ಹಾದಿಮನಿ ಕಾಳಿಂಗವರ್ಧನ ಗೌರವ ಡಾಕ್ಟರೇಟ್ ಮತ್ತು ಸೇವಾ ರತ್ನ ಪ್ರಶಸ್ತಿ
ಕಂಪ್ಲಿ 03 : ತಾಲೂಕು ರೈಲ್ವೆ ಮಾರ್ಗಕ್ಕಾಗಿ ಕ್ರಿಯಾಸಮಿತಿ ಕಾರ್ಯದರ್ಶಿ ರಾಮಸಾಗರದ ಗ್ರಾಮೀಣ ಭಾಗದ ಹಾದಿಮನಿ ಕಾಳಿಂಗವರ್ಧನ ಇವರ ವ್ಯವಹಾರ ಮತ್ತು ಸಾಮಾಜಿಕ ಸೇವಕ ವಿವಿಧ ಕ್ಷೇತ್ರದಲ್ಲಿ ಸಾಧನೆ ಜೊತೆಗೆ ಸಮಾಜದ ಸೇವೆ ಗುರುತಿಸಿ, ಹೊಸೂರಿನ ಏಷಿಯಾ ಇಂಟರ್ ನ್ಯಾಷನಲ್ ರಿಸರ್ಚ್ ಅಕಾಡೆಮಿಯವರು ಶನಿವಾರ ಗೌರವ ಡಾಕ್ಟರೇಟ್‌ನೊಂದಿಗೆ 2026ರ ಗೋಲ್ಡನ್ ಐಕಾನಿಕ್ ಮತ್ತು ಸೇವಾ ರತ್ನ ಅವಾರ್ಡ್ ನೀಡಿ ಗೌರವಿಸಿದ್ದಾರೆ. ಪ್ರಮುಖರಾದ ಕೆ.ಎ.ಮನೋಕಾರನ್, ಡಾ.ಕೃಷ್ಣಮೂರ್ತಿ ಮಹಾಸ್ವಾಮೀಜಿ, ಡಾ.ಎ.ಶ್ರೀಧರ್, ಡಾ.ಕೆ.ಎಸ್.ಸುಬ್ರಹ್ಮಣ್ಯಂ, ಆರ್.ಬಿ.ಪಾಟೀಲ್, ಡಾ.ವೈಭವ್ ಗುಣಶೇಖರ, ಡಾ.ಕರುಪಣ್ಣ ಸ್ವಾಮೀಜಿ ಇತರರಿದ್ದರು.