ಹೂವಿನ ಹಡಗಲಿ

ಮಠಮಾನ್ಯಗಳಿಂದ ಶೈಕ್ಷಣಿಕ ಕ್ರಾಂತಿ ಮಾಡಿವೆ: ಗುರುಶಾಂತ ಶ್ರೀ

ಮಠಮಾನ್ಯಗಳಿಂದ ಶೈಕ್ಷಣಿಕ ಕ್ರಾಂತಿ ಮಾಡಿವೆ: ಗುರುಶಾಂತ ಶ್ರೀ

ಲೋಕದರ್ಶನ ವರದಿ

ಹೂವಿನಹಡಗಲಿ 10: ಈ ನಾಡಿನ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಮಠಮಾನ್ಯಗಳಿಂದ ಶಿಕ್ಷಣ ಕ್ರಾಂತಿ ಆಗಿವೆ. ಜತೆಗೆ ಎಲ್ಲ ಜಾತಿಯ ಬಡವರ ಮಕ್ಕಳಿಗೆ ನೂರಾರು ವರ್ಷಗಳಿಂದ ಶಿಕ್ಷಣ,ಊಟ,ವಸತಿ ನೀಡಿ ಮೂಲಭೂತ ಸೌಕರ್ಯ ನಿರಂತರವಾಗಿ ಒದಗಿಸಿವೆ ಎಂದು ನೆಗಳೂರು ಹಿರೇಮಠದ ಗುರುಶಾಂತ ವೀರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

  ಪಟ್ಟಣದ ಗವಿಸಿದ್ದೇಶ್ವರ ಶಾಖಾಮಠದ ಜಾತ್ರಾಮಹೋತ್ಸವದ ಅಂಗವಾಗಿ ಬುಧವಾರ ಸಂಜೆ ಆಯೋಜಿಸಿದ್ದ ಧರ್ಮಸಭೆಯಲ್ಲಿ ಮಾತನಾಡಿ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿವೆ.ಧಾರ್ಮಿಕ,ಆಧ್ಯಾತ್ಮಿಕ,ಸಾಂಸ್ಕೃತಿಕ ಕೇಂದ್ರಗಳಾಗಿವೆ.ಪಾಲಕರು ತಮ್ಮ ಭವಿಷ್ಯದ ಮಕ್ಕಳಿಗೆ ಪಠ್ಯೆದ ಜತೆಗೆ ಸಂಸ್ಕಾರವನ್ನು ಕಲಿಸಿ ಎಂದ ಅವರು ಆಧುನಿಕತೆಯ ಪ್ರಭಾವದಿಂದ ಮಕ್ಕಳ ಭವಿಷ್ಯದ ಅಲೋಚನೆಗಳನ್ನು ಬದಿಗೆ ತಳ್ಳುತ್ತಿದ್ದಾರೆ.ನಾವು ಅವರಿಗೆ ಗುಣಮಟ್ಟದ ಶಿಕ್ಷಣ ನೀಡಿ, ಬದುಕಿನ ಅರಿವು ತಿಳಿಸಬೇಕಾಗಿದೆ ಜತೆಗೆ ಅಸಹಾಯಕರಿಗೆ ಮತ್ತು ಹಸಿದವರಿಗೆ ಸಹಾಯ ಮಾಡುವಂತಹ ಗುಣಗಳನ್ನು ನಾವು ಬೆಳೆಸಿಕೊಳ್ಳಬೇಕು ಎಂದರು.

'ಸಮಾನಾಂತರ' ಬ್ರಹ್ಮಾಂಡದಲ್ಲಿ ಮತ್ತು 'ಭವ್ಯ ಚೇತನ' ಎಂಬ ಪುಸ್ತಕಗಳನ್ನು ಬಿಡುಗಡೆ ಗೊಳಿಸಿ ಮಾತನಾಡಿದ ಇಸ್ರೋ ವಿಜ್ಞಾನಿ ಶ್ರೀನಾಥ ರತ್ನಕುಮಾರ ಪುಸ್ತಕಗಳನ್ನು ರಚಿಸಿದ ಚೇತನ್ ಅವರ ಸಾಹಿತ್ಯ ಪ್ರೇಮ ಶ್ಲಾಘಸಿದರು.ಮೂಲ ಸಾಪ್ಟ್ ವೇರ್ ಉದ್ಯೋಗಿಯಾದರೂ ಶ್ರೀನಾಥ ಅವರಲ್ಲಿ ಸಾಹಿತ್ಯದ ಒಲವು ಬೆಳೆಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ವಿಜ್ಞಾನ ಮತ್ತು ಮಾನವೀಯ ಮೌಲ್ಯಗಳನ್ನು ಬೆರೆಸಿ ಬರೆದಿರುವ ಈ ಕೃತಿಗಳನ್ನು ನಾನು ಓದಿದಾಗ ವಿಜ್ಞಾನಿಯಾದ ನನಗೆ ಆಶ್ಚರ್ಯವಾಯಿತು. ಅಂತಹ ವೈಜ್ಞಾನಿಕ, ವೈಚಾರಿಕ ಮನೋಭಾವ ಉಳ್ಳ ಚೇತನ್ ಮುಂದಿನ ದಿನಗಳಲ್ಲಿ ಶ್ರೇಷ್ಠ ಸಾಹಿತಿಯಾಗಲಿ ಎಂದರು.

ಗವಿಮಠದ ಡಾ.ಹಿರಿಯಶಾಂತವೀರ ಸ್ವಾಮೀಜಿ, ಇಟ್ಟಿಗಿ ಮೇಲುಗದ್ದುಗೆ ಮಠದ  ಗುರುಶಾಂತವೀರ ಸ್ವಾಮೀಜಿ, ಹಾವನೂರು ದಳವಾಯಿ ಮಠದ ಶಿವಕುಮಾರ ಸ್ವಾಮೀಜಿ,ಎಂಜಿನೀಯರ್ ಚೇತನ್ ಇದ್ದರು.


 

ಸುದ್ದಿ ಓದಿ