ಜಾಗತಿಕ ಸ್ತನ್ಯಪಾನ ಸಪ್ತಾಹ ಅಂಗವಾಗಿ ಆರೋಗ್ಯವಂತ ಶಿಶು ಪ್ರದರ್ಶನ ಮತ್ತು ತಪಾಸಣೆ
Healthy Baby Show and Checkup as part of World Breastfeeding Week
ಜಾಗತಿಕ ಸ್ತನ್ಯಪಾನ ಸಪ್ತಾಹ ಅಂಗವಾಗಿ ಆರೋಗ್ಯವಂತ ಶಿಶು ಪ್ರದರ್ಶನ ಮತ್ತು ತಪಾಸಣೆ
ಧಾರವಾಡ, 07 ; ಧಾರವಾಡ ತಾಲ್ಲೂಕ ನರೇಂದ್ರ ಗ್ರಾಮದಲ್ಲಿ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಶಿಯೇಶನ್ ಆಫ್ ಇಂಡಿಯಾ ಧಾರವಾಡ ಶಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ರೋಟರಿ ಕ್ಲಬ್ ಅಫ್ ಸೇವೆನ್ ಹಿಲ್ಸ್ ಧಾರವಾಡ ಇವರ ಸಹಯೋಗದೊಂದಿಗೆ ಜಾಗತಿಕ ಸ್ತನ್ಯಪಾನ ಸಪ್ತಾಹ ಅಂಗವಾಗಿ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿತ್ತು.
ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಎಚ್.ಎಚ್. ಕುಕನೂರ, ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕರಿಗಳು ಮಾತನಾಡಿ ಮಗು ಜನಿಸಿದ ಮೊದಲ ಒಂದು ಗಂಟೆಯಲ್ಲಿ ಬರುವ ತಾಯಿ ಎದೆಹಾಲು ಅಮೃತಕ್ಕೆ ಸಮಾನವಾದದ್ದು ಮತ್ತು ಇದನ್ನು ಮಗುವಿಗೆ ಕೊಡುವದರಿಂದ ಮಕ್ಕಳಲ್ಲಿ ರೋಗನಿರೋಧ ಶಕ್ತಿ ಹೆಚ್ಚುತ್ತದೆ. ತಜ್ಞರ ಪ್ರಕಾರ ತಾಯಂದಿರು ಎದೆಹಾಲು ಉಣಿಸುವದರ ಮೂಲಕ ಭಾರತದಲ್ಲಿ 1.5 ಲಕ್ಷ ಕ್ಕಿಂತ ಹೆಚ್ಚು ಮಕ್ಕಳ ಪ್ರಾಣ ರಕ್ಷಣೆ ಮಾಡಲು ಸಾಧ್ಯವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮಕ್ಕಳಿಗೆ ಬಾಟಲಿ ಹಾಲು ಕೊಡುವದು ಒಳ್ಳೆಯದಲ್ಲಾ. ಇಂತಹ ಕಾರ್ಯಕ್ರಮದ ಪರಿಣಾಮ ಹಿಂದಿನ ದಿನಗಳಿಗೆ ಹೊಲಿಸಿದರೆ ಇಂದು ಮಹಿಳೆಯರಲ್ಲಿ ತಿಳುವಳಿಕೆ ಮೂಡಿ ಎದೆಹಾಲು ಉಣಿಸುವ ಪ್ರಮಾಣ ಗಣನಿಯವಾಗಿ ಹೆಚ್ಚಾಗಿದೆ ಎಂದು ಸಮಿಕ್ಷೆಗಳು ಹೇಳುತ್ತಿರುವದು ಸಂತಸದ ಸಂಗತಿ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಒಟ್ಟಿಗೆ ಸೇರಿ ಕಾರ್ಯನಿರ್ವಹಿಸುತ್ತಿರುವದು ಸಂತಸದ ಸಂಗತಿ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ನೀಶಾ ಗಲಗಲಿ ಮಾತನಾಡಿ ಹಣ್ಣು-ಹಾಲಿಗಿಂತ ಬೆಣ್ಣೆ-ತುಪ್ಪಕ್ಕಿಂತ ಎದೆಹಾಲು ಶ್ರೇಷ್ಠವಾದದ್ದು, ಇದು ಅಮೃತಕ್ಕೆ ಸಮಾನ ಅಂತ ನಮ್ಮ ಹಿರಿಯರು ಹೇಳಿದ್ದಾರೆ. ಅಲ್ಲದೇ ಎದೆಹಾಲು ಉಣಿಸುವದರಿಂದ ತಾಯಿ-ಮಗುವಿನ ಬಾಂಧವ್ಯ ಹೆಚ್ಚುತ್ತದೆ ಮತ್ತು ಹೆಚ್ಚು-ಹೆಚ್ಚು ಹಾಲು ಕುಡಿದಷ್ಟು ಮಗು ಆರೋಗ್ಯಯುತವಾಗಿ ಬೆಳೆಯುತ್ತದೆ, ಮೊದಲು ಬರುವ ಹಾಲು ಮಕ್ಕಳ ಜೀವನಕ್ಕೆ ಬುನಾಧಿ ಇದ್ದಂತೆ, ಹಾಲು ಬರುವದಿಲ್ಲಾ ಎಂದು ತಾಯಂದಿರು ಚಿಂತಿ ಮಾಡದೇ ತುಂಬಾ ಹಾಲು ಬರುತ್ತಿದೆ ಎಂದು ಧನಾತ್ಮಕ ಚಿಂತನೆ ಮಾಡುವದರಿಂದ ಹಾಲಿನ ಪ್ರಾಮಾಣ ಹೆಚ್ಚುತ್ತದೆ. ಒಮ್ಮೆ ಹಾಲು ಕುಡಿಸುವದರಿಂದ ತಾಯಿಗೆ ಒಂದು ಕಿಲೋಮಿಟರ ವಾಕಿಂಗ್ ಮಾಡಿದಷ್ಟು ಆರೋಗ್ಯ ವೃದ್ಧಿಸುತ್ತದೆ, ಅಲ್ಲದೇ ಹಾಲುಣಿಸಿದಷ್ಟು ಗರ್ಭಧಾರಣೆ ಮುಂದೂಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಎಫ್.ಪಿ.ಎ.ಐ ನ ಪ್ರಧಾನ ವ್ಯವಸ್ಥಾಪಕಿ ಸುಜಾತಾ ಎಸ್. ಆನಿಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿ ತಾಯಂದಿರು ದೀರ್ಘಕಾಲ ಹಾಲುಣಿಸುವದರಿಂದ ಮಕ್ಕಳ ನಡುವಿನ ಅಂತರ ಹೆಚ್ಚಿಸುವದಲ್ಲದೇ ಸ್ತನ ಕಾನ್ಸರ್ ನಂತ ರೋಗವನ್ನು ತಡೆಯಬಹುದಾಗಿದೆ, ತಾಯಿ ಕನಿಷ್ಟ 2 ವರ್ಷಗಳ ವರೆಗೆ ಹಾಲುಣಿಸಬೇಕು, ತಾಳ್ಮೆಯಿಂದ ಯಾವುದೇ ತಾರತಮ್ಯವಿಲ್ಲದೆ ಪ್ರೀತಿಯಿಂದ ಹಾಲುಣಿಸುವದರಿಂದ ಮಗುವಿನ ಬೆಳವಣಿಗೆಗೆ ಸಹಕಾರಿಯಾಗಲಿದೆ, ಜನರಲ್ಲಿ ಜಾಗೃತಿ ಮೂಡಿಸಲು ಎಫ್.ಪಿ.ಎ.ಐ ನ ಧಾರವಾಡ ಶಾಖೆಯು ಹಲವಾರು ಸ್ವಯಂಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನು ಎರಿ್ಡಸಲಾಗುತ್ತಿದೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಆಫ್ ಸೇವನ್ ಹಿಲ್ಸ್ ನ ಕಾರ್ಯದರ್ಶಿ ಡಾ. ದೃಷ್ಠಿ ದೇಶಪಾಂಡಿ ಮಾತನಾಡಿ ತಾಯಿ ಎದೆ ಹಾಲು ಕುಡಿಸುವ ಬಂಗಿ ಯಾವ ರೀತಿ ಇರಬೇಕು ಮತ್ತು ಎಚ್ಚರಿಕೆ ಕ್ರಮಗಳ ಕುರಿತು ಮಾತನಾಡಿದರು
ಗ್ರಾಮ ಪಂಚಾಯತ ಅಧ್ಯಕ್ಷರಾದ ನಾಗಪ್ಪ ಹಟ್ಟಿಹೋಳಿ, ಉಪಾದ್ಯಕ್ಷರಾದ ಮಲ್ಲಮ್ಮಾ, ರೋಟರಿ ಕ್ಲಬ್ ಆಫ್ ಸೇವನ್ ಹಿಲ್ಸ್ ನ ಅಧ್ಯಕ್ಷರಾದ ಡಾ. ಮಾಧುರಿ ಬೀರಾದರ, ಡಾ. ಕಮಲಾ ಬೈಲೂರ, ಡಾ. ಅಕ್ಕಮಾಹಾದೇವಿ ಹಿರೇಮಠ ಅಂಗನವಾಡಿ ಮೇಲ್ವಿಚಾರಕರು ಮತ್ತು ಕಾರ್ಯಕರ್ತರ ಆಶಾ ಕಾರ್ಯಕರ್ತೆರು ಹಾಗೂ ಎಫ್.ಪಿ.ಎ.ಐ ಸಿಬ್ಬಂದಿ ಭಾಗವಹಿಸಿದ್ದರು.
ಎಫ್.ಪಿ.ಎ.ಐ ನ ಕಾರ್ಯಕ್ರಮ ಅಧಿಕಾರಿ ಎನ್.ಎಫ್. ಮಡಿವಾಳರ ಸ್ವಾಗತಿದರು, ಬಸಮ್ಮಾ ದೇಸಾಯಿ ವಂದಿಸಿದರು, ಪ್ರಕಾಶ ಜೋಡಳ್ಳಿ ನಿರೂಪಿಸಿದರು.
120 ಕ್ಕೂ ಹೆಚ್ಚು ಮಕ್ಕಳು ಮತ್ತು ಪಾಲಕರು ಆರೋಗ್ಯವಂತ ಶಿಶು ಪ್ರದರ್ಶನ ಮತ್ತು ತಪಾಸಣೆಯಲ್ಲಿ ಭಾಗವಹಿಸಿದರು.
ಇದರಲ್ಲಿ ಸೌಮ್ಯಾ ಪಾಟೀಲ ಪ್ರಥಮ, ಓಜಸ್ ಪಟ್ಟಣಶೆಟ್ಟಿ ದ್ವಿತೀಯ ಹಾಗೂ ಅಕಿರಾ ಅಡಿಗಲ್, ಕಾರ್ತಿಕ ಬಾರಕೇರ ತೃತೀಯಬಹುಮಾನ ಪಡೆದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 