ಅಂಗಾರಕ ಸಂಕಷ್ಟಿ : ನೀಲಗಾರ ಗಣೇಶ ದರ್ಶನಕ್ಕೆ ಬೀಗಿ ಬಂದೋಬಸ್ತ್ : ಭಕ್ತರ ಸಂಖ್ಯೆ ಇಳಿಮುಖ
Angaraka Sankashti: Tight security for the darshan of Neelagara Ganesha; number of devotees drops.
ಸಂಕೇಶ್ಚರ : ಸೋಮವಾರ ದಿನ ಐವರು ಪೊಲೀಸರು ನೀಲಗಾರ ಗಣೇಶನ ದರ್ಶನ ಸಂದರ್ಭದಲ್ಲಿ ಯುವಕನ ಮೇಲೆ ನಡೆಸಿದ್ದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ವಲಯ ಐಜಿಪಿ ಅವರ ಮಾರ್ಗದರ್ಶನದಂತೆ ಮಂಗಳವಾರ ಬೀಗಿಯಾದ ಪೋಲಿಸ್ ಬಂದೋಬಸ್ತ್ ಮಾಡಲಾಗಿದ್ದು, ಮಂಗಳವಾರ ಅಂಗಾರೀಕ ಸಂಕಷ್ಟಿ ದಿನವಾಗಿದ್ದರೂ ಭಕ್ತರ ಸಂಖ್ಯೆಯು ಇಳಿಮುಖವಾದ ಘಟನೆ ವರದಿಯಾಯಿತು.
ಸೋಮವಾರ ತನ್ನ ಮನೆಗೆ ತೆರಳುತ್ತಿದ್ದ ರಾಹುಲ್ ಕುಂಬಾರ ಎಂಬ ಯುವಕನ ಮೇಲೆ ಐವರು ಪೊಲೀಸರು ಗಣೇಶ ದರ್ಶನಕ್ಕೆ ಸರದಿ ಬಿಟ್ಟು ಬಂದಿರುವ ಶಂಕೆಯಿಂದ ಮನಬಂದಂತೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಇದರಿಂದ ಗಾಯಗೊಂಡಿದ್ದ ಯುವಕನನ್ನು ಉಪಚಾರಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸ ಇಲಾಖೆಯು ಉತ್ತರ ವಲಯದ ಐಜಿಪಿ ಸಂದೀಪ ಪಾಟೀಲ ಹಾಗೂ ಎಸ್ ಪಿ ರಾಮರಾಜನ್ ಅವರ ಮಾರ್ಗದರ್ಶನದಂತೆ ಮಂಗಳವಾರ ದಿನದಂದು ಕೆಎಸ್ ಆರ್ ಪಿ ಒಂದು ತುಕಡಿ, ಜಿಲ್ಲಾ ಮೀಸಲು ಪಡೆ 4 ತುಕಡಿ, ಸಿವಿಲ್ ಸಿಪಿಐ, ಪಿಎಸ್ಐ ಸೇರಿ ಸುಮಾರು 800 ಸಿಬ್ಬಂದಿಗಳನ್ನು ಬಂದೋಬಸ್ತ್ ಗಾಗಿ ನಿಯೋಜನೆ ಮಾಡಲಾಗಿತ್ತು.
ನೀಲಗಾರರ ಗಣೇಶ ಇತಿಹಾಸ ದಲ್ಲಿ ಪ್ರಥಮ ಬಾರಿಗೆ ಅಂಗಾರೀಕ ಸಂಕಷ್ಟಿ ದಿನದಂದು ಭಕ್ತರ ಸಂಖ್ಯೆ ಇಳಿಮುಖವಾಗಿರುವದು ಮೊದಲ ಸಲ ಎನ್ಮಲಾಗಿದೆ.
ಸೋಮವಾರ ದಿ. 5ರಂದು ರಾತ್ರಿ 12 ಗಂಟೆಯ ಬಳಿಕ ನೀಲಗಾರ ಗಣೇಶ ವಿಸರ್ಜನೆ ಕಾರ್ಯ ನಡೆಯಲಿದೆ ಎಂದು ನೀಲಗಾರ ಗಣೇಶ ಪ್ರತಿಷ್ಠಾಪನೆ ಮಾಡುವ ಶಿವಪತ್ರ ಹೆದ್ದುರುಶೆಟ್ಟಿ ಅವರು ಲೋಕದರ್ಶನಕ್ಕೆ ತಿಳಿಸಿದ್ದಾರೆ.
ಅಂಗಾರಕ ಸಂಕಷ್ಟಿ : ನೀಲಗಾರ ಗಣೇಶ ದರ್ಶನಕ್ಕೆ ಬೀಗಿ ಬಂದೋಬಸ್ತ್ : ಭಕ್ತರ ಸಂಖ್ಯೆ ಇಳಿಮುಖ
ಹಳೇ ವೈಷಮ್ಯ: ವ್ಯಕ್ತಿಯ ಅಪಹರಣ, ಕೊಲೆ: ನಾಲ್ವರು ಆರೋಪಿಗಳ ಬಂಧನ
ಐವರು ಪೋಲಿಸರಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ನಾಗರಿಕರ ಪ್ರತಿಭಟನೆ, ನೀಲಗಾರ ಗಣಪತಿ ದರ್ಶನ ರದ್ದು
ಗಣೇಶ ವಿಸರ್ಜನೆ ವೇಳೆ ದುರಂತ : ಬೆಳಗಾವಿಯ ಯುವಕ ನೀರಲ್ಲಿ ಮುಳುಗಿ ಸಾವು
ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆಗೆ ನವೆಂಬರ 1ರ ಗಡುವು ನೀಡಿದ ಕನ್ನಡ ಸಂಘಟನೆಗಳು
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ 