ದೇವಗಿರಿ ಸಮೂಹ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ
Devgiri Group Level Talent Fountain Programme
ಹಾವೇರಿ 22: ತಾಲೂಕಿನ ದೇವಗಿರಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಳೂರ ಇಲ್ಲಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸಿ ಹಾಗೂ ಡೋಲು ಬಾರಿಸುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹದೇವಪ್ಪ ಡಿ ಎಂ ಅವರು ಉದ್ಘಾಟಿಸಿದರು.ಮಕ್ಕಳಲ್ಲಿ ಸೂಕ್ತವಾಗಿರುವ ಪ್ರತಿಭೆಯನ್ನು ಹೊರ ತೆಗೆಯಲು ಪ್ರತಿಭಾ ಕಾರಂಜಿ ಅತ್ಯಂತ ಸೂಕ್ತವಾದಂತ ವೇದಿಕೆಯಾಗಿದೆ. ಮಕ್ಕಳು ಚಟುವಟಿಕೆ ಜೊತೆಗೆ ಪಾಲ್ಗೊಂಡು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಬೇಕು ಎಂದು ಹೇಳಿದರು. ಬೇರೆ ಬೇರೆ ಕ್ಲಸ್ಟರ್ ಇಂದ ಆಗಮಿಸಿದ ನಿರ್ಣಾಯಕ ಶಿಕ್ಷಕರನ್ನು ಒಂದೆಡೆ ಸಭೆ ಸೇರಿಸಿ ಸ್ಪರ್ಧೆಗಳನ್ನು ನಡೆಸಲು ಅನುವು ಮಾಡಿಕೊಡಲಾಯಿತು.
ತಮಗೆ ನಿರ್ವಹಿಸಿದ ಸ್ಪರ್ಧಿಗಳನ್ನು ಕಂಠಪಾಠ ಕನ್ನಡ,ಇಂಗ್ಲಿಷ್,ಹಿಂದಿ, ಧಾರ್ಮಿಕ ಪಠಣ, ಸಂಸ್ಕೃತ ಮತ್ತು ಅರೇಬಿಕ್ ,ದೇಶಭಕ್ತಿ ಗೀತೆ, ಭಕ್ತಿಗೀತೆ, ಛದ್ಮವೇಷ ಮುಂತಾದ ಸ್ಪರ್ಧೆಗಳಲ್ಲಿ ಮಕ್ಕಳು ಅತ್ಯುತ್ಸಾಹದಿಂದ ಭಾಗವಹಿಸಿದರು. ಸ್ಪರ್ಧೆಗೆ ಬಂದಿದ್ದ ಎಲ್ಲಾ ಮಕ್ಕಳಿಗೂ ಶಿಕ್ಷಕರಿಗೂ ಹಾಗೂ ಮಕ್ಕಳೊಂದಿಗೆ ಬಂದಿರುವ ಎಲ್ಲಾ ತಾಲೂಕು ಪೋಷಕರಿಗೂ ಗ್ರಾಮಸ್ಥರು ಹಾಗೂ ಎಸ್ ಡಿ ಎಂ ಸಿಯವರು ಸಿಹಿ ಭೋಜನ ವ್ಯವಸ್ಥೆ ಮಾಡಿದ್ದರು. ಅಲ್ಲದೆ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ವಿತರಿಸಲಾಯಿತು. ಮಕ್ಕಳೆಲ್ಲರೂ ಸಂತೋಷದಿಂದ ಪ್ರಶಸ್ತಿ ಪತ್ರ ಮತ್ತು ಪದಕಗಳೊಂದಿಗೆ ತಮ್ಮೊಂದಿಗೆ ಬಂದಿದ್ದ ಶಿಕ್ಷಕ ಶಿಕ್ಷಕಿಯರೊಂದಿಗೆ ತಮ್ಮ ತಮ್ಮ ಶಾಲೆಗಳಿಗೆ ಸುರಕ್ಷಿತವಾಗಿ ಮರಳಿದರು , ಕಾರ್ಯಕ್ರಮದ ಯಶಸ್ವಿಗಾಗಿ ಇಲಾಖೆಯ ಅಧಿಕಾರಿಗಳು ಶಿಕ್ಷಕರು, ಗ್ರಾಮಸ್ಥರು ಮತ್ತು ಎಸ್‌ಡಿಎಂಸಿ ಅವರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ್ ಕರಿಗಾರಿ್ಶಕ್ಷಣ ಸಂಯೋಜಕ ಎಸ್ ಆರ್ ಹಿರೇಮಠ, ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಕಾಂತ್ ದೊಡ್ಡಕುರುಬರ,ಎಸ್ ಡಿ ಎಂ ಸಿ ಅಧ್ಯಕ್ಷ ಹಸನ್ ಸಾಬ್ ಮುಂದಿನಮನಿ,ಉರ್ದು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಖಾಸಿಂಸಾಬ್ ಮುಂದಿನಮನಿ, ಉಪಾಧ್ಯಕ್ಷರಾದ ಶ್ರೀಮತಿ ಯಶೋಧ ಚಂದ್ರ್ಪ ತಳಗೇರಿ, ಪ್ರಧಾನ ಗುರುಗಳಾದ ಎಂ ಕೆ ಹೊನ್ನಜ್ಜೇರ,ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ನಿಂಗಪ್ಪ ಹುಲಮನಿ ಶಿವಣ್ಣ ಹುರಳಿ , ಎಲ್ಲಪ್ಪ ಏರಿಮನಿ,ರಾಜಪ್ಪ ದನ್ನಣ್ಣನವರ ಊರಿನ ಗಣ್ಯರಾದ ಶಂಕರ್ ಗೌಡ ಪಾಟೀಲ್ ಎಸ್‌ಡಿಎಂಸಿ ಸದಸ್ಯರಾದ ಸಣ್ಣಪ್ಪ ಮ್ಯಾಗಳಕೇರಿ, ವಿನಾಯಕ್ ಮಾಗಾವಿ, ಪುಟ್ಟಪ್ಪ ಏರಿಮನಿ, ಶಿವಲಿಂಗಪ್ಪ ಕಾಮಣಿ, ರೇಖಾ ಮಂಡಗಣಿ ಹಾಗೂ ಬಿಐಇಆರ್ಟಿ ವಾಯ್ ಹೊಸಮನಿ,ಮಾಲತೇಶ ಕಮ್ಮಾರ ಮುಂತಾದವರು ಭಾಗಹಿಸಿದ್ದರು. ಶಿಕ್ಷಕ ಬಿ ಬಿ ನಾಣಾಪುರ ನಿರ್ವಹಿಸಿದರು. ನಾಗರಾಜ್ ಹುಡೇದ ಸ್ವಾಗತಿಸಿದರು. ಎಸ್ ಪಿ ಬೆಳ್ಳಟ್ಟಿಮಠ ವಂದಿಸಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 