ಇಟ್ಟಿಗಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಲೋಕದರ್ಶನ ವರದಿ
ಹೂವಿನಹಡಗಲಿ 05 : ತಾಲೂಕಿನ ಇಟ್ಟಿಗಿ ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ಶ್ರೀರಾಜ ರಾಜ್ಯೋಶ್ವರಿ ಸಂಗೀತ ಕಲಾ ಪಾಠಶಾಲೆಯ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಲಾಯಿತು.
ಕಾರ್ಯಕ್ರಮ ಚಾಲನೆ ನೀಡಿದ ತಹಶೀಲ್ದಾರ ಕೆ.ಶರಣಮ್ಮ ಮಾತನಾಡಿ ನೆಲ,ಜಲ,ಭಾಷೆ ಗಡಿಯ ವಿಷಯ ಬಂದಾಗ ಎಲ್ಲರೂ ಒಂದಾಗಬೇಕು ಎಂದ ಅವರು ಏಕೀಕರಣದ ಹೋರಾಟಗಾರರನ್ನು ಸ್ಮರಿಸಿದರು.ಕರ್ನಾಟಕ ಕಲಾವಿದರ ಕ.ಒಕ್ಕೂಟ ತಾಲೂಕು ಅಧ್ಯಕ್ಷ ಎಂ.ಬನ್ನೆಪ್ಪ ಅಧ್ಯಕ್ಷತೆ ವಹಿಸಿದ್ದರು.ಉಪನ್ಯಾಸಕ ಹೆಚ್.ಜಿ.ಪದ್ದಣ್ಣ ಉಪನ್ಯಾಸ ನೀಡಿದರು.
ಪಿಎಸ್ಐ ವೀರೇಶ ಮಾಳಶೆಟ್ಟಿ, ಗ್ರಾ.ಪಂ.ಅಧ್ಯಕ್ಷೆ ಪುಷ್ಪ,ಡಾ.ಅಲಿ, ಕೆ.ಮಲ್ಲಣ್ಣ, ಬಳಿಗಾರ ಅಜ್ಜಪ್ಪ,ಸುದರ್ಶನ ಶೆಟ್ಟಿ, ರಾಜ್ಯೋಶ್ವರಿ ಸಂಗೀತ ಕಲಾ ಪಾಠಶಾಲೆಯ ಅಧ್ಯಕ್ಷ ಕೆ.ರೇವಣ್ಣ ಇದ್ದರು. ಈ ವೇಳೆ ರೈತ ಭರಮಪ್ಪ ಇವರಿಂದ ಭಾವ ಸಂಗಮ ಕವನ ಸಂಕಲನ ಕೃತಿ ಲೋಕಾರ್ಪಣೆ ಮಾಡಲಾಯಿತು..ಕೆ.ಜಗದೀಶ, ಬಿ.ಸುನೀತ, ಸದಾಶಿವ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿದರು. ಸಂಗೀತ ಶಾಲೆಯ ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು