ಸತತ 5ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದ ಕೊಣ್ಣೂರು ವಿಜ್ಞಾನ ಪಿಯು ಕಾಲೇಜು

ಸತತ 5ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದ ಕೊಣ್ಣೂರು ವಿಜ್ಞಾನ ಪಿಯು ಕಾಲೇಜು  Konnore Science PU College has won the comprehensive heroism award for the 5th time in a row

ಲೋಕದರ್ಶನ ವರದಿ

ರಬಕವಿ-ಬನಹಟ್ಟಿ 29: ಪದವಿಪೂರ್ವ ಶಿಕ್ಷಣ ಇಲಾಖೆ, ಬಾಗಲಕೋಟೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು, ಚಿಮ್ಮಡ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಬಕವಿ-ಬನಹಟ್ಟಿ ತಾಲ್ಲೂಕು ಮಟ್ಟದ 2026-27ನೇ ಸಾಲಿನ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಕೊಣ್ಣೂರು ವಿಜ್ಞಾನ ಪಿಯು ಕಾಲೇಜು ಸತತ ಐದನೇ ಬಾರಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿಗೆ ಭಾಜನವಾಯಿತು. ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳ ವಿಭಾಗದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಲವು ವೈಯಕ್ತಿಕ ಹಾಗೂ ತಂಡದ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದರು. ಬಾಲಕರ ವಿಭಾಗದಲ್ಲಿ 100 ಮೀ.200 ಮೀ.800 ಮೀ.5 ಕಿ.ಮೀ. ಓಟ, ಲಾಂಗ್ ಜಂಪ್, ಚೆಸ್ ಹಾಗೂ ವಿವಿಧ ತಂಡದ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಗಮನಾರ್ಹ ಪ್ರದರ್ಶನ ನೀಡಿದರು.  

ಬಾಲಕಿಯರ ವಿಭಾಗದಲ್ಲಿಯೂ ಚಕ್ರ ಎಸೆತ, ಜಾವೆಲಿನ್, ಚೆಸ್ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ವಿದ್ಯಾರ್ಥಿನಿಯರು ಸಾಧನೆ ಮಾಡಿದರು. ವಾಲಿಬಾಲ್, ಹ್ಯಾಂಡ್ಬಾಲ್, ಥ್ರೋಬಾಲ್, ಕಬಡ್ಡಿ, ಶಟಲ್ ಬ್ಯಾಡ್ಮಿಂಟನ್ ಸೇರಿದಂತೆ ವಿವಿಧ ತಂಡಗಳು ದ್ವಿತೀಯ ಸ್ಥಾನ ಸೇರಿದಂತೆ ಉತ್ತಮ ಫಲಿತಾಂಶ ದಾಖಲಿಸಿವೆ. ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಸಾಧನೆಗೆ ದೈಹಿಕ ಶಿಕ್ಷಣ ಉಪನ್ಯಾಸಕರಾದ ಎಂ.ಬಿ. ಮಗದುಮ್, ಸಂಜು ಗೋಠೆ ಹಾಗೂ ಪ್ರಶಾಂತ ಧರ್ಮಟ್ಟಿ ಅವರ ಮಾರ್ಗದರ್ಶನ ಕಾರಣವಾಗಿದೆ. ಈ ಸಾಧನೆಗೆ ಪ್ರಾಚಾರ್ಯ ಪ್ರೊ. ಬಸವರಾಜ ಕೊಣ್ಣೂರು, ಸಂಸ್ಥೆಯ ಉಪಾಧ್ಯಕ್ಷ ನಿಖಿಲ್ ಕೊಣ್ಣೂರು, ಆಡಳಿತಾಧಿಕಾರಿ ಶೀತಲ್ ಕೊಣ್ಣೂರು, ಉಪಪ್ರಾಚಾರ್ಯ ಪ್ರೊ. ಶಿವಾನಂದ ಕಂದಗಲ್ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.