ಮೋದಿ ಮಾಧ್ಯಮಗಳಿಗೆ ಸಿಕ್ಕಿದ್ದಾರೆಯೇ? ಅವರನ್ನು ಯಾವಾಗ ಪ್ರಶ್ನೆ ಮಾಡುವಿರಿ: ಸಚಿವ ಗುಂಡೂರಾವ್
Has Modi been caught by the media? When will you question him: Minister Gundu Rao
ಮೋದಿ ಮಾಧ್ಯಮಗಳಿಗೆ ಸಿಕ್ಕಿದ್ದಾರೆಯೇ? ಅವರನ್ನು ಯಾವಾಗ ಪ್ರಶ್ನೆ ಮಾಡುವಿರಿ: ಸಚಿವ ಗುಂಡೂರಾವ್
ಕಾರವಾರ 30: ಪ್ರಧಾನಿ ಮೋದಿ ಮಾಧ್ಯಮಗಳಿಗೆ ಸಿಕ್ಕಿದ್ದಾರೆಯೇ ? ಅವರನ್ನು ಯಾವಾಗ ಪ್ರಶ್ನೆ ಮಾಡುವಿರಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಧ್ಯಮಗಳಿಗೆ ಪ್ರಶ್ನಿಸಿದ ಪ್ರಸಂಗ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.ಸಚಿವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ಬೇಡಿಕೆಗಳ ಬಗ್ಗೆ ನಾಗರಿಕರಿಂಎ ಅಹವಾಲು ಕೇಳಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.ಮೋದಿ ಒಮ್ಮೆಯೂ ಮಾಧ್ಯಮಗಳನ್ನು ಎದುರು ಗೊಂಡಿಲ್ಲ. ಬರೀ ಭಾಷಣ ಹೊಡೆಯುವುದು ,ಮನ್ ಕಿ ಬಾತ್ ಹೇಳಿ ಹೋಗ್ತಾರೆ. ಒಮ್ಮೆಯೂ ಮಾಧ್ಯಮಗಳಿಗೆ ಸಿಗದಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದರು.ಪುಲ್ವಾಮಾ ದಾಳಿಯ ಬಗ್ಗೆ,ಅದು ಯಾಕಾಗಿ ಆಯಿತು ಎಂದು ಯಾವುದೇ ಉತ್ತರ ನೀಡಿಲ್ಲವೆಂದು ಸಚಿವರು ಆರೋಪಿಸಿದರು.
ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿನಮ್ಮ 40 ಸೈನಿಕರು ಹುತಾತ್ಮರಾದ ಘಟನೆಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟನೆ ನೀಡಿಲ್ಲ.ಪಹಲ್ಗಾಮ್ ದಾಳಿಯಲ್ಲೂ ಉತ್ತರ ಸಿಗಲಿಲ್ಲ. ಪಾಕಿಸ್ತಾನವು ಭಾರತದ ಐದು ಯುದ್ಧವಿಮಾನಗಳನ್ನು ಹೊಡೆದು ಹಾಕಿದೆ ಎಂದು ಹೇಳಿತು. ಆದರೆ ಬಿಜೆಪಿ ಸರ್ಕಾರ ಇದುವರೆಗೆ ಸತ್ಯಾಂಶ ಬಹಿರಂಗಪಡಿಸಿಲ್ಲ ಎಂದರು.ಮೋದಿ ವಿಶ್ವಗುರು ಎಂದು ಹೇಳುತ್ತಾರೆ. ಆದರೆ ಅಕ್ಕಪಕ್ಕದ ದೇಶಗಳೂ ನಮ್ಮ ಪರ ನಿಲ್ಲುತ್ತಿಲ್ಲ, ಪಾಕ್ ಪ್ರಧಾನಿ ಅಮೆರಿಕಾ ಅಧ್ಯಕ್ಷರೊಂದಿಗೆ ಕಾಣಿಸಿಕೊಂಡಿದ್ದಾರೆ.ಹಾಗಿದ್ದರೆ ವಿಶ್ವಗುರು ಎಂದರೇನು? ಎಂದು ಪ್ರಶ್ನಿಸಿದರು.ಮೈಸೂರು ಮುಡಾ ಪ್ರಕರಣದಲ್ಲಿ ಈಡಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿರುವುದನ್ನು ಉಲ್ಲೇಖಿಸಿದ ಸಚಿವ ಗುಂಡೂರಾವ್, ಈಡಿ, ಐಟಿ, ಎಲೆಕ್ಷನ್ ಕಮಿಷನ್ ಎಲ್ಲವನ್ನೂ ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಂಡು ನಾಶ ಮಾಡುತ್ತಿದೆ ಆರೋಪಿಸಿದರು.ಬರಗಾಲ ಪರಿಹಾರ ಪಡೆಯಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗಬೇಕಾದ ಪರಿಸ್ಥಿತಿ ಉಂಟಾಯಿತು .ನಮ್ಮ ಪಾಲಿನ ಹಣ ಪಡೆಯಲು ಸುಪ್ರಿಂಕೋರ್ಟನಿಂದ ಕೇಂದ್ರ ಸರ್ಕಾರಕ್ಕೆ ಹೇಳಿಸಬೇಕಾಯಿತು. ಆ ಸನ್ನಿವೇಶದಲ್ಲಿ ರಾಜ್ಯದಿಂದ ಆರಿಸಿ ಹೋದ ಬಿಜೆಪಿ ಸಂಸದರು ತಮ್ಮ ಪಾಲಿನ ಹೊಣೆಗಾರಿಕೆ ನಿರ್ವಹಿಸಿದರೆ ? ಸಂಸದ ಕಾಗೇರಿ, ಸಚಿವ ಪ್ರಹ್ಲಾದ್ ಜೋಶಿ ದೆಹಲಿಯಲ್ಲಿ ಏನು ಮಾಡುತ್ತಿದ್ದಾರೆ? ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 