ಅಂಗವಿಕಲರ ಯೋಜನೆಗಳನ್ನು ಅನುಷ್ಠಾನಗೊಳಿಸಿ: ಸಚಿವ ನಾರಾಯಣಸ್ವಾಮಿ
ದ್ವಿಚಕ್ರ ವಿತರಣೆ ಕಾರ್ಯಕ್ರಮಕ್ಕೆ ಶಾಸಕರು, ಡಿಸಿ. ಎಸ್ಪಿ, ಗೈರು: ಸಚಿವರು ಗರಂ
ಹೂವಿನ ಹಡಗಲಿ - ದಿವ್ಯಾಂಗರಿಗೆ ಅನುಕಂಪದ ಅವಶ್ಯಕತೆ ಬೇಡ, ಸಮಾಜದ ಮುಖ್ಯವಾಹಿನಿಗೆ ತರಲು ವಿಕಲಚೇತನರು ಯಶಸ್ವಿ ಬದುಕು ನಡೆಸಲು ಕೇಂದ್ರ-ರಾಜ್ಯ ಸರ್ಕಾರಗಳು ನಾನಾ ಯೋಜನೆಗಳನ್ನು ರೂಪಿಸಲಾಗಿದ್ದು, ಅಧಿಕಾರಿಗಳು ಅನುಷ್ಠಾನಗೊಳಿಸಬೇಕು ಎಂದು ಸಾಮಾಜಿಕ ನ್ಯಾಯ, ಸಬಲೀಕರಣ ಸಚಿವಾಲಯ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ರಂಗಭಾರತಿ ರಂಗಮಂದಿರದಲ್ಲಿ ಶನಿವಾರ ಭಾರತ ಸಕರ್ಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆ, ಸಾಮಾಜಿಕ ಅಧಿಕಾರಿತಾ ಶಿಬಿರ. ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯಡಿ ವಿಕಲಚೇತನರಿಗೆ ಉಚಿತ ಸಾಧನ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.
ಈ ಹಿಂದಿನ ಸಕರ್ಾರಗಳು ವಿಕಲಚೇತನರನ್ನು ನಿರ್ಲಕ್ಷ್ಯ ಮಾಡಿದ್ದು, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ದಿವ್ಯಾಂಗರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ನಾನಾ ಯೋಜನೆಗಳನ್ನು ಜಾರಿಗೆ ತಂದಿದೆ.ದೇಶದಲ್ಲಿ ಇಂದು 67 ಕಡೆಗಳಲ್ಲಿ ಏಕಾಕಾಲದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದ ಅವರು ಅಂಗವಿಕಲತೆ ಶಾಪವಲ್ಲ, ವೈದ್ಯರ ತಪ್ಪು ನಿರ್ಧಾರ ಜತೆಗೆ ಗರ್ಭಿಣಿ ನಿರ್ಲಕ್ಷ್ಯತನದಿಂದ ಅಂಗವಿಕಲತೆ ಮಕ್ಕಳು ಹುಟ್ಟುತ್ತಾವೆ ಎಂದ ಅವರು ಇಂತಹ ಕಾರ್ಯಕ್ರಮಗಳಿಗೆ ಸ್ಥಳೀಯ ಶಾಸಕರು, ಜಿಲ್ಲಾಡಳಿತ, ಎಸ್ಪಿ ಗೈರು ಸೇರಿದಂತೆ ಬೆರಳಿಣಿಕೆಯಷ್ಟು ಅಧಿಕಾರಿಗಳು ಬಂದಿದ್ದಾರೆ ಎಂದು ಬೇಸಾರ ವ್ಯಕ್ತಪಡಿಸಿದ ಅವರು ದೇಶದಲ್ಲಿ 50ಸಾವಿರ ದಿವ್ಯಾಂಗರ ಸಲಕರಣೆ ವಿತರಿಸಲಾಗಿದೆ ಜತೆಗೆ 3ರಿಂದ 4ರಷ್ಟು ಮೀಸಲಾತಿ ಹೆಚ್ಚಿಸಲಾಗಿದ್ದು, ಆರೋಗ್ಯಕ್ಕಾಗಿ ವಿಮೆ ಯೋಜನೆ ಜಾರಿಗೆ ತಂದಿದೆ.ಮನೆ,ಮನೆ ಸವರ್ೆ ಮಾಡಿ ಸಕರ್ಾರದ ಯೋಜನೆಗಳು ತಲುಪಿಸಬೇಕು ಎಂದರು.
ಸಂಸದ ವೈ.ದೇಂದ್ರಪ್ಪ ಮಾತನಾಡಿದರು.ಸಫಾಯಿ ಕರ್ಮಚಾರಿ ಅಭಿವೃದ್ದಿ ಮಂಡಳಿ ನಿಗಮದ ಮಾಜಿ ಅಧ್ಯಕ್ಷ ಎಚ್.ಹನುಮಂತಪ್ಪ,ತಹಶೀಲ್ದಾರ ಕೆ.ಶರಣಮ್ಮ, ಬಿಜೆಪಿ ಮಂಡಲ ಅಧ್ಯಕ್ಷ ಸಂಜೀವರೆಡ್ಡಿ, ಪಕ್ಷದ ಮುಖಂಡರಾದ ಹೆಚ್.ಪೂಜಪ್ಪ,ಎಂ.ಬಿ.ಬಸವರಾಜ, ಈಟಿ.ಲಿಂಗರಾಜ, ರಂಗಭಾರತಿ ಕಾರ್ಯದ್ಯಕ್ಷೆ ಎಂ.ಪಿ.ಸುಮಾ, ವಿಕಲಚೇತನರ ತಾಲೂಕು ಅಧ್ಯಕ್ಷ ತಳಕಲ್ಲು ಚಂದ್ರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿದರ್ೇಶಕ ವೀರನಗೌಡ, ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿ ಗೋವಿಂದಪ್ಪ ಇದ್ದರು. ಈ ವೇಳೆ ತಾಲೂಕಿನ ವಿಕಲಚೇತನರಿಗೆ ದ್ವಿಚಕ್ರವನ್ನು ವಿತರಣೆ ಮಾಡಲಾಯಿತು