ಗ್ರಾಮೀಣ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನ: ಬಾಬಾಸಾಹೇಬ ಪಾಟೀಲ

ಗ್ರಾಮೀಣ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನ: ಬಾಬಾಸಾಹೇಬ ಪಾಟೀಲ  Striving to the best of my ability for rural development: Babasaheb Patil


ನೇಸರಗಿ 29 : ಕಿತ್ತೂರು ಕ್ಷೇತ್ರದ ಗ್ರಾಮಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿದ್ದು ಗ್ರಾಮೀಣ  ಜನರ ಸೇವೆಗೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು. ಅವರು ಮಂಗಳವಾರದಂದು ಸಮೀಪದ ಹೊಸಕೋಟಿ ಗ್ರಾಮದಲ್ಲಿ 20.38 ಲಕ್ಷ ರೂಪಾಯಿಗಳ ಅನುದಾನದಲ್ಲಿ ನಿರ್ಮಾಣ ಅಗಲಿರುವ  ಸಿ ಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ಜಿ ಪಂ ಸದಸ್ಯ ನಿಂಗಪ್ಪ ಅರಿಕೇರಿ ಹಾಗೂ ಯುವ ಮುಖಂಡ ಸಚಿನ ಪಾಟೀಲ ಅವರು ಶಾಸಕ ಬಾಬಾಸಾಹೇಬ ಪಾಟೀಲ ಅವರು ಮಾಡಿದ ಕೆಲಸ ಕಾರ್ಯಗಳ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಮಂಜುನಾಥ ಹುಲಮನಿ, ಮಲ್ಲೇಶ ದಂಡಾಪುರ, ಬಸವಣ್ಣಿ ಚಿಕ್ಕೋಪ್ಪ, ಮಂಜುನಾಥ ಹುಲಮನಿ, ಮಲ್ಲಪ್ಪ ಹೊಸೂರ, ಸುರೇಶ ರಾಮಣ್ಣವರ, ಲಕ್ಷ್ಮಣ ಕೆಳಗಿನಮನಿ, ದೇಮಪ್ಪ ನವಲಗಟ್ಟಿ, ಯಲ್ಲಪ್ಪ ಜಗದ, ರಾಜು ಮಾದರ, ಪರಶುರಾಮ ಮಾದರ, ಬಸವಣ್ಣೆಪ್ಪ ಕರಡಿಗುದ್ದಿ, ಲಕ್ಕಪ್ಪ ಆಡಿನ, ವಿಠ್ಠಲ ತಳವಾರ, ಆನಂದ ಖೋದಾನಪೂರ, ಬರಮಣ್ಣ ತಿಗಡಿ, ಗಿರಿಪ್ಪ ಸಿದ್ದರಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.