸಿದರು ನಂತರ ಭಕ್ತರಿಗೆ ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಿಸಿದ್ದು, ಸುಮಾರು 400 ಜನ ಭಕ್ತರಿಗೆ ಅನ್ನ ಸಂತರೆ್ನ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಈ ವೇಳೆ ಪಾದಯಾತ್ರಿಗಳ ಕಮೀಟಿಯ ಪದಾಧಿಕಾರಿಗಳಾದ ಮಹೇಶ ಬಿದನೂರ ಮಾತನಾಡಿ ಮಣಿಕಂಠ ಫೌಂಡೇಶನ್ ಈ ಸೇವೆಯು ಭಕ್ತರಿಗೆ ಅನುಕೂಲ ಮಾಡಿಕೊಟ್ಟಿದ್ದು, ಇಂತಹ ಸೇವಾ ಕಾರ್ಯಕ್ರಗಳು ಸಂಘದಿಂದ ಮುಂದುವರೆಯಲಿಯೆಂದು ಆಶಿಸುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ಮಣಿಕಂಠ ಫೌಂಡೇಶನ್ ಸದಸ್ಯರಾದ ಮಡಿವಾಳಯ್ಯ ಹಿರೇಮಠ (ಮಡುಸ್ವಾಮಿ), ರಾಜು ಗುನ್ನಾಪೂರ, ಅಮೋಘಸಿದ್ದ ಕರಾಂಡೆ, ಸತೀಶ ರಾಠೋಡ, ಸಚಿನ ಚವ್ಹಾಣ, ಸಂದೀಪ ಪವಾರ, ಸೋಮಶೇಖರ, ಪ್ರಶಾಂತ, ಅಭಿಷೇಕ, ನವೀನ, ಲಾಳೇಮಶಾಕ, ರಾವುತರಾಯ, ಕೃಷ್ಣಾ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 