ಸಂಚಾರಿ ಕುರಿಗಾರರ 7 ಕುರಿ ಕಳುವು: ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೇಂದು ಮನವಿ
Itinerant shepherds steal 7 sheep: Appeal to punish the accused severely
ಬೆಳಗಾವಿ 31 : ಕೆಲವು ತಿಂಗಳುಗಳಿಂದ ನಂದಗಡ ಮತ್ತು ಹೀರೆಬಾಗೆವಾಡಿಯಲ್ಲಿ ಸಂಚಾರಿ ಕುರಿಗಾಯಿಗಳಾದ ಸಂತೋಷ ಸಣ್ಣಯಲ್ಲಪ್ಪ ಬೀರಣ್ಣವರ, ಮಿಡಕನ ಹಟ್ಟಿ, ಗೋಕಾಕ ಮತ್ತು ನಾಗಪ್ಪ ಚಂದ್ರ್ಪ ಟೋಣ್ಣಿ ಇವರುಗಳ 7 ಕುರಿಗಳು ಕಳ್ಳತನವಾಗಿದ್ದು ಆರೋಪಿಗಳು ಸಿಕ್ಕಿದ್ದು ಮತ್ತು ಕಳೆದ 2-3 ತಿಂಗಳುಗಳಿಂದ ಸತತವಾಗಿ ಬೇರೆ ಬೇರೆ ಕುರಿಗಾರರ ಕುರಿಗಳು ಕಳ್ಳತನವಾಗಿದೆ. ಆರೋಪಿಗಳ ಮೇಲೆ ತಕ್ಷಣ ಕಾನೂನು ಕ್ರಮ ಜರಿಗಿಸಬೇಕೆಂದು ಕುರಿಗಾರರ ವತಿಯಿಂದ ಸಭೆ ನಡೆಸಿ, ಜಿಲ್ಲಾ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾಧಿಕಾರಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಆರೋಪಿಗಳಿಗೆ ತಕ್ಷಣ ಶಿಕ್ಷೆಯನ್ನು ನೀಡಲು ಆಗ್ರಹಿಸಲಾಯಿತು.ರಾಜ್ಯಾದಂತ ಕುರಿಗಾಯಿಗಳಿಗೆ ರಕ್ಷಣೆ ಇಲ್ಲದಂತಾಗಿದೆ, ಅರಣ್ಯ ಇಲಾಖೆಯವರು ಕಳ್ಳಕಾಕರಿಂದ ಕುರಿಗಳನ್ನು ರಕ್ಷಿಸಬೇಕಾದ ಅನಿವಾರ್ಯತೆ ಇದೆ. ಹತ್ಯೆ, ಕಳ್ಳತನ, ಹಿಂಸಾತ್ಮಕ ಘಟನೆಗಳಿಗೆ ನಿಷ್ಪಕ್ಷಪಾತ ತನಿಕೆ ಮಾಡಿ ಶಿಕ್ಷೆ ನೀಡಬೇಕು. ಬೆಳಗಾವಿ ಜಿಲ್ಲೆಯ ಕುರಿಗಾಯಿಗಳಿಗೆ ಪ್ರತ್ಯೇಕ ಬಂದೂಕು ತರಬೇತಿ ನೀಡಬೇಕು. ಈ ಸಂದರ್ಭದಲ್ಲಿ ಮಾರುತಿ ಮರ್ಡಿ, ಮಲ್ಲಪ್ಪ ಭೂತಾಳಿ, ಸಂತೋಷ ಬೀರಣ್ಣನವರ, ರಾಮಸಿದ್ದ ಬೀರಣ್ಣನವರ ಜಿಲ್ಲೆಯ 100 ಕ್ಕೂ ಹೆಚ್ಚು ಸಂಚಾರಿ ಕುರಿಗಾಯಿಗಳು ಹಾಜರಿದ್ದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 