ಸಚಿವ ಜೋಶಿ ಅನುಧಾನದಿಂದ ಗ್ರಾಮದೇವಿ ದೇವಸ್ಥಾನ ಅಭಿವೃದ್ಧಿ
Development of Grama Devi Temple under the care of Minister Joshi
ಶಿಗ್ಗಾವಿ 22 : ಸದಾ ಗ್ರಾಮೀಣ ಅಭಿವೃದ್ಧಿ, ಧಾರ್ಮಿಕ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ಜನಕಲ್ಯಾಣಕ್ಕೆ ಆದ್ಯತೆ ನೀಡುತ್ತಿರುವ ಸಚಿವರ ಎಂ.ಪಿ.ಎಲ್.ಎ.ಡಿ ನಿಧಿಯಿಂದ ದೊರೆತ ಈ ಅನುದಾನವು ಹುಲಗೂರ ಗ್ರಾಮದ ಸಮಗ್ರ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಪುತ್ರಣ್ಣ ಹೊನ್ನಣ್ಣನವರ ಹೇಳಿದರು. ತಾಲೂಕಿನ ಹುಲಗೂರ ದೇವಿಯ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸಾಂಸ್ಕೃತಿಕ ಭವನ ನಿರ್ಮಾಣ ಕಾರ್ಯಕ್ಕೆ ಮಹತ್ವದ ಮುನ್ನಡೆ ದೊರೆತಿದ್ದು, ಈ ಕಾರ್ಯಕ್ಕಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಎಂ.ಪಿ.ಎಲ್.ಎ.ಡಿ ನಿಧಿಯಿಂದ ರೂ15 ಲಕ್ಷ ಅನುಧಾನ ಮಂಜೂರಾಗಿದೆ.
ಈ ಭವನವು ಯುವಕರು, ಮಹಿಳಾ ಸಂಘಗಳು ಹಾಗೂ ಗ್ರಾಮಸ್ಥರ ಸಾಮಾಜಿಕ ಚಟುವಟಿಕೆಗಳಿಗೆ ಸಹ ವೇದಿಕೆಯಾಗಲಿದ್ದು, ಗ್ರಾಮದಲ್ಲಿ ಸಂಸ್ಕೃತಿ ಮತ್ತು ಏಕತೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಚುನಾವಣಾ ಪೂರ್ವದಲ್ಲಿ ಕೆಂದ್ರ ಸಚಿವರು ಮಾತು ಕೊಟ್ಟಂತೆ ನಡೆದಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪುತ್ರಣ್ಣ ಹೊನ್ನಣ್ಣವರ,ಬಸಣ್ಣ ಪಟ್ಟಣ ಶೆಟ್ಟರ, ಮನೋಹರ ಕುಲಕರ್ಣಿ,ಶೇಖಣ್ಣ ಗಣಾಚಾರಿ, ಚಂದ್ರು ಆಚೇಬಣದ,ರುದ್ರಯ್ಯ ತವರಿ ಮಠ, ಜಗದೀಶ ತವರಿಮಠ ಗ್ರಾಮದ ಹಿರಿಯರು, ದೇವಾಲಯ ಸಮಿತಿ ಸದಸ್ಯರು ಹಾಗೂ ಭಕ್ತವೃಂದ ಉಪಸ್ಥಿತರಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 